ಗೋಳಿತ್ತೊಟ್ಟು: ಟಾಟಾ ಏಸ್-ಲಾರಿ ಡಿಕ್ಕಿ ಏಸ್ ಚಾಲಕನಿಗೆ ಗಂಭೀರ ಗಾಯ

0

 

ನೆಲ್ಯಾಡಿ: ಅಂಚೆ ಇಲಾಖೆ ಬ್ಯಾಗ್ ಸಾಗಾಟ ಮಾಡುತ್ತಿದ್ದ ಟಾಟಾ ಏಸ್ ಹಾಗೂ ಅಡುಗೆ ಅನಿಲ ಸಿಲಿಂಡರ್ ಸಾಗಾಟದ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಏಸ್ ಚಾಲಕ ಗಂಭೀರ ಗಾಯಗೊಂಡಿರುವ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೭೫ರ ಗೋಳಿತ್ತೊಟ್ಟು ಸಮೀಪ ಜ.10ರಂದು ಸಂಜೆ ನಡೆದಿದೆ.

ಪುತ್ತೂರು ನೆಹರೂನಗರ ನಿವಾಸಿ ಸೇಸಪ್ಪ ಮೂಲ್ಯ ಎಂಬವರ ಪುತ್ರ ರವಿ(42ವ.)ಗಾಯಗೊಂಡವರಾಗಿದ್ದಾರೆ. ಇವರು ಸುಬ್ರಹ್ಮಣ್ಯದಿಂದ ನೆಟ್ಟಣ, ಕಡಬ, ಆಲಂಕಾರು, ನೆಲ್ಯಾಡಿಯಿಂದ ಅಂಚೆ ಇಲಾಖೆ ಬ್ಯಾಗ್ ಕಲೆಕ್ಟ್ ಮಾಡಿಕೊಂಡು ಪುತ್ತೂರಿಗೆ ಬರುತ್ತಿದ್ದ ವೇಳೆ ಗೋಳಿತ್ತೊಟ್ಟು ಸಮೀಪ ಮಂಗಳೂರಿನಿಂದ ಹಾಸನ ಕಡೆಗೆ ಹೋಗುತ್ತಿದ್ದ ಅಡುಗೆ ಅನಿಲ ಸಿಲಿಂಡರ್ ಸಾಗಾಟದ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಚಾಲಕ ರವಿಯವರು ಟಾಟಾ ಏಸ್ ಗಾಡಿಯೊಳಗೆ ಸಿಲುಕಿಕೊಂಡಿದ್ದು ತ್ರಾಸಪಟ್ಟು ಅವರನ್ನು ಹೊರತೆಗೆದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಗಂಭೀರ ಗಾಯಗೊಂಡಿರುವ ಅವರನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಅಪಘಾತದ ತೀವ್ರತೆಗೆ ಟಾಟಾ ಏಸ್ ಗಾಡಿ ಸಂಪೂರ್ಣ ಜಖಂಗೊಂಡಿದೆ.

LEAVE A REPLY

Please enter your comment!
Please enter your name here