ಸುಳ್ಯ ತಾಲೂಕು ನಿವೃತ್ತ ನೌಕರರ ಮತ್ತು ಪಿಂಚಣಿದಾರರ ಸಂಘದ ವತಿಯಿಂದ ತೆಕ್ಕಿಲ್ ಶಾಲೆಗೆ ಉಚಿತ ಪುಸ್ತಕ ದೇಣಿಗೆ

0

 

ಸುಳ್ಯ ತಾಲ್ಲೂಕು ನಿವೃತ್ತ ನೌಕರರ ಸಂಘ ವತಿಯಿಂದ ತೆಕ್ಕಿಲ್ ಶಾಲೆಗೆ ಉಚಿತ ಪುಸ್ತಕ ದೇಣಿಗೆ ನೀಡಲಾಯಿತು. ಸಂಘದ ಅಧ್ಯಕ್ಷರಾದ  ಡಾ. ರಂಗಯ್ಯ ( ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ, ಕೊಡಗು ಜಿಲ್ಲೆ) ಹಾಗೂ ಉಪಾಧ್ಯಕ್ಷರಾದ  ಅಬ್ದುಲ್ಲ ಮಾಸ್ತರ್(ನಿವೃತ್ತ ಉಪನ್ಯಾಸಕರು, ಎನ್ನೆಂಪಿಯಸಿ ಅರಂತೋಡು) ಮಾತನಾಡಿ ಪುಸ್ತಕ ಮತ್ತು ಓದುವಿಕೆಯ ಮಹತ್ವವನ್ನು ವಿವರಿಸಿದರು.

ಸಂಘದ ಕಾರ್ಯದರ್ಶಿ ಹಾಗೂ ಎನ್ನೆಂಸಿ ಸುಳ್ಯ ನಿವೃತ್ತ ಪ್ರಾಂಶುಪಾಲರಾದ  ಪ್ರೊ| ದಾಮೋದರ ಗೌಡ, ಕಾರ್ಯದರ್ಶಿ ಹಾಗೂ ನಿವೃತ್ತ ಜಿಲ್ಲಾ ಆರೋಗ್ಯ ಮೇಲ್ವಿಚಾರಕರಾದ ಶ್ರೀ ಎಂ. ಸುಬ್ರಹ್ಮಣ್ಯ ಹೊಳ್ಳ, ಕೋಶಾಧಿಕಾರಿ ಹಾಗೂ ರಾಜ್ಯ ಶಿಕ್ಷಕಿ ಪ್ರಶಸ್ತಿ ವಿಜೇತೆ ಶ್ರೀಮತಿ ಕಮಲಾಕ್ಷಿ ವಿ. ಶೆಟ್ಟಿ, ನಿರ್ದೇಶಕರು ಹಾಗೂ ನಿವೃತ್ತ ಪದವೀಧರ ಸಹಾಯಕರಾದ ಶ್ರೀಮತಿ ಎ. ಪ್ರೇಮಲತಾ ಉಪಸ್ಥಿತರಿದ್ದರು.
ತೆಕ್ಕಿಲ್ ಶಾಲೆಯ ಆಡಳಿತಾಧಿಕಾರಿ  ರಹೀಂ ಬೀಜದಕಟ್ಟೆ ವರು ಸಂಘಕ್ಕೆ ಕೃತಜ್ಞತೆ ಅರ್ಪಿಸಿದರು . ಶಿಕ್ಷಕಿ ಶ್ರೀಮತಿ ಸೌಮ್ಯ ಸ್ವಾಗತಿಸಿ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಾಣಿ ಕೆ ವಂದಿಸಿದರು.

 

 

LEAVE A REPLY

Please enter your comment!
Please enter your name here