ಜಾಲ್ಸೂರಿನಲ್ಲಿ ಸಂಧ್ಯಾಚೇತನ ಹಿರಿಯ ನಾಗರಿಕ ಸಂಘದಿಂದ ಅಮರಸುಳ್ಯ ಸ್ವಾತಂತ್ರ್ಯ ಸೇನಾನಿ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಗೆ ಸ್ವಾಗತ

0

 

ಅಮರಸುಳ್ಯ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರ, ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಹೊತ್ತ ವಾಹನ ಆ.29ರಂದು ಮಧ್ಯಾಹ್ನ ಜಾಲ್ಸೂರಿಗೆ ಆಗಮಿಸಿದಾಗ ಸಂಧ್ಯಾಚೇತನ ಹಿರಿಯ ನಾಗರಿಕ ಸಂಘದ ವತಿಯಿಂದ ಸ್ವಾಗತಿಸಲಾಯಿತು.


ತುಂಬಿದ ಜನಸಾಗರದಲ್ಲಿ ಅಂಗನವಾಡಿ ಶಿಕ್ಷಕಿ ನಿವೇದಿತ ಕೋನಡ್ಕಪದವು ನೇತೃತ್ವದ ತಂಡದವರು ಪೂರ್ಣ ಕುಂಭ ಸ್ವಾಗತ ಪುಷ್ಪಾರ್ಚನೆ ಮಂಗಳಾರತಿ ಬೆಳಗುವುದರೊಂದಿಗೆ ಪಂಚಾಯತ್ ಅಧ್ಯಕ್ಷ ಬಾಬು ಕೆ.ಎಂ ರವರು ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂದ್ಯಾಚೇತನ ಹಿರಿಯ ನಾಗರಿಕ ಸಂಘದ ಸದಾನಂದ ಜಾಕೆ, ರೇಣುಕಾ ಸದಾನಂದ, ಚೆನ್ನಕೇಶವ ಜಾಲ್ಸೂರು ಶಿವರಾಮ ರೈ ಕುರಿಯ, ಗಣೇಶ ರೈ ಕುರಿಯ, ದಿವಾಕರ್ ರೈ ಕುರಿಯ, ಐ ಕೆ ಹೇಮಚಂದ್ರ ಕದಿಕಡ್ಕ, ರವಿ ಪ್ರಸಾದ್ ನಾಯಕ್ ಕಜೆಗದ್ದೆ, ಕಾಂತಪ್ಪ ಮಾಸ್ತರ್ ಜಾಲ್ಸೂರು, ಮಾಧವ ಗೌಡ ಕಾಳಮನೆ, ರಜತ್ ಅಡ್ಕಾರು, ಇಬ್ರಾಹಿಂ ಕತ್ತರ್, ಅಬೂಬಕರ್ ಅಡ್ಕಾರು, ಆನಂದ ಮಾಸ್ತರ್ ಅಕ್ಕಿಮಲೆ ಸೇರಿದಂತೆ ಮುಂತಾದ ಹಿರಿಯ ನಾಗರಿಕರು ಪುಷ್ಪಾರ್ಚನೆ ಸಲ್ಲಿಸಿದರು.
ಜಾಲ್ಸೂರಿನ ಪಯಸ್ವಿನಿ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ, ಶಿಕ್ಷಕರು ಶಾಲಾ ವಿದ್ಯಾರ್ಥಿಗಳು ಪ್ರಾಥಮಿಕ ಶಾಲಾ ಶಿಕ್ಷಕರು ವಿಧ್ಯಾರ್ಥಿಗಳು ಜಯಘೋಷದೊಂದಿಗೆ ಪ್ರತಿಮೆ ಹೊತ್ತ ವಾಹನವನ್ನು ಸ್ವಾಗತಿಸಿ, ಜಾಲ್ಸೂರಿನಿಂದ ಬೀಳ್ಕೋಡ ಲಾಯಿತು.
ಸಂಧ್ಯಾ ಚೇತನ ಹಿರಿಯ ನಾಗರಿಕ ಸಂಘದ ವತಿ ಯಿಂದ ಸಿಹಿ ತಿಂಡಿ ಹಂಚಿ ಸಂಭ್ರಮಿಸಲಾಯಿತು.

LEAVE A REPLY

Please enter your comment!
Please enter your name here