ಹಿರೆಂಬಂಡಾಡಿ ಗ್ರಾ.ಪಂ. ವಿಶೇಷ ಗ್ರಾಮ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಹಿರೇಬಂಡಾಡಿ: ಹಿರೇಬಂಡಾಡಿ ಗ್ರಾ.ಪಂ.ನ 2021-22ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಹಾಗೂ 2020-21ನೇ ಸಾಲಿನ 14 ಮತ್ತು 15ನೇ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮ ಸಭೆಯು ಜ.10ರಂದು ಗ್ರಾಮ ಪಂಚಾಯತ್ ಅಂಬೇಡ್ಕರ್ ಭವನದಲ್ಲಿ ಜರಗಿತು.

ಕೃಷಿ ಇಲಾಖೆ ಪುತ್ತೂರು ಇಲ್ಲಿನ ಸಹಾಯಕ ನಿರ್ದೇಶಕ ನಾರಾಯಣ ಶೆಟ್ಟಿಯವರು ಸಭೆಯ ಅಧ್ಯಕ್ಷತೆ ವಹಿಸಿದರು. ಉದ್ಯೋಗ ಖಾತ್ರಿ ಯೋಜನೆಯ ತಾಲೂಕು ಸಂಯೋಜಕ ಚಂದ್ರಶೇಖರ್‌ರವರು ಮಾತನಾಡಿ, ವೈಯಕ್ತಿಕ ಹಾಗೂ ಸಾರ್ವಜನಿಕ ಕಾಮಗಾರಿಗಳನ್ನು ಮಾಡಲು ಉದ್ಯೋಗ ಖಾತ್ರಿ ಯೋಜನೆಯಡಿ ಅವಕಾಶವಿದೆ. ಕಾಮಗಾರಿಗಳು ಗುಣಮಟ್ಟ ಹಾಗೂ ಪಾರದರ್ಶಕವಾಗಿ ನಡೆಯಬೇಕೆಂದು ಹೇಳಿದರು. ಗ್ರಾ.ಪಂ ಅಧ್ಯಕ್ಷೆ ಚಂದ್ರಾವತಿಸೀತರಾಮ ಗೌಡ ನೆಹರುತೋಟ, ಉಪಾಧ್ಯಕ್ಷೆ ಭವಾನಿ ಉಮೇಶ್ ನಾಕ್, ತಾಂತ್ರಿಕ ಸಹಾಯಕಿ ಜಯಲಕ್ಷ್ಮೀ, ಕಾರ್‍ಯದರ್ಶಿ ಪರಮೇಶ್ವರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗ್ರಾ.ಪಂ.ಸದಸ್ಯರಾದ ಗೀತಾ ದಾಸರಮೂಲೆ, ನತೀಶ್ ಶೆಟ್ಟಿ ಹೆನ್ನಾಳ, ನಿತಿನ್ ತಾರಿತ್ತಾಡಿ, ಸದಾನಂದ ಶೆಟ್ಟಿ ಅಡೆಕ್ಕಲ್, ನಾರಾಯಣ ಸೆಟ್ಲಪಾಲ್, ಶೌಕತ್ ಆಲಿ, ಉಷಾ ಸರೋಳಿ, ಗ್ರಾಕರಣಿಕರಾದ ಜಿತೇಶ್, ಗ್ರಾ.ಪಂ. ಮಾಜಿ ಸದಸ್ಯರಾದ ಸೇಸಪ್ಪ ನೆಕ್ಕಿಲು, ವಿಶ್ವನಾಥ ಕೆಮ್ಮಟೆ, ನಿತ್ಯಾನಂದ ಶೆಟ್ಟಿ ದರ್ಬೆ ಸೇರಿದಂತೆ ಗ್ರಾಮಸ್ಥರು, ಉದ್ಯೋಗ ಖಾತ್ರಿ ಯೋಜನೆಯ ಸಂಪನ್ಮೂಲ ವ್ಯಕ್ತಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ದಿನೇಶ್ ಶೆಟ್ಟಿ ಸ್ವಾಗತಿಸಿ, ವಂದಿಸಿದರು.

78,11,270ರೂ.ಖರ್ಚು:
2020-21ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಒಟ್ಟು 291 ಕಾಮಗಾರಿಗಳು ನಡೆದಿದ್ದು, 18,900 ಮಾನವ ದಿನ ಸೃಜನೆಯಾಗಿದೆ. 50,52,753ರೂ.ಕೂಲಿ ಹಾಗೂ 27,58,517 ರೂ. ಸಾಮಾಗ್ರಿ ಮೊತ್ತ ಸೇರಿ ಒಟ್ಟು 78,11,270 ರೂ.ಖರ್ಚಾಗಿದೆ ಎಂದು ಗ್ರಾಮ ಸಂಪನ್ಮೂಲ ವ್ಯಕ್ತಿಗಳು ಸಭೆಗೆ ತಿಳಿಸಿದರು. 14 ಮತ್ತು 15ನೇ ಹಣಕಾಸು ಯೋಜನೆಯಡಿ ನಡೆದ ಕಾಮಗಾರಿಗಳ ವಿವರವನ್ನು ಸಭೆಗೆ ಮಂಡಿಸಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.