ಸವಣೂರಿನಲ್ಲಿ‌ ರಬ್ಬರ್ ಟ್ಯಾಪಿಂಗ್ ತರಬೇತಿ, ಆಸಕ್ತರಿಗೆ ಅವಕಾಶ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸವಣೂರಿನಲ್ಲಿ ಕಛೇರಿ ಹೊಂದಿರುವ ಬೆನಸ ರಬ್ಬರ್ ಸೊಸೈಟಿ ಮತ್ತು ರಬ್ಬರ್ ಬೋರ್ಡ್ ವತಿಯಿಂದ 8 ದಿನಗಳ ರಬ್ಬರ್ ಟ್ಯಾಪಿಂಗ್, ರೈನ್ ಗಾರ್ಡಿಂಗ್, ಉತ್ತಮ ಶ್ರೇಣಿಯ ಶೀಟ್ ತಯಾರಿ ಮುಂತಾದ ವಿಷಯಗಳ ಬಗ್ಗೆ ತರಬೇತಿ ನೀಡುವ ಕುರಿತು ಚಿಂತಿಸಲಾಗಿದೆ. ಈ ತರಬೇತಿಯು ಈ ತಿಂಗಳ ಕೊನೆಯ ವಾರ ಅಥವಾ ಫೆಬ್ರವರಿ ಪ್ರಥಮ ವಾರದಲ್ಲಿ ನಡೆಸುವುದೆಂದು ತೀರ್ಮಾನಿಸಿದ್ದು, ಆಸಕ್ತರು ಬೆನಸ ರಬ್ಬರ್ ಸೊಸೈಟಿಯ ಕಾರ್ಯದರ್ಶಿಯವರನ್ನು ಸಂಪರ್ಕಿಸಲು ಕೋರಲಾಗಿದೆ. ತರಬೇತಿಯು ಸವಣೂರಿನಲ್ಲಿ ನಡೆಯಲಿದ್ದು, ಬೆಳಿಗ್ಗೆ 8.30ಕ್ಕೆ ಪ್ರಾರಂಭವಾಗಿ ಮದ್ಯಾಹ್ನ 12.30ಕ್ಕೆ ಮುಗಿಯುತ್ತದೆ. ಈ ತರಬೇತಿಯು ಸ್ವಂತ ಟ್ಯಾಪಿಂಗ್ ಮಾಡುವವರಿಗೆ ಉಪಯುಕ್ತವಾಗಿದ್ದು, ಒಬ್ಬರು ಹೆಚ್ಚು ಮರಗಳನ್ನು ಹೇಗೆ ಟ್ಯಾಪಿಂಗ್ ಮಾಡಬಹುದು ಎಂಬ ಬಗ್ಗೆ ಮಾಹಿತಿ ನೀಡಲಾಗುವುದು. 8 ದಿನವೂ ತಪ್ಪದೆ ತರಬೇತಿಯಲ್ಲಿ ಭಾಗವಹಿಸಿದವರಿಗೆ ರಬ್ಬರ್ ಬೋರ್ಡ್ ವತಿಯಿಂದ ಶಿಫಾರಸು ಪತ್ರ ನೀಡಲಾಗುವುದು. ರಬ್ಬರ್ ತೋಟದ ಮಾಲೀಕರಿಗೆ ಕೂಡ ಇದು ಒಂದು ಒಳ್ಳೆಯ ಸುಸಂದರ್ಭವಾಗಿದ್ದು, ರಬ್ಬರ್ ಬೆಳೆಯನ್ನು ಲಾಭದಾಯಕವಾಗಿ ಹೇಗೆ ಬೆಳೆಯಬಹುದು ಎಂದು ತಿಳಿದುಕೊಳ್ಳಬಹುದು.

ಆಸಕ್ತರು ಜನವರಿ 12 ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕಾಗಿ ವಿನಂತಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9632864222, 9448835462, 9980883205, 9945097441 ಸಂಪರ್ಕ ಮಾಡುವಂತೆ ಸವಣೂರು ಬೆನಸ ರಬ್ಬರ್ ಸೊಸೈಟಿ ಅಧ್ಯಕ್ಷ ಕೆಡೆಂಜಿಗುತ್ತು ಪ್ರವೀಣ್ ಕುಮಾರ್‌ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.