ಆಲಂತಾಯ: ಕಾಂಕ್ರಿಟ್ ರಸ್ತೆ ಕಾಮಗಾರಿ ಕ್ಯೂರಿಂಗ್ ಆಗುವ ಮೊದಲೇ ಪಿಕಪ್ ಸಂಚಾರ ಬಿರುಕು ಬಿಟ್ಟ ರಸ್ತೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರ ಮನವಿ, ಪ್ರತಿಭಟನೆಗೆ ನಿರ್ಧಾರ

ನೆಲ್ಯಾಡಿ: ಆಲಂತಾಯ ಗ್ರಾಮದ ಪೆರ್ಲ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಕಾಂಕ್ರಿಟೀಕರಣ ಕಾಮಗಾರಿಯ ಕ್ಯೂರಿಂಗ್ ಆಗುವ ಮೊದಲೇ ಪಿಕಪ್ ವಾಹನ ಚಲಾಯಿಸಿದ್ದರಿಂದ ರಸ್ತೆ ಬಿರುಕು ಬಿಟ್ಟಿದ್ದು ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಜ.13ರಂದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿ ಆಲಂತಾಯ ಹಾಗೂ ಪೆರ್ಲ ಗ್ರಾಮಸ್ಥರ ನಿಯೋಗ ಗೋಳಿತ್ತೊಟ್ಟು ಗ್ರಾ.ಪಂ.ಪಿಡಿಒರವರಿಗೆ ಜ.10ರಂದು ಮನವಿ ಸಲ್ಲಿಸಿದೆ.

 


ಗ್ರಾಮಸ್ಥರ ಬಹುದಿನದ ಬೇಡಿಕೆಯಾಗಿರುವ ಆಲಂತಾಯ-ಪೆರ್ಲ ದೇವಸ್ಥಾನ ಸಂಪರ್ಕಿಸುವ ರಸ್ತೆಗೆ ಸುಳ್ಯ ಶಾಸಕರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರರವರ ಅನುದಾನದಲ್ಲಿ ಕಾಂಕ್ರಿಟೀಕರಣ ಕಾಮಗಾರಿ ನಡೆದಿದ್ದು ಜ.6ರಂದು ಕಾಮಗಾರಿ ಕೊನೆಗೊಂಡಿತ್ತು. ಆ ಬಳಿಕ ಗ್ರಾಮಸ್ಥರು ರಸ್ತೆಗೆ ನೀರು ಹಾಕಿ ಕ್ಯೂರಿಂಗ್ ಮಾಡಬೇಕಾಗಿದ್ದ ಹಿನ್ನೆಲೆಯಲ್ಲಿ ಆಲಂತಾಯದಲ್ಲಿ ದೇವಸ್ಥಾನ ಸಂಪರ್ಕಿಸುವ ರಸ್ತೆಯ ದ್ವಾರದ ಬಳಿ ಬೇಲಿ ಅಳವಡಿಸಿ 20 ದಿನ ಸದ್ರಿ ರಸ್ತೆಯಲ್ಲಿ ವಾಹನದಲ್ಲಿ ಯಾರೂ ಸಂಚರಿಸದಂತೆ ಮನವಿ ಮಾಡಿದ್ದರು. ಆದರೂ ಜ.8ರಂದು ರಾತ್ರಿ 3 ಗಂಟೆ ವೇಳೆಗೆ ಬೆದ್ರಗುಡ್ಡೆ ನಿವಾಸಿ ಗೌರಮ್ಮ ಎಂಬವರ ಮಕ್ಕಳಾದ ಧರ್ಣಪ್ಪ ಗೌಡ ಮತ್ತು ಲೋಕೇಶ್ ಗೌಡ ಎಂಬವರು 10-20 ಮಂದಿಯ ಜೊತೆ ಸೇರಿಕೊಂಡು ಊರವರನ್ನು ತಡೆದು, ಬೇಲಿಯನ್ನು ಹಿತ್ತು ಹಾಕಿ ಎರಡು, ಮೂರು ಪಿಕಪ್‌ಗಳಲ್ಲಿ ಕೋಳಿ ಸಾಗಾಟ ಮಾಡಿದ್ದಾರೆ. ಇದರಿಂದಾಗಿ ಈಗ ರಸ್ತೆ ಬಿರುಕು ಬಿಟ್ಟಿದೆ. ಇವರಿಗೆ ಕೋಳಿ ಸಾಗಾಟಕ್ಕೆ ಗೋಳಿತ್ತೊಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷರೇ ಮೌಖಿಕವಾಗಿ ಅನುಮತಿ ನೀಡಿದ್ದಾರೆ ಎಂದು ಗ್ರಾಮಸ್ಥರು ಮನವಿಯಲ್ಲಿ ಆರೋಪಿಸಿದ್ದಾರೆ. ಆದ್ದರಿಂದ ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ಹಾನಿಗೆ ಕಾರಣರಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಜ.13ರಂದು ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಗ್ರಾ.ಪಂ.ಮಾಜಿ ಸದಸ್ಯ ನೀಲಪ್ಪ ನಾಯ್ಕ್, ಗ್ರಾಮಸ್ಥರಾದ ರಮೇಶ್ ಪೆರ್ಲ, ವಿಶ್ವನಾಥ ಬೊರ್ಜಾಲು, ಮೋಹನ ಪೂಜಾರಿ, ಓಡಿಯಪ್ಪ ಗೌಡ ಪೆರ್ಲ, ಚಂದ್ರಶೇಖರ ಮತ್ತಿತರರು ಮನವಿ ಸಲ್ಲಿಕೆ ವೇಳೆ ಉಪಸ್ಥಿತರಿದ್ದರು. ಪಿಡಿಒ ಜಗನ್ನಾಥರವರು ಮನವಿ ಸ್ವೀಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.