ಮಂಗಳೂರು ವಿಭಾಗದ ಅರಣ್ಯ ರಕ್ಷಕರ, ವೀಕ್ಷಕರ ಸಂಘದಿಂದ ದಿನಚರಿ ಬಿಡುಗಡೆ, ನಿವೃತ್ತರಿಗೆ, ಕ್ರೀಡಾಪಟುಗಳಿಗೆ, ಪ್ರಕೃತಿ ಸೇವೆ ಸಲ್ಲಿಸಿದವರಿಗೆ ಸನ್ಮಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಅರಣ್ಯ ರಕ್ಷಕರ ಮತ್ತು ವೀಕ್ಷಕರ ಸಂಘ ಮಂಗಳೂರು ವಿಭಾಗ, ದ.ಕ ಜಿಲ್ಲೆ ಇದರ ಆಶ್ರಯದಲ್ಲಿ 2022ನೇ ಸಾಲಿನ ದಿನಚರಿ ಬಿಡುಗಡೆ ಹಾಗೂ ನಿವೃತ್ತರಿಗೆ, ಕ್ರೀಡಾಪಟುಗಳಿಗೆ. ಪ್ರಕೃತಿ ಸೇವೆ ಸಲ್ಲಿಸಿದವರಿಗೆ ಸನ್ಮಾನ ಕಾರ್ಯಕ್ರಮವು ಜ.10ರಂದು ಬೆಳಿಗ್ಗೆ ಪುತ್ತೂರು ಮಿನಿ ವಿಧಾನಸೌಧದ ಹಿಂಬದಿಯಲ್ಲಿನ ರಾಜ್ಯ ಸರಕಾರಿ ನೌಕರರ ಸಂಘದ ಸಭಾಭವನದ ತಾಲೂಕು ಶಾಖೆಯ ಸಮುದಾಯ ಭವನದಲ್ಲಿ ಜರಗಿತು.

ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಎಸ್.ನಟಾಲ್ಕರ್‌ರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, 2022ನೇ ಸಾಲಿನ ದಿನಚರಿ ಬಿಡುಗಡೆಗೊಳಿಸಿ ಮಾತನಾಡಿ, ಸಂಘದಲ್ಲಿನ ಪ್ರತಿಯೊಂದು ಚಟುವಟಿಕೆಗಳು ಹಾಗೂ ಬೇಡಿಕೆಗಳಿಗೆ ಸ್ಪಂದಿಸುವ ಮೂಲಕ ಪ್ರೋತ್ಸಾಹಿಸುವುದು ಪ್ರಮುಖ ಕರ್ತವ್ಯವಾಗಿದೆ. ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಲೋಗೋವನ್ನು ಅಳವಡಿಸಿಕೊಂಡು ಅರಣ್ಯ ರಕ್ಷಕರ ಹಾಗೂ ವೀಕ್ಷಕ ಸಂಘದ ಪ್ರತೀ ಸದಸ್ಯರಿಗೆ ಹೆಲ್ಮೆಟ್ ನೀಡಿರುವುದು ನಿಜಕ್ಕೂ ಶೋಭೆ ತರುವಂತಹುದು. ಸಮಸ್ಯೆಗಳು ಪ್ರತಿ ಕೆಟಗರಿಯಲ್ಲಿಯೂ ಇದೆ. ಸಾಧ್ಯವಾದಷ್ಟು ಮಟ್ಟಿಗೆ ಸಮಸ್ಯೆಗಳನ್ನು ಸ್ಪಂದಿಸುವತ್ತ ಸಹಕರಿಸುತ್ತೇನೆ ಎಂದು ಭರವಸೆ ನುಡಿದು ರೂ.10 ಸಾವಿರ ಮೊತ್ತದ ಚೆಕ್‌ನ್ನು ಮಂಗಳೂರು ವಿಭಾಗದ ಅರಣ್ಯ ರಕ್ಷಕರ ಮತ್ತು ವೀಕ್ಷಕರ ಸಂಘದ ಅಧ್ಯಕ್ಷ ಜಗದೀಶ್ ಕೆ.ಎನ್‌ರವರಿಗೆ ಹಸ್ತಾಂತರಿಸಿದರು.

ಮಂಗಳೂರು ವಿಭಾಗದ ಅರಣ್ಯ ರಕ್ಷಕರ ಮತ್ತು ವೀಕ್ಷಕರ ಸಂಘದ ಅಧ್ಯಕ್ಷ ಜಗದೀಶ್ ಕೆ.ಎನ್‌ರವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ|ದಿನೇಶ್ ಕುಮಾರ್ ವೈ.ಕೆ, ಉಪ ಅರಣ್ಯ ಸಂರಕ್ಷಣಾಧಿಕಾರಿ(ಪ್ರಭಾರ) ಶ್ರೀಧರ್ ಪಿ, ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ತಾಮತ್ರಿಕ ಸಹಾಯಕ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯ ರಾವ್, ಪುತ್ತೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಪಿ ಕಾರ್ಯಪ್ಪ, ಸುಳ್ಯ ಸುಬ್ರಹ್ಮಣ್ಯ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ, ಪುತ್ತೂರು ವಲಯದ ವಲಯ ಅರಣ್ಯ ಅಧಿಕಾರಿ ವಿ.ಎನ್ ಕಿರಣ್, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯ, ಕಾರ್ಯದರ್ಶಿ ಅಬ್ರಹಾಂ ಎಸ್.ಎ, ಮಂಗಳೂರು ವಿಭಾಗದ ಕ.ರಾ.ಉ.ವ.ಅ.ಸಂಘದ ಅಧ್ಯಕ್ಷ ಸಂತೋಷ್ ಕೆ.ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಭರಮಪ್ಪ, ಕಾರ್ಯದರ್ಶಿ ಸ್ವಾಗತ,

ಗಾಯಕಿ ಗುರುಪ್ರಿಯ ನಾಯಕ್ ಪ್ರಾರ್ಥಿಸಿದರು. ಅರಣ್ಯ ರಕ್ಷಕರ ಮತ್ತು ವೀಕ್ಷಕರ ಸಂಘ ಮಂಗಳೂರು ವಿಭಾಗದ ಕಾರ್ಯದರ್ಶಿ ಭರಮಪ್ಪ ಸ್ವಾಗತಿಸಿ, ಕೋಶಾಧಿಕಾರಿ ಚಿದಾನಂದ ವಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಳ್ತಂಗಡಿ ವಲಯದ ಅರಣ್ಯ ರಕ್ಷಕ ಸಂತೋಷ್ ಕುಮಾರ್ ವಂದಿಸಿದರು. ದರ್ಬೆ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ…
ಅರಣ್ಯ ರಕ್ಷಕರಾಗಿ ನಿವೃತ್ತಿ ಹೊಂದಿದ ಉಪ್ಪಿನಂಗಡಿ ವಲಯದಿಂದ ಸುಬ್ಬಯ್ಯ ನಾಯ್ಕ್, ಮಂಜುನಾಥ ಭಂಡಾರಿ, ಸುಬ್ರಹ್ಮಣ್ಯ ವಲಯದಿಂದ ಭಾರತಿ ಬಿ.ನಾಯ್ಕ್, ಸುಳ್ಯ ವಲಯದಿಂದ ಚಿದಾನಂದ್ ಕೆ, ಪುತ್ತೂರು ವಲಯದಿಂದ ಶಂಕರ್(ಪ್ರಕೃತಿ ಸೇವೆ), ಮೆಸ್ಕಾಂ ನೌಕರರಾಗಿದ್ದು ಮಿಯಾವಾಕೊ ಅರಣ್ಯ ಬೆಳೆಸಿದ ದುರ್ಗಾ ಸಿಂಗ್‌ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಮೌನ ಪ್ರಾರ್ಥನೆ..
ಅರಣ್ಯ ರಕ್ಷಣೆಯಲ್ಲಿ ತೊಡಗಿಸಿಕೊಂಡು ಸರಕಾರಿ ಕೆಲಸವೇ ದೇವರ ಕೆಲಸವೆಂದು ತಿಳಿದು ಪ್ರಕೃತಿ ಸೇವೆಯನ್ನು ಪರಮಾತ್ಮನ ಸೇವೆ ಎಂದುಕೊಂಡು ನಾಡು ಮತ್ತು ಅರಣ್ಯ ಸಂಪತ್ತಿನ ರಕ್ಷಣೆಗಾಗಿ ಜೀವನವನ್ನು ತ್ಯಾಗ ಮಾಡಿದ ಅರಣ್ಯ ಹುತಾತ್ಮರ ಆತ್ಮಕ್ಕೆ ಚಿರಶಾಂತಿ ಕೋರಿ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.