ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನದಲ್ಲಿ `ಹಾವು-ನಾವು’ ಅರಿವು ಮೂಡಿಸುವ ಮಾಹಿತಿ ಕಾರ್ಯಾಗಾರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವಿಭಾಗ, ಪುತ್ತೂರು ಉಪ ವಿಭಾಗ, ಪುತ್ತೂರು ವಲಯ ಇದರ ಆಶ್ರಯದಲ್ಲಿ ವಸತಿ ಪ್ರದೇಶದಲ್ಲಿ ಬರುವ ಹಾವುಗಳನ್ನು ಹಿಡಿದು ಅವುಗಳನ್ನು ಕಾಡಿಗೆ ಬಿಡುವ ಕುರಿತು ಅರಿವು ಮೂಡಿಸುವ ಬಗ್ಗೆ ಮಾಹಿತಿ ಕಾರ್ಯಾಗಾರ ಮತ್ತು ಸಭೆಯು ಜ.10ರಂದು ಪೂರ್ವಾಹ್ನ ದರ್ಬೆ ಬೀರಮಲೆ ಬೆಟ್ಟದ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ(ಟ್ರೀ ಪಾರ್ಕ್)ನಲ್ಲಿ ಜರಗಿತು.

 


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ|ದಿನೇಶ್ ಕುಮಾರ್ ವೈ.ಕೆ.ರವರು ಮಾತನಾಡಿ, ಪರಶುರಾಮನ ಸೃಷ್ಟಿಯ ಈ ನಾಡು ನಾಗಬನ, ನಾಗದೇವತೆಗಳ ತಾಣವಿದು. ವಿಷಪೂರಿತ ಹಾಗೂ ವಿಷಪೂರಿತವಲ್ಲದ ಹಾವುಗಳ ಬಗ್ಗೆ ನಮಗೆಲ್ಲರಿಗೂ ಅರಿವು ಇರಬೇಕಾದುದು ಅಗತ್ಯ. ವಿಷಪೂರಿತ ಅಥವಾ ವಿಷವಿಲ್ಲದ ಹಾವುಗಳು ಮನೆ, ನಗರ ಪ್ರದೇಶಗಳಲ್ಲಿ ಕಾಣ ಸಿಗುತ್ತಾದರೂ ಅವನ್ನು ಅರಣ್ಯ ಇಲಾಖೆಯ ಗಮನಕ್ಕೆ ತಂದು ಸುರಕ್ಷಿತವಾಗಿ ಕಾಡಿಗೆ ಬಿಡಬೇಕಾದುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿ ಹಾವುಗಳನ್ನು ಹೇಗೆ?, ಯಾವ ರೀತಿ? ಹಿಡಿದು ಸಹಕರಿಸಬೇಕು ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಖ್ಯಾತ ಉರಗ ತಜ್ಞ, ಮನೋಜ್ ಕೆ.ಎಂ ಕಣ್ಣೂರುರವರು ಮಾತನಾಡಿ, ಹಾವುಗಳು ಮನುಷ್ಯನ ವಾಸಸ್ಥಾನದ ಬಳಿ ಯಾಕೆ ಬರುತ್ತದೆ?, ಮನೆಗೆ ಹಾವುಗಳು ಬರದಂತೆ ಮಾಡಲು ಏನು ಮಾಡುತ್ತೀರಿ?, ಹಾವುಗಳಿಂದ ನಮಗೆ ಏನು ಪ್ರಯೋಜನ?, ಹಾವು ಕಡಿತದ ಸಂದರ್ಭದಲ್ಲಿ ಯಾರಿಗೆ ಕರೆ ಮಾಡುತ್ತೀರಿ?, ಹಾವು ಕಡಿತದ ಸಮಯದಲ್ಲಿ ನಾವು ಮಾಡುವ ಕ್ರಮಗಳು ಯಾವುವು?, ಹಾವು ಕಡಿತಕ್ಕೆ ಸರಿಯಾದ ಚಿಕಿತ್ಸಾ ಕ್ರಮಗಳು ಯಾವುವು?, ಹಾವು ಕಡಿತವನ್ನು ತಪ್ಪಿಸಲು ಸಾಧ್ಯವೇ?, ಹೌದು ಎಂದಾದಲ್ಲಿ ಹೇಗೆ?, ನಮ್ಮ ಮತ್ತು ಅರಣ್ಯ ಇಲಾಖೆಯ ಸಂಬಂಧ? ಎಂಬುದರ ಬಗ್ಗೆ ಸಭಿಕರಿಗೆ ಅವರು ತಿಳಿ ಹೇಳಿದರು.

ಮುಖ್ಯ ಅತಿಥಿಗಳಾಗಿ ಪುತ್ತೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಪಿ ಕಾರ್ಯಪ್ಪ, ಸುಳ್ಯ ಸುಬ್ರಹ್ಮಣ್ಯ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ, ಮಂಗಳೂರು ಉಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ತಾಂತ್ರಿಕ ಸಹಾಯಕ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯ ರಾವ್‌ರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

 

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.