ಭ್ರಷ್ಟಾಚಾರ ಮುಕ್ತ ಸಮಾಜ ಪುತ್ತೂರಿನಿಂದ ಆರಂಭವಾಗಲಿ – ನಾನು ಕೂಡಾ ಪೂರ್ತಿ ಬೆಂಬಲ ನೀಡುತ್ತೇನೆ ಶಾಸಕ ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಯಾವುದೇ ಭ್ರಷ್ಟಾಚಾರ ಕಂಡು ಬಂದರೆ ಅಂತರವರ ಬಗ್ಗೆ ನಿರ್ದಾಕ್ಷೀಣ್ಯವಾಗಿ ಕ್ರಮ ತೆಗೆದು ಕೊಂಡು ಸರಕಾರದ ವತಿಯಿಂದ ಜನಪ್ರತಿನಿಧಿಯಾಗಿ ನಾನು ಬದ್ದನಾಗಿದ್ದೇನೆ. ಭ್ರಷ್ಟಾಚಾರ ಮುಕ್ತ ಸಮಾಜ ಇರಬೇಕೆಂದು ಸುದ್ದಿಯಿಂದ ಮಾಡುತ್ತಿರುವ ಆಂದೋಲನಕ್ಕೆ ಶಾಸಕನಾಗಿ ನಾನು ಕೂಡಾ ಪೂರ್ತಿ ಬೆಂಬಲ ನೀಡುತ್ತೇನೆ ಎಂದು ಶಾಸಕ ಸಂಜೀವ ಮಠಂದೂರು ಅವರು ಹೇಳಿದ್ದಾರೆ.

ಪುತ್ತೂರಿನಲ್ಲಿ ಸುದ್ದಿ ಪತ್ರಿಕೆಯ ಡಾ. ಯು.ಪಿ.ಶಿವಾನಂದ ಅವರ ಮುಖಾಂತರ ಭ್ರಷ್ಟಾಚಾರ ನಿರ್ಮೂಲ ಮಾಡುವ ಆಂದೋಲನ ಆರಂಭ ಮಾಡುವ ಮೂಲಕ ಈಗಾಗಲೇ ನ್ಯಾ.ಮೂ ಸಂತೋಷ್ ಹೆಗ್ಡೆಯವರುನ್ನು ಪುತ್ತೂರಿಗೆ ಬರಮಾಡಿಸಿ. ಸಾಮಾಜಿಕ ಪಿಡುಗಿನ ರೀತಿಯಲ್ಲಿ ಬೆಳೆದಿರುವ ಭ್ರಷ್ಟಾಚಾರವನ್ನು ತೊಲಗಿಸಲು ಮತ್ತು ಸ್ವಾಸ್ತ್ಯ ಸಮಾಜ ನಿರ್ಮಾಣ ಮಾಡುವುದಲ್ಲದೆ ಇವತ್ತಿನ ಅಗತ್ಯತೆ ಎಂಬ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಭ್ರಷ್ಟಾಚಾರ ಮುಕ್ತ ಸಮಾಜ ಇರಬೇಕೆಂದು ಮಾಡುತ್ತಿರುವ ಆಂದೋಲನಕ್ಕೆ ಭ್ರಷ್ಟಾಚಾರ ಎಂಬ ಲಂಚನ್ನು ಸುಡುವ ಮೂಲಕ ಈ ಸಮಾಜ ಗಾಂಧಿ ಕಂಡತಹ ಒಂದು ದುಷ್ಚಟಮುಕ್ತ ಸಮಾಜ, ಭ್ರಷ್ಚಾಚಾರ ಮುಕ್ತ ಸಮಾಜ ಅದು ಪುತ್ತೂರಿನಿಂದ ಆರಂಭ ಆಗಲಿ. ಇದಕ್ಕೆ ಶಾಸಕನಾಗಿ ನಾನು ಕೂಡಾ ಪೂರ್ತಿ ಬೆಂಬಲ ಕೊಡುತ್ತೇನೆ ಎಂದ ಅವರು ಯಾವುದೇ ಭ್ರಷ್ಟಾಚಾರಾ ಕಂಡು ಬಂದರೆ ಅಂತರವರ ಬಗ್ಗೆ ನಿರ್ದಾಕ್ಷೀಣ್ಯವಾಗಿ ಕ್ರಮ ತೆಗೆದು ಕೊಂಡು ಸರಕಾರದ ವತಿಯಿಂದ ಜನಪ್ರತಿನಿಧಿಯಾಗಿ ನಾನು ಬದ್ದನಾಗಿದ್ದೇನೆ. ಅದರ ಜೊತೆಗೆ ಶಾಸಕರ ಬಗ್ಗೆ ಅಂತಹ ಏನಾದರೂ ಇದ್ದರೆ ನೇರವಾಗಿ ಮುಕ್ತವಾಗಿ ಮಾತನಾಡಿ ಸಮಸ್ಯೆ ಬಗೆ ಹರಿಸಲು ಬದ್ದರಾಗಿದ್ದೇನೆ. ಯಾಕೆಂದರೆ ನಾವು ಕೂಡಾ ಜೀವನದಲ್ಲಿ ಭ್ರಷ್ಚಾಚಾರ ಮುಕ್ತ ವ್ಯವಸ್ಥೆ ಇರಬೇಕೆಂದು ರಾಜಕೀಯಕ್ಕೆ ಬಂದು ಇವತ್ತು ಪ್ರತಿನಿಧಿಯಾಗಿ ಈ ಸಮಾಜದ ಕಟ್ಟಕಡೆಯ ವ್ಯಕ್ತಿ ಕೂಡಾ ಭ್ರಷ್ಟಾಚಾರ ಮುಕ್ತ ಸ್ವಾಭಿಮಾನಿಯುತ ಬದುಕು ವ್ಯವಸ್ಥೆ ಆಗಬೆಕೆಂದು ನಮ್ಮ ಆಶಯ. ಅದಕ್ಕೆ ಪೂರಕವಾಗಿ ಸುದ್ದಿ ಪತ್ರಿಕೆ ಮಾಡುವ ಆಂದೋಲನದಿಂದ ಜನರ ಪೂರ್ತಿ ಬೆಂಬಲವಾಗಿ ಪುತ್ತೂರು ತಾಲೂಕು ಮಾದರಿ ತಾಲೂಕು ಆಗಿ ಜನರ ಹಿತವನ್ನು ಕಾಪಾಡುವ ಸಂಗತಿ ಆಗಲಿ ಎಂದರು.

 

ಭ್ರಷ್ಟಾಚಾರ ಅಧಿಕಾರಿಗಳ ವರ್ಗಾವಣೆ
ಇಲಾಖೆಗಳ ಬಗ್ಗೆ ಬಹಳಷ್ಟು ಜನರ ದೂರುಗಳು ಬರುತ್ತಿವೆ. ಒಂದು ಹಂತದಲ್ಲಿ ಕಾಲಮಿತಿಯಲ್ಲಿ ತಮ್ಮ ಕೆಲಸಗಳು ಆಗುವುದಿಲ್ಲ ಎಂದಾದರೆ ಇನ್ನೊಂದು ಕಡೆ ಭ್ರಷ್ಟಾಚಾರದಿಂದ ಕೆಲಸ ಕಾರ್ಯ ಆಗುತ್ತಿಲ್ಲ ಎಂಬ ದೂರುಗಳು ಬರುತ್ತಿವೆ. ಅದರಲ್ಲಿ ವಿಶೇಷವಾಗಿ ಕಂದಾಯ ಇಲಾಖೆ ಯಾವ ಯಾವ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಮತ್ತು ಜನರ ಕೆಲಸವನ್ನು ಕ್ಲಪ್ತ ಸಮಯದಲ್ಲಿ ಮಾಡದಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದು ಮಾತ್ರವಲ್ಲ ಭ್ರಷಾಚಾರ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಕೆಲಸ ಮಾಡುತ್ತಿದ್ದೇವೆ – ಸಂಜೀವ ಮಠಂದೂರು ಶಾಸಕರು ಪುತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.