ಕೊಡಿಪ್ಪಾಡಿ ಹಾ. ಉ ಸಹಕಾರಿ ಸಂಘದ ನೂತನ ಕಟ್ಟಡ `ಪೇರ್ ಕಡಲ್’ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  •  ಮುಂದಿನ ತಿಂಗಳಿನಿಂದ ಹಾಲಿನ ದರದಲ್ಲಿ ಹೆಚ್ಚಳ- ದ.ಕ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ

 

 

 

ಪುತ್ತೂರು : ದ.ಕ ಹಾಲು ಉತ್ಪಾದಕರಿಗೆ ಮುಂದಿನ ತಿಂಗಳಿನಿಂದ ಹೆಚ್ಚುವರಿ ದರ ನೀಡಲು ಕೆ.ಎಂ.ಎಫ್ ಆಡಳಿತ ಮಂಡಳಿ ಸಭೆಯಲ್ಲಿ ಚಿಂತನೆ ನಡೆಸಲಾಗಿದೆ. ಅದೇ ರೀತಿ ಹಾಲಿನ ಮಾರಾಟ ದರ ಹೆಚ್ಚಳ ಮಾಡಲು ರಾಜ್ಯದ ಎಲ್ಲಾ ಕೆ.ಎಂ.ಎಫ್ ಘಟಕಗಳ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಿ ಮುಖ್ಯ ಮಂತ್ರಿಗಳಿಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ಕೆ.ರವಿರಾಜ್ ಹೆಗ್ಡೆ ತಿಳಿಸಿದರು.


ಕೊಡಿಪ್ಪಾಡಿ ಹಾಲು ಉತ್ಪಾದಕರ ಸಹಕಾರ ಸಂಘವು ಸ್ವಂತ ನಿವೇಶನ ಹೊಂದಿ ನೂತನವಾಗಿ ನಿರ್ಮಿಸಿರುವ ಕಟ್ಟಡ `ಪೇರ್ ಕಡಲ್’ನ್ನು ಜ.10ರಂದು ಉದ್ಘಾಟಿಸಿ ಅವರು ಮಾತನಾಡಿದರು. ಬಹುತೇಕ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸ್ಥಳದ ಕೊರತೆಯಿದ್ದು ಸಂಘಗಳಿಗೆ ಕನಿಷ್ಠ 5-6 ಸೆಂಟ್ಸ್ ಸ್ಥಳವನ್ನು ಸರಕಾರದಿಂದ ಸರಳೀಕೃತವಾಗಿ ಜಿಲ್ಲಾಧಿಕಾರಿಗಳ ಮೂಲಕ ನೀಡಲು ಶಾಸಕರು ಹಾಗೂ ಸಚಿವರ ಮೂಲಕ ಮನವಿ ಮಾಡಲಾಗಿದೆ ಎಂದರು.

ಸಂಘದ ಪಶು ಆಹಾರ ಗೋದಾಮನ್ನು ಉದ್ಘಾಟಿಸಿದ ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಲದ ನಿರ್ದೇಶಕ ಕಾಪು ದಿವಾಕರ ಶೆಟ್ಟಿಯವರು ಮಾತನಾಡಿ ಕೆ.ಎಂ.ಎಫ್. ಪಶು ಆಹಾರಕ್ಕೆ ಇದೀಗ ಬೇಡಿಕೆ ಹೆಚ್ಚಾಗಿದೆ. ಪುತ್ತೂರು ತಾಲೂಕಿನಿಂದ ಮಾಸಿಕ ೪೦೦ ಟನ್ ಹೆಚ್ಚುವರಿ ಬೇಡಿಕೆಯಿದೆ. ಸಬ್ಸಿಡಿಯನ್ನು ಮುಂದುವರಿಸಿಕೊಂಡು ರೈತರ ಬೇಡಿಕೆಗೆ ಅನುಗುಣವಾಗಿ ಪಶು ಆಹಾರ ಪೂರೈಸಲು ಗರಿಷ್ಠ ಪ್ರಯತ್ನನಡೆಯುತ್ತಿದೆ ಎಂದು ತಿಳಿಸಿದರು.

ಕಛೇರಿ ಕೋಣೆ ಉದ್ಘಾಟಿಸಿದ ಒಕ್ಕೂಟದ ನಿರ್ದೇಶಕ ಎಸ್.ಬಿ. ಜಯರಾಮ ರೈಯವರು ಮಾತನಾಡಿ, ಹೈನುಗಾರಿಕೆ ಇದೀಗ ಲಾಭದಾಯಕ ಉದ್ದಿಮೆಯಾಗಿ ಬದಲಾವಣೆಗೊಂಡಿದೆ. ರಾಸುಗಳ ವಿಮಾಯೋಜನೆಗೆ ಕೆ. ಎಂಎಫ್. ಅನುದಾನ ಲಭ್ಯವಿದೆ ಎಂದು ತಿಳಿಸಿದರು.

ನಾಮಫಲಕ ಉದ್ಘಾಟಿಸಿದ ಕೆ.ಎಂ.ಎಫ್. ನಿರ್ದೇಶಕ ನಾರಾಯಣ ಪ್ರಕಾಶ್ ಮಾತನಾಡಿ, ಸಹಕಾರವಿದ್ದರೆ ಮಾತ್ರ ಜೀವನ. ರಾಷ್ಟ್ರ ರಾಜಕಾರಣವನ್ನು ಕೂಡ ಸಹಕಾರಿಗಳಿಗೆ ಬದಲಿಸಲು ಸಾಧ್ಯ ಎಂದರು.

ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಪುತ್ತೂರು ವಲಯ ಮೇಲ್ವಿಚಾರಕರಾದ ಹರೀಶ್ ಕುಲಾಲ್, ಕೆ.ಎಂ.ಎಫ್. ನಿರ್ದೇಶಕ ಪದ್ಮನಾಭ ಶೆಟ್ಟಿ ಅರ್ಕಜೆ, ನಿರ್ದೇಶಕಿ ಸವಿತಾ ಎನ್.ಶೆಟ್ಟಿ ಅತಿಥಿಗಳಾಗಿ ಮಾತನಾಡಿದರು.

ಸನ್ಮಾನ:
ಸಂಘದ ಅಧ್ಯಕ್ಷ ವಾಸುದೇವ ಮಯ್ಯ ಮಾತನಾಡಿ, ಸಂಘ ಬೆಳೆದು ಬಂದ ಹಾದಿಯನ್ನು ವಿವರಿಸಿ ಸಂಘಕ್ಕಾಗಿ ಶ್ರಮಿಸಿದವರನ್ನು ಸ್ಮರಿಸಿದರು. ಸ್ಥಳದಾನಿ ಸಂತೋಷ್ ಕುಮಾರ್ ರೈ ನಳೀಲು ಹಾಗೂ ಕಟ್ಟಡ ಕಾಮಗಾರಿ ನಿರ್ವಹಿಸಿದ ವೆಂಕಟ್ರಮಣ ಗೌಡ ಕೋಡಿಮೂಲೆಯವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಸಂಘಕ್ಕೆ ಅತೀ ಹೆಚ್ಚು ಹಾಲು ನೀಡಿದ ಬೇಬಿ ಶೇವಿರೆ, ಹೆಚ್.ಎಂ. ಶಾಂತರಾಮ್ ರಾವ್ ಗಡಾಯಿ, ಜಯಂತಿ ಗುತ್ತು ಹಾಗೂ ಸಂಘಕ್ಕೆ ಹಾಲು ಪೂರೈಸಿದ ಹೈನುಗಾರರಿಗೆ ಬಹುಮಾನ ನೀಡಲಾಯಿತು. ದ.ಕ. ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ.ನಿತ್ಯಾನಂದ ಭಕ್ತ, ಉಪ ವ್ಯವಸ್ಥಾಪಕ ಡಾ.ಡಿ.ಆರ್.ಸತೀಶ್ ರಾವ್, ಕೊಡಿಪ್ಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುಮಿತ್ರ ಬಾನೊಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪುಟಾಣಿಗಳಾದ ಶಮಿತಾ ಹಾಗೂ ಧನುಷಾ ಪ್ರಾರ್ಥಿಸಿದರು. ಸಂಘದ ನಿರ್ದೇಶಕ ಸುಕುಮಾರ ಎನ್.ಎಸ್. ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವ್ಯ ವರದಿ ವಾಚಿಸಿದರು. ಮಾಜಿ ಹಾಲು ಪರೀಕ್ಷಕ ವೆಂಕಟ್ರಮಣ ಗೌಡ ವಂದಿಸಿದರು. ವಿಸ್ತರಣಾಧಿಕಾರಿ ಮಾಲತಿ ಪಿ ಕಾರ್ಯಕ್ರಮ ನಿರೂಪಿಸಿದರು. ಕೆಎಂಎಫ್ ಪಶು ವೈದ್ಯ ಡಾ. ಅನುದೀಪ್, ಸಂಘದ ಉಪಾಧ್ಯಕ್ಷ ಎಂ. ರಾಮ ಜೋಯಿಸ ಶಾಸ್ತಾವನ, ನಿರ್ದೇಶಕರುಗಳಾದ ನವೀನ ಎ. ಅಂಜಳ, ದಿನೇಶ ಜಿ. ಗೋಮುಖ, ಗಂಗಾಧರ ಗೌಡ ಅಶ್ವತಡಿ, ಸುಬ್ರಹ್ಮಣ್ಯ ಗೌಡ ಹೆಚ್ ಹನಿಯೂರು, ಪುತ್ತು ಬ್ಯಾರಿ ಮುರ, ಲೀಲಾ ಬಟ್ರುಪ್ಪಾಡಿ, ಲೀಲಾವತಿ ಕೋಂಟ್ರುಪಾಡಿ,ಪದ್ಮಾವತಿ ಕೋಡಿಮೂಲೆ, ಹಾಲು ಪರೀಕ್ಷಕಿ ಶೀಲಾವತಿ, ಮಾಜಿ ನಿರ್ದೇಶಕ ಬಾಬು ಗೌಡ ಕೊಡಿಪ್ಪಾಡಿ, ಕಬಕ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶೋಭಾ ಮಯ್ಯ, ಕೊಡಿಪ್ಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಗಿರೀಶ್ ನಂದನ, ಗಿರಿಧರ್ ಗೋಮುಖ, ಸ್ಮಿತಾ ಹನಿಯೂರು, ಚಂದ್ರಾವತಿ ಪಲ್ಲತ್ತಾರು, ಕಬಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರವೀಂದ್ರ ಕೆ. ಪೋಳ್ಯ ಮತ್ತಿತರರು ಭಾಗವಹಿಸಿದ್ದರು.

 

ಕಬಕ-ಕೊಡಿಪ್ಪಾಡಿ ಹದಗೆಟ್ಟ ರಸ್ತೆಯಿಂದ ಹಳ್ಳಿಯ ದರ್ಶನ…
ಉದ್ಘಾಟನಾ ಭಾಷಣ ಗೈದ ದ. ಕ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಯವರು ಕಬಕ -ಕೊಡಿಪ್ಪಾಡಿ ರಸ್ತೆಯಲ್ಲಿ ಬಂದಾಗ ನಿಜವಾದ ಹಳ್ಳಿಯ ದರ್ಶನವಾಯಿತು ಎಂದು ಈ ರಸ್ತೆಯ ದುಸ್ಥಿತಿಯ ಬಗ್ಗೆ ವಿವರಿಸಿದರು. ದುರಸ್ಥಿಗಾಗಿ ಆಗ್ರಹಿಸುತಿದ್ದ ಈ ಭಾಗದ ಜನರು ಕೆಎಂಫ್ ಅಧ್ಯಕ್ಷರಿಗಾದರೂ ನಮ್ಮ ಸಂಕಷ್ಟ ಅರಿವಾಯ್ತಲ್ಲ ಎಂದು ಆಡಿಕೊಳ್ಳುತ್ತಿದ್ದರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.