ದ.ಕ ಜಿಲ್ಲಾ ತೆಂಗು ರೈತ ಉತ್ಪಾದಕರ ಕಂಪನಿಯ ವೆಬ್‌ಸೈಟ್ ಬಿಡುಗಡೆ

ದ.ಕ ಜಿಲ್ಲಾ ತೆಂಗು ರೈತ ಉತ್ಪಾದಕರ ಕಂಪನಿಯ ವೆಬ್‌ಸೈಟ್ ಬಿಡುಗಡೆ

ಪುತ್ತೂರು:ದ.ಕ ಜಿಲ್ಲೆಯಲ್ಲಿ ತೆಂಗು ಕೃಷಿಕರಿಗೆಂದೇ ಹುಟ್ಟಿಕೊಂಡು, ವಿಟ್ಲದಲ್ಲಿ ಕೇಂದ್ರ ಕಛೇರಿ ಹೊಂದಿರುವ `ದ.ಕ ಜಿಲ್ಲಾ ತೆಂಗು ರೈತ ಉತ್ಪಾದಕರ ಸಂಸ್ಥೆ’ಯ ಅಧಿಕೃತ ವೆಬ್‌ಸೈಟ್‌ನ್ನು ನೆಟ್ಟಣದ ಕಿದುವಿನಲ್ಲಿರುವ ಭಾರತ ಸರಕಾರದ ಸಂಸ್ಥೆ ಐಸಿಎಆರ್, ಸಿಪಿಸಿಆರ್‌ಐ ತೆಂಗು ಸಂಶೋಧನಾ ಕೇಂದ್ರದಲ್ಲಿ ಜ.೧೦ರಂದು ನಡೆದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು.
ಐಸಿಎಆರ್, ಸಿಪಿಸಿಆರ್‌ಐಯ ಮುಖ್ಯಸ್ಥರಾದ ಅನಿತಾ ಕರುಣ್‌ರವರು ವೆಬ್‌ಸೈಟ್‌ನ್ನು ಬಿಡುಗಡೆಗೊಳಿಸಿದರು. ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಮೋಹನ್‌ರಾಮ್ ಸುಳ್ಳಿ, ವಿಜ್ಞಾನಿಗಳಾದ ಡಾ. ಯದುಕುಮಾರ್, ಡಾ. ದಿವಾಕರ್, ಡಾ. ಹೆಬ್ಬಾರ್, ಡಾ. ನಾಗರಾಜ್, ಡಾ. ನಿರಾಲ್, ತೆಂಗು ರೈತ ಸಂಸ್ಥೆಯ ಅಧ್ಯಕ್ಷ ಪ್ರಸಾದ್ ಶೆಟ್ಟಿ, ಉಪಾಧ್ಯಕ್ಷ ಕುಸುಮ್‌ರಾಜ್ ಮತ್ತು ಸಿಬಂದಿ ವರ್ಗದವರು, ರೈತರು ಮತ್ತು ವಿಟ್ಲ ಕಾಸರಗೋಡು ಕೀಡು ಸಿಪಿಸಿಆರ್‌ಐಯ ವಿಜ್ಞಾನಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ದ.ಕ ಜಿಲ್ಲಾ ತೆಂಗು ರೈತ ಸಂಸ್ಥೆ ಸುಳ್ಯ ತಾಲೂಕಿನಲ್ಲಿ ಮಾಹಿತಿ ಕಛೇರಿಯನ್ನು ಈಗಾಗಲೇ ತೆರೆದಿದ್ದು, ಮುಂದಿನ ದಿನಗಳಲ್ಲಿ ೪ ಜಿಲ್ಲೆಗಳಲ್ಲಿ ಕಛೇರಿ ಯನ್ನು ತೆರೆಯಲಿದೆ. ಸಂಸ್ಥೆಯ ಮಾಹಿತಿ ಹಾಗೂ ವಿವರಗಳನ್ನು ಸಂಸ್ಥೆ ವೆಬ್‌ಸೈಟ್ www.coconutfarmers.in ತಿಳಿದುಕೊಳ್ಳಬಹುದು.

ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ವಿಜ್ಞಾನಿಗಳಾದ ಡಾ| ಯದುಕುಮಾರ್, ಡಾ|ದಿವಾಕರ್, ಡಾ| ಹೆಬ್ಬಾರ್, ಡಾ| ನಾಗರಾಜ್, ಡಾ| ನಿರಾಲ್, ತೆಂಗು ರೈತ ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು, ಮತ್ತು ಸಿಬಂದಿ ವರ್ಗದವರು, ರೈತರು ಮತ್ತು ವಿಟ್ಲ ಕಾಸರಗೋಡು ಕಿದು ಸಿಪಿಸಿಆರ್‌ಐನ ವಿಜ್ಞಾನಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಈಗಾಗಲೇ ದ.ಕ ಜಿಲ್ಲಾ ತೆಂಗು ರೈತ ಸಂಸ್ಥೆಯಿಂದ ಸುಳ್ಯ ತಾಲೂಕಿನಲ್ಲಿ ಮಾಹಿತಿ ಕಛೇರಿ ತೆರೆದಿದ್ದು ಅತೀ ಶೀಘ್ರದಲ್ಲಿ ೪ ಜಿಲ್ಲೆಗಳಲ್ಲಿ ಕಛೇರಿಯನ್ನು ತೆರೆಯಲಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.