ಫಿಲೋಮಿನಾದಲ್ಲಿ ಮಂಗಳೂರು ವಿವಿ ಪುರುಷರ ಅಂತರ್-ಕಾಲೇಜು ಲೆದರ್‌ಬಾಲ್ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಸಮಾಜಕ್ಕೆ ಪರಿಚಯಿಸಿದ ಕೀರ್ತಿ ಫಿಲೋಮಿನಾಗಿದೆ-ರತ್ನಾಕರ್ ರೈ

ಪುತ್ತೂರು: ಬಹಳಷ್ಟು ಇತಿಹಾಸವನ್ನು ಹೊಂದಿರುವ ಈ ಫಿಲೋಮಿನಾ ವಿದ್ಯಾದೇಗುಲವು ವಿವಿಧ ಕ್ಷೇತ್ರಗಳಲ್ಲಿ ಅನೇಕ ಪ್ರತಿಭಾನ್ವಿತರನ್ನು ಉದ್ಭವಿಸಿದೆ. ಅದರಂತೆ ಫಿಲೋಮಿನಾದ ಐತಿಹಾಸಿಕ ಕ್ರೀಡಾಂಗಣವು ಅನೇಕ ಪ್ರತಿಭಾನ್ವಿತ ರಾಷ್ಟ್ರೀಯ ಹಾಗೂ ಅಂತರ್ರಾಷ್ಟ್ರೀಯ ಕ್ರೀಡಾಪಟುಗಳನ್ನು ಸಮಾಜಕ್ಕೆ ಪರಿಚಯಿಸಿದ ಕೀರ್ತಿಯೂ ಈ ಫಿಲೋಮಿನಾ ವಿದ್ಯಾಸಂಸ್ಥೆಗಿದೆ ಎಂದು ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಪದ್ಮಶ್ರೀ ಗ್ರೂಪ್‌ನ ರತ್ನಾಕರ್ ರೈ ಕೆದಂಬಾಡಿಗುತ್ತುರವರು ಹೇಳಿದರು.


ಜ.10ರಂದು ಫಿಲೋಮಿನಾ ಕಾಲೇಜಿನ ಕ್ರೀಡಾಂಗಣದಲ್ಲಿ ಜರಗಿದ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ ಹಾಗೂ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಕಾಲೇಜು ಇವುಗಳ ಜಂಟಿ ಆಶ್ರಯದಲ್ಲಿ ಮಂಗಳೂರು ವಲಯ ಹಾಗೂ ಅಂತರ್ ವಲಯವನ್ನೊಳಗೊಂಡ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್-ಕಾಲೇಜು ಪುರುಷರ ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ “ಶ್ರೀ ಮೂಲ್ಕಿ ದಯಾನಂದ್ ಕಾಮತ್ ರೋಲಿಂಗ್ ಟ್ರೋಫಿ”ಯ ಉದ್ಘಾಟನಾ ಸಮಾರಂಭದಲ್ಲಿ ಅವರು ಟೂರ್ನಮೆಂಟ್‌ನ್ನು ದೀಪ ಬೆಳಗಿಸಿ ಉದ್ಘಾಟಿಸುವ ಮೂಲಕ ಮಾತನಾಡಿದರು. ಕ್ರಿಕೆಟ್ ಅನ್ನುವುದು ಕೆಲವರಿಗೆ ಆಡುವುದು, ಕೆಲವರಿಗೆ ಮನರಂಜನೆ, ಕೆಲವರಿಗೆ ವ್ಯಾಯಾಮ, ಕೆಲವರಿಗೆ ಸಂಘಟನೆಗಳು ಮಾಡುವಂತಹ ಜಾಹಿರಾತಿನ ಮೂಲಕ ಗುರುತಿಸಿಕೊಳ್ಳುವುದಾಗಿದೆ. ಸಿನೆಮಾ ಕ್ಷೇತ್ರದಲ್ಲಿ ತಾರೆಗಳಿಗೆ ಹೇಗೆ ಅಭಿಮಾನಿಗಳು ಇದ್ದಾರೋ ಹಾಗೆಯೇ ಕ್ರಿಕೆಟ್ ರಂಗದಲ್ಲಿಯೂ ಕ್ರಿಕೆಟಿಗರಿಗೆ ಅನೇಕ ಅಭಿಮಾನಿಗಳು ಇದ್ದಾರೆ. ನಮ್ಮ ಬದುಕಿಗೆ ಅನೇಕ ಸನ್ನಿವೇಶದಲ್ಲಿ ಪಾಠವನ್ನು ಕಲಿಸುವ ಚಾತುರ್ಯತೆ ಈ ಕ್ರಿಕೆಟ್ ಆಟಗಿದೆ ಎಂದ ಅವರು ಫಿಲೋಮಿನಾ ವಿದ್ಯಾಸಂಸ್ಥೆಯು ಕೇವಲ ಕ್ರೀಡೆಯಲ್ಲಿ, ಶಿಕ್ಷಣದಲ್ಲಿ ತೊಡಗಿಸಿಕೊಂಡಿಲ್ಲ, ಬದಲಾಗಿ ಬಹಳಷ್ಟು ಸಂಘಟನೆಗಳಿಗೆ ಪಾಸಿಟಿವ್ ಎನರ್ಜಿ ಮೂಲಕ ಪ್ರೇರಣೆ ನೀಡುವಲ್ಲಿ ಮಹತ್ತರ ಪಾತ್ರ ವಹಿಸಿದೆ ಕೂಡ. ಫಿಲೋಮಿನಾ ವಿದ್ಯಾದೇಗುಲವು ಸಮಾಜಮುಖಿ ಕಾರ್ಯಗಳಲ್ಲಿಯೂ ತೊಡಗಿಸಿಕೊಳ್ಳುವ ಮೂಲಕ ವಿಶ್ವವಿದ್ಯಾನಿಲಯದಲ್ಲಿ ಮಾದರಿ ವಿದ್ಯಾಸಂಸ್ಥೆಯಾಗಿ ಮೂಡಿ ಬಂದಿದೆ ಎಂದು ಅವರು ಹೇಳಿದರು.


ಅಧ್ಯಕ್ಷತೆ ವಹಿಸಿದ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಲಾರೆನ್ಸ್ ಮಸ್ಕರೇನ್ಹಸ್‌ರವರು ಮಾತನಾಡಿ, ಪ್ರತಿಯೋರ್ವರಿಗೆ ದೇವರು ವಿವಿಧ ಪ್ರತಿಭೆಗಳನ್ನು ಕರುಣಿಸಿರುತ್ತಾನೆ. ನಮ್ಮಲ್ಲಿರುವ ಶಕ್ತಿ, ಸಮಯ ಹಾಗೂ ಪ್ರತಿಭೆಗಳು ಉತ್ತಮ ಸಮಾಜ ಕಟ್ಟುವಲ್ಲಿ ಪೂರಕವಾಗಿ ಪರಿಣಮಿಸಬೇಕಿದೆ. ವಿದ್ಯಾರ್ಥಿ ದೆಸೆಯಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಬೆಳಗಿಸುವುದಲ್ಲದೆ ಸಮಾಜಮುಖಿ ಚಿಂತನೆಯನ್ನು ಕೂಡ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದ ಏಳಿಗೆಗಾಗಿ ನಮ್ಮಲ್ಲಿ ಸ್ವಾರ್ಥ ಬಿಟ್ಟು ನಮ್ಮಲ್ಲಿ ಒಳಿತು, ಒಗ್ಗಟ್ಟು ಹಾಗೂ ಒಮ್ಮನ್ನಸ್ಸು ಮನೆ ಮಾಡಬೇಕು ಎಂದರು.

 ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಸ್ಟ್ಯಾನಿ ಪಿಂಟೋರವರು ಮಾತನಾಡಿ, ಚಾರಿತ್ರಿಕ ಸಂಸ್ಥೆ ಎನಿಸಿರುವ ಫಿಲೋಮಿನಾ ವಿದ್ಯಾಸಂಸ್ಥೆಗೆ ಅದರದ್ದೇ ಆದಂತಹ ಸ್ಥಾನಮಾನವಿದೆ. ಕಾಲೇಜು ಸ್ಥಾಪನೆಯಾದಾಗಿನಿಂದ ಇಂದಿನವರೆಗೂ ಈ ಫಿಲೋಮಿನಾ ಸಂಸ್ಥೆಯು ಕ್ರೀಡೆಯಲ್ಲಿ ಬಹಳಷ್ಟು ಸಾಧನೆಯನ್ನು ಮಾಡಿದೆ. ಮುಂದಿನ ದಿನಗಳಲ್ಲಿಯೂ ಯಾವುದೇ ಅಡೆ-ತಡೆಯಿಲ್ಲದೆ ಸರ್ವರ ಪ್ರೋತ್ಸಾಹದೊಂದಿಗೆ ಆಶಾದಾಯಕವಾಗಿ ಮುಂದುವರೆಯಲಿ ಎಂಬುದಾಗಿ ದೇವರ ಅನುಗ್ರಹ ಬೇಡಿಕೊಳ್ಳೋಣ ಎಂದು ಹೇಳಿ ಶುಭ ಹಾರೈಸಿದರು.

ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್‌ರವರು ಮಾತನಾಡಿ, ಫಿಲೋಮಿನಾದ ಸುಂದರ ಹಾಗೂ ಮನಮೋಹಕ ಕ್ರೀಡಾಂಗಣದಲ್ಲಿ ಅನೇಕ ಪ್ರತಿಭೆಗಳು ಅರಳಿ ರಾಜ್ಯ, ರಾಷ್ಟ್ರ ಹಾಗೂ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿರುವ ಅನೇಕ ಉದಾಹರಣೆಗಳಿವೆ. ಭಾದರತದಲ್ಲಿ ಕ್ರಿಕೆಟ್ ಕ್ರೀಡೆಗೆ ಸಿಕ್ಕಿದಷ್ಟು ಪ್ರೋತ್ಸಾಹ ಇತರ ಯಾವುದೇ ಕ್ರೀಡೆಗೆ ಸಿಗೋದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಕ್ರಿಕೆಟ್ ಅನ್ನು ಚೆನ್ನಾಗಿ ಆಭ್ಯಸಿಸಿ ರಾಜ್ಯ, ರಣಜಿ, ಐಪಿಎಲ್ ಹಾಗೂ ರಾಷ್ಟ್ರೀಯ ತಂಡದಲ್ಲಿ ಗುರುತಿಸುವಂತಹ ಸಾಧನೆ ಹೊರ ಹೊಮ್ಮುವಂತಾಗಲಿ. ಕಾಲೇಜಿನ ಶಾರೀರಿಕ ಶಿಕ್ಷಕರು ಹಾಗೂ ಕೋಚ್‌ಗಳು ನೀಡು ಟಿಪ್ಸ್ ಅನ್ನು ಸರಿಯಾಗಿ ಪಾಲಿಸಿ ಮುಂದುವರೆಯಿರಿ ಎಂದು ಹೇಳಿ ಶುಭ ಹಾರೈಸಿದರು.

ಕಾಲೇಜಿನ ಲಲಿತಾ ಕಲಾ ಸಂಘದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥೆ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೀಮತಿ ಭಾರತಿ ಎಸ್.ರೈ ಸ್ವಾಗತಿಸಿ, ಕನ್ನಡ ಭಾಷಾ ವಿಭಾಗದ ಮುಖ್ಯಸ್ಥ ಡಾ|ವಿಜಯಕುಮಾರ್ ಮೊಳೆಯಾರ್ ವಂದಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕ ಪ್ರಶಾಂತ್ ರೈ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ರಾಜೇಶ್ ಮೂಲ್ಯ ಸಹಕರಿಸಿದರು.

ಉತ್ತಮ ವ್ಯಕ್ತಿತ್ವ ರೂಪಿಸಿ
ಫಿಲೋಮಿನಾ ಕಾಲೇಜಿನ ಐತಿಹಾಸಿಕ ಕ್ರೀಡಾಂಗಣದಲ್ಲಿ ಅನೇಕ ಪ್ರತಿಭಾವಂತರನ್ನು ಕೊಡುಗೆಯಾಗಿ ನೀಡಿದೆ ಅದರಲ್ಲೂ ಅಥ್ಲೆಟಿಕ್ಸ್ ವಿಭಾಗದಲ್ಲಿ ಪ್ರತಿಭಾನ್ವಿತರ ದಂಡೇ ಇದೆ. ಕ್ರೀಡೆಯಲ್ಲಿ ಗೆಲುವು ಮುಖ್ಯವಲ್ಲ, ಶಿಸ್ತಿನಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಬಹಳ ಮುಖ್ಯವೆನಿಸಿದೆ. ಕ್ರೀಡೆಯಿಂದ ಮನುಷ್ಯನಿಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ವೃದ್ಧಿಗೊಳಿಸುತ್ತದೆ ಮಾತ್ರವಲ್ಲದೆ ನಮ್ಮಲ್ಲಿನ ಮನೋಬಲವನ್ನು ಮತ್ತಷ್ಟು ಇಮ್ಮಡಿಗೊಳಿಸುತ್ತದೆ. ಕ್ರೀಡಾಪಟುಗಳು ತಮ್ಮಲ್ಲಿರುವ ಕೌಶಲಗಳನ್ನು ಪ್ರಚುರಪಡಿಸಿ ಉತ್ತಮ ವ್ಯಕ್ತಿತ್ವ ರೂಪಿಸುವತ್ತ ಮುಂದಡಿಯಿಡಬೇಕಾಗಿದೆ- ಡಾ|ಆಂಟನಿ ಪ್ರಕಾಶ್ ಮೊಂತೇರೋ, ಪ್ರಾಂಶುಪಾಲರು, ಸಂತ ಫಿಲೋಮಿನಾ ಕಾಲೇಜು

20 ತಂಡಗಳು
ಮಂಗಳೂರು ವಲಯ ಹಾಗೂ ಉಡುಪಿ ವಲಯ ಹೀಗೆ ಎರಡು ವಲಯಗಳಾಗಿ ವಿಂಗಡಿಸಿದ್ದು, ಮಂಗಳೂರು ವಲಯದಲ್ಲಿ ಯೂನಿವರ್ಸಿಟಿ ಕಾಲೇಜು ಹಂಪನಕಟ್ಟೆ, ಗೋವಿಂದದಾಸ್ ಕಾಲೇಜು ಸುರತ್ಕಲ್, ಎಸ್‌ಡಿಎಂಸಿ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್ ಮಂಗಳೂರು, ರೋಶನಿ ನಿಲಯ ಮಂಗಳೂರು, ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್‌ಸ್ಟ್ರೀಟ್, ಪದುವಾ ಕಾಲೇಜು ಮಂಗಳೂರು, ಎಸ್‌ಆರ್‌ಸಿ ರಾಮಕುಂಜ, ಸೆಕ್ರೇಡ್ ಹಾರ್ಟ್ ಕಾಲೇಜು ಮಡಂತ್ಯಾರು, ಎಫ್‌ಎಂಕೆಎಂಸಿ ಕೊಡಗು, ಎಸ್‌ಡಿಎಂ ಕಾಲೇಜು ಉಜಿರೆ, ಸಂತ ಫಿಲೋಮಿನಾ ಕಾಲೇಜು ಪುತ್ತೂರು, ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ, ವಿದ್ಯಾರಶ್ಮಿ ಸವಣೂರು, ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ, ಯೂನಿವರ್ಸಿಟಿ ಕ್ಯಾಂಪಸ್ ಕೊಣಾಜೆ, ಎನ್‌ಎಂಸಿ ಸುಳ್ಯ, ಸಂತ ಅಲೋಶಿಯಸ್ ಕಾಲೇಜು ಮಂಗಳೂರು, ಕಾವೇರಿ ಕಾಲೇಜು ಗೋಣಿಕೊಪ್ಪ, ಕೆನರಾ ಕಾಲೇಜು ಮಂಗಳೂರು ಹೀಗೆ ೨೦ ಕಾಲೇಜು ತಂಡಗಳು ಭಾಗವಹಿಸುತ್ತಿವೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.