ಮರಕ್ಕ ವ್ಯಾಘ್ರಚಾಮುಂಡಿ ಸಾನಿಧ್ಯದ ಪ್ರತಿಷ್ಠಾ ವಾರ್ಷಿಕೋತ್ಸವ, ದೈವಗಳ ನೇಮೋತ್ಸವದ ಆಮಂತ್ರಣ ಬಿಡುಗಡೆ

0

ಪುತ್ತೂರು: ಆರ್ಯಾಪು ಗ್ರಾಮದ ಸಂಪ್ಯ ಮರಕ್ಕ ವರದಾಯಿನಿ ಶ್ರೀ ವ್ಯಾಘ್ರಚಾಮುಂಡಿ ಸಾನಿಧ್ಯದಲ್ಲಿ ಫೆ.21ರಂದು ನಡೆಯಲಿರುವ ಪ್ರತಿಷ್ಠಾ ವಾರ್ಷಿಕೋತ್ಸವ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಮರಕ್ಕ ಚಾಮುಂಡಿ ಹಾಗೂ ರಾಜಗುಳಿಗ ದೈವಗಳ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಜ.9ರಂದು ಬೂಡಿಯಾರು ಶ್ರೀ ಚಕ್ರರಾಜರಾಜೇಶ್ವರಿ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು.

ಕ್ಷೇತ್ರದ ತಂತ್ರಿ ಕುಕ್ಕಾಡಿ ಪ್ರೀತಂ ಪುತ್ತೂರಾಯರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ತಂತ್ರಿ ಪ್ರೀತಂ ಪುತ್ತೂರಾಯ ಹಾಗೂ ಸಮಿತಿ ಗೌರವಾಧ್ಯಕ್ಷರುಗಳಾದ ಗಂಗಾಧರ ಅಮೀನ್ ಹೊಸಮನೆ, ಸತೀಶ್ ರೈ ಮಿಷನ್‌ಮೂಲೆರವರು ಆಮಂತ್ರಣ ಬಿಡುಗಡೆ ಮಾಡಿದರು. ಆಮಂತ್ರಣ ಬಿಡುಗಡೆ ಮಾಡಿದ ತಂತ್ರಿ ಪ್ರೀತಂ ಪುತ್ತೂರಾಯ ಹಾಗೂ ಗಂಗಾಧರ ಅಮೀನ್ ಮಾತನಾಡಿ, ನೇಮೋತ್ಸವವು ಅದ್ದೂರಿಯಾಗಿ ನಡೆಯಲಿ. ಇದರ ಯಶಸಸ್ಸಿಗೆ ಪ್ರತಿಯೊಬ್ಬರು ಸಹಕರಿಸುವಂತೆ ಮನವಿ ಮಾಡಿದರು.

ವೇದಿಕೆಯಲ್ಲಿ ಸಮಿತಿಯ ಅಧ್ಯಕ್ಷರಾದ ಜಯಂತ್ ಶೆಟ್ಟಿ ಕಂಬಳತಡ್ಡ, ಉಪಾಧ್ಯಕ್ಷರಾದ ಲೋಕೇಶ್ ರೈ ಮೇರ್ಲ,ಸುರೇಶ್ ಪಿ ಪೆಲತ್ತಡಿ, ಧನಂಜಯ ಶೆಟ್ಟಿ ಮೇರ್ಲ,ಜತೆ ಕಾರ್ಯದರ್ಶಿ ರವಿಚಂದ್ರ ಆಚಾರ್ಯ,ಸಮಿತಿಯ ಸದಸ್ಯರಾದ ಪವಿತ್ರ ರೈ, ಆನಂದ ಅಮೀನ್, ಶೇಷಪ್ಪ ಗೌಡ( psi),ಆನಂದ ನಾಯ್ಕ್ ಕೋಟ್ಲಾರ್ ಉಪಸ್ಥಿತರಿದ್ದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಸುವರ್ಣ ಮೇರ್ಲ , ಕೋಶಾಧಿಕಾರಿ ಧನುಷ್ ಹೊಸಮನೆ, ಕಾರ್ಯಾಧ್ಯಕ್ಷರುಗಳಾದ ನರೇಂದ್ರ ನಾಯಕ್, ರಕ್ಷಿತ್ ನಾಯಕ್, ಜತೆ ಕಾರ್ಯದರ್ಶಿ ಪ್ರದೀಪ್ ನಾಯ್ಕ್ ಮೇಗಿನ ಪಂಜ ,ವಿಕಾಸ್ ಬಿ. ಎಂ,ಕೃಷ್ಣಪ್ಪ ಗೌಡ ಅಡ್ಕ ,ರವೀಂದ್ರ ಶೆಟ್ಟಿ ಕಂಬಳತಡ್ಡ,ಉದಯ ರೈ ಮೇರ್ಲ,ಚಿದಾನಂದ ನಾಯಕ್, ಸಂತೋಷ್ ರೈ ಮೇರ್ಲ,ಸುರೇಶ್ ಆಚಾರ್ಯ, ಸೀತಾರಾಮ ಶೆಟ್ಟಿ ಕಂಬಳತಡ್ಡ, ಪ್ರಜ್ವಲ್ ಕೋಟ್ಲಾರ್, ಪವನ್ ಶೆಟ್ಟಿ,ಭಾಗೇಶ್ ಕೋಟ್ಲಾರ್, ದೀಪಕ್ ಸುವರ್ಣ ಮೇರ್ಲ, ಅನಿಲ್ ನಾಯಕ್ ಮರಕ್ಕ , ಮುರಳಿ ಮನೋಹರ್ ನಾಯಕ್ ಮರಕ್ಕ, ರವಿ ಕೆ ಮೇಗಿನಪಂಜ,ಭಾಸ್ಕರ್ ಕೆ ಎಸ್‌ ಆರ್‌ ಟಿ ಸಿ, ಸುಧೀರ್ ಕೆ ಮೇಗಿನ ಪಂಜ , ಜಯರಾಮ್ ಆಚಾರ್ಯ, ವಿಜ್ವಲ್ ರೈ ಮೇರ್ಲ,ಲಿಖಿತ್ ಅಡ್ಕ,ಅರ್ಚಕರಾದ ಶ್ರೀ ವತ್ಸ ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.

ಜಯಂತ ಶೆಟ್ಟಿ ಸ್ವಾಗತಿಸಿದರು. ಸುರೇಶ್ ಪಿ ಪೆಲತ್ತಡಿ ವಂದಿಸಿದರು.

LEAVE A REPLY

Please enter your comment!
Please enter your name here