- ‘ಕ್ರಿಕ್ ಬಾಯ್ಜ್ ಟ್ರೋಫಿ-2022’ ಮಾಯಿದೆ ದೇವುಸ್ ಚರ್ಚ್ ತಂಡಕ್ಕೆ ಚಾಂಪಿಯನ್ ಪಟ್ಟ
ಪುತ್ತೂರು: ಮಡಂತ್ಯಾರು ಸೆಕ್ರೇಡ್ ಹಾರ್ಟ್ ಚರ್ಚ್ ನ ಅಧೀನದಲ್ಲಿರುವ ಭಾರತೀಯ ಯುವ ಸಂಚಲನ(ಐಸಿವೈಎಂ) ಘಟಕದ ಆಶ್ರಯದಲ್ಲಿ ಮಂಗಳೂರು ಧರ್ಮಪ್ರಾಂತ್ಯಕ್ಕೊಳಪಟ್ಟ ಅಂತರ್-ಚರ್ಚ್ ಗಳ ನಡುವಿನ ಕ್ರಿಕೆಟ್ ಪಂದ್ಯಾಟ ‘ಕ್ರಿಕ್ ಬಾಯ್ಜ್ ಟ್ರೋಫಿ-2022” ಜ.11 ರಂದು ಮಡಂತ್ಯಾರ್ ಚರ್ಚ್ ಕ್ರೀಡಾಂಗಣದಲ್ಲಿ ಜರಗಿದ್ದು, ಪುತ್ತೂರಿನ ಮಾಯಿದೆ ದೇವುಸ್ ಚರ್ಚ್ ನ ಯುವಕರ ತಂಡವು ರೋಮಾಂಚನಕಾರಿಯಾಗಿ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮಾತ್ರವಲ್ಲದೆ ರೂ.16022 ನಗದು ಜೊತೆಗೆ ಕ್ರಿಕ್ ಬಾಯ್ಜ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಮಾಯಿದೆ ದೇವುಸ್ ಚರ್ಚ್ ಹಾಗೂ ಲೊರೆಟ್ಟೊ ಚರ್ಚ್ ತಂಡಗಳ ನಡುವೆ ನಡೆದ ಫೈನಲ್ ಹೋರಾಟದಲ್ಲಿ ಲೊರೆಟ್ಟೊ ತಂಡ ರನ್ನರ್ಸ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡಿತು ಜೊತೆಗೆ ರೂ.8022 ಹಾಗೂ ಕ್ರಿಕ್ ಬಾಯ್ಜ್ ಟ್ರೋಫಿಯು ಪಡೆದುಕೊಂಡಿತು. ಮಾಯಿದೆ ದೇವುಸ್ ಚರ್ಚ್ ತಂಡದ ಕಪ್ತಾನ ಜೇಮ್ಸ್ ರವರು ಉತ್ತಮ ಬ್ಯಾಟರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಮಾಯಿದೆ ದೇವುಸ್ ಚರ್ಚ್ ತಂಡವು ನಾಕೌಟ್ ಹಂತದಲ್ಲಿ ಕಾಟಿಪಳ್ಳ ಚರ್ಚ್, ಬಳಿಕ ಸೆಮಿಫೈನಲ್ ಹಂತದಲ್ಲಿ ನಿಡ್ಡೋಡಿ ಚರ್ಚ್ ತಂಡವನ್ನು ಬಗ್ಗು ಬಡಿದು ಅಧಿಕಾರಯುತವಾಗಿ ಫೈನಲಿಗೆ ಟಿಕೇಟ್ ಪಡೆದಿತ್ತು. ಮಂಗಳೂರು ಧರ್ಮಪ್ರಾಂತ್ಯದಿಂದ ಒಟ್ಟು 13 ಚರ್ಚ್ ನ ತಂಡಗಳು ಕೂಟದಲ್ಲಿ ಪಾಲ್ಗೊಂಡಿದ್ದವು.
ಮಾಯಿದೆ ದೇವುಸ್ ಚರ್ಚ್ ತಂಡದಲ್ಲಿ ಜೇಮ್ಸ್(ಕಪ್ತಾನ), ಡ್ಯಾಲನ್ ರೇಗೊ, ಐವನ್ ಡಿ’ಸಿಲ್ವ, ಪ್ರೀತಂ ಮಸ್ಕರೇನ್ಹಸ್, ಶರೂನ್ ವಿಕ್ಟರ್ ಡಿ’ಸೋಜ, ರಾಕೇಶ್, ಮೇಗಸ್ ಮಸ್ಕರೇನ್ಹಸ್, ಡೋಯ್ ಡಿ’ಸೋಜ, ರಾಯನ್ ಡಾಯಸ್, ವಿಜಯ್ ಡಿ’ಸೋಜ, ರಾಬಿನ್ ಡಿ’ಸೋಜ, ಸಂತೋಷ್ ಕ್ರಾಸ್ತಾ,ಜೋಯೆಲ್ ಸಿಕ್ವೇರಾರವರು ಭಾಗವಹಿಸಿದ್ದರು.