ಸುಳ್ಯ : ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್ಸಿಲ್ಲದೆ ಪ್ರಯಾಣಿಕರ ಪರದಾಟ

0

 

ಬಸ್ಸಿಗಾಗಿ ಕಾದು ಸುಸ್ತಾದ ಪ್ರಯಾಣಿಕರು

ಮಂಗಳೂರಿನಲ್ಲಿ ನಡೆಯುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಫಲಾನುಭವಿಗಳನ್ನು ಕರೆದೊಯ್ಯಲು ಸರಾಕರಿ ಬಸ್‌ಗಳು ತೆರಳಿದ ಕಾರಣ ಸುಳ್ಯ ತಾಲೂಕಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ.

ಇದರಿಂದ ಸುಳ್ಯ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಬಸ್‌ಗಳು ಇಲ್ಲದೆ ಸುಳ್ಯ ಬಸ್ ನಿಲ್ದಾಣ ಬೀಕೋ ಎನ್ನುತ್ತಿತ್ತು. ಸುಳ್ಯ ತಾಲೂಕಿನಿಂದ ಫಲಾನುಭವಿಗಳು, ಸಾವಿರಾರು ಕಾರ್ಯಕರ್ತರು ಮಂಗಳೂರಿಗೆ ಕಾರ್ಯಕ್ರಮಕ್ಕೆ ತೆರಳಿದ್ದು,ಇದಕ್ಕಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ವ್ಯವಸ್ಥೆ ಮಾಡಿದ್ದು, ಸುಳ್ಯ ಡಿಪ್ಪೊದಿಂದ ೫೦ ಬಸ್‌ಗಳು ತೆರಳಿದೆ.

ಇದರಿಂದ ಬಸ್‌ಗಳು ಇಲ್ಲದೆ ಸುಳ್ಯ ತಾಲೂಕಿನ ವಿವಿಧ ಗ್ರಾಮೀಣ ಭಾಗಗಳ ಬಸ್ ಸಂಚಾರ ಸೇರಿ ವಿವಿಧ ಕಡೆ ತೆರಳುವ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಸಾರ್ವಜನಿಕರು, ವಿದ್ಯಾರ್ಥಿಗಳು ಬಸ್ ಇಲ್ಲದೆ ಸಂಕಷ್ಟ ಎದುರಿಸುವಂತಾಯಿತು. ಬಸ್ ಇಲ್ಲದೆ ವಿದ್ಯಾರ್ಥಿಗಳು ಅಲ್ಲಲ್ಲಿ ಬಾಕಿ ಆಗಿರುವ ಬಗ್ಗೆ ವರದಿಯಾಗಿದೆ.

ಸುಳ್ಯ, ಪುತ್ತೂರು, ಮಂಗಳೂರು ಮತ್ತಿತರ ಕಡೆಗಳಿಗೆ ತೆರಳುವ ಸಾರ್ವಜನಿಕರಿಗೆ, ಉದ್ಯೋಗಿಗಳಿಗೆ ಕೂಡ ಪ್ರಯಾಣಿಸಲು ಬಸ್ ಇಲ್ಲದೆ ಸಮಸ್ಯೆ ತಲೆದೋರಿತು. ಕೆಲವು ಮಂದಿ ಖಾಸಗೀ ವಾಹನಗಳಲ್ಲಿ ತೆರಳಿದರು. ಮಂಗಳೂರಿನ ಕಾರ್ಯಕ್ರಮಕ್ಕೆ ತೆರಳಲು ಸುಳ್ಯ ಡಿಪ್ಪೊ ಮಾತ್ರವಲ್ಲದೆ ಹಾಸನ ಡಿಪ್ಪೊ, ಮಡಿಕೇರಿ ಡಿಪ್ಪೊಗಳಿಂದಲೂ ಬಸ್ ತರಲಾಗಿತ್ತು. ಕೆಲವು ಕಡೆಗಳಲ್ಲಿ ಕಾರ್ಯಕರ್ತರಿಗೆ ಮಂಗಳೂರಿನ ಕಾರ್ಯಕ್ರಮಕ್ಕೆ ತೆರಳುವುದಕ್ಕೆ ಬಸ್ ಕೊರತೆ ಎದುರಾಗಿದೆ.

ಬಸ್ಸಿಲ್ಲದೆ ಸಂಕಷ್ಟಕ್ಕೊಳಗಾದ ಪ್ರಯಾಣಕರು ಸುದ್ದಿಯೊಂದಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.

 

 

LEAVE A REPLY

Please enter your comment!
Please enter your name here