ಉಪ್ಪಿನಂಗಡಿ ಪೊಲೀಸರ ಮೇಲೆ ಹಲ್ಲೆ ಪ್ರಕರಣದ ಆರೋಪಿ ಗ್ರಾ.ಪಂ ಸದಸ್ಯ, ಎಸ್‌ಡಿಪಿಐ ಮುಖಂಡನ ಬಂಧನ

0

  • ಅಧಿಕಾರ ಸ್ವೀಕರಿಸಿದ ಎರಡೇ ದಿನದಲ್ಲಿ ಬಂಧಿಸಿ ಹೆಡೆಮುರಿಕಟ್ಟಿದ ಪೂಂಜಾಲಕಟ್ಟೆ ಠಾಣಾ ಎಸೈ ಸುತೇಶ್ ಕೆ.ಪಿ

ಉಪ್ಪಿನಂಗಡಿ: ಇಲ್ಲಿನ ಹಳೆಗೇಟು ಬಳಿ ನಡೆದ ತಲ್ವಾರ್ ದಾಳಿಗೆ ಸಂಬಧಿಸಿ ವಿಚಾರಣೆಗಾಗಿ ಮೂವರು ಎಸ್‌ಡಿಪಿಐ ಮುಖಂಡರನ್ನು ಉಪ್ಪಿನಂಗಡಿ ಠಾಣೆ ಕರೆತಂದ ದಿವಸ ಠಾಣೆಯ ಮುಂಭಾಗದಲ್ಲಿ ನಡೆದ ಗಲಭೆ, ಗದ್ದಲಕ್ಕೆ ಸಂಬಂಧಿಸಿ, ಕೊಲೆಯತ್ನ ಮಾನಭಂಗ ಯತ್ನ, ಸಾರ್ವಜನಿಕ ಶಾಂತಿ ಭಂಗ, ಕೋವಿಡ್ ನಿಯಮ ಉಲ್ಲಂಘನೆ ಕಲಂನಡಿ ಮೂರು ಪ್ರಕರಣಗಳು ಪೊಲೀಸರಿಂದ ದಾಖಲಾಗಿದ್ದು
ಆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಯನ್ನು ಅಧಿಕಾರ ಸ್ವೀಕರಿಸಿದ ಎರಡೇ ದಿನದಲ್ಲಿ ಬಂಧಿಸಿ, ಹಡೆಮುರಿಕಟ್ಟುವಲ್ಲ. ಪೂಂಜಾಲಕಟ್ಟೆ ಎಸ್‌ಐ ಸುತೇಶ್ ಕೆ.ಪಿ. ಯಶಸ್ವಿಯಾಗಿದ್ದಾರೆ.

ಪೂಂಜಲಕಟ್ಟೆ ಗ್ರಾ.ಪಂ ಸದಸ್ಯ, ಎಸ್‌ಡಿಪಿಐ ಬೆಳ್ತಂಗಡಿ ವಲಯ ಉಪಾಧ್ಯಕ್ಷ ಹನೀಫ್ ಬಂಧಿತ ಆರೋಪಿ. ಘಟನೆಯ ಬಳಿಕ ತಲೆಮೆರೆಸಿಕೊಂಡಿದ್ದ ಈತನನ್ನು ಇಂದು ಬೆಳಿಗ್ಗೆ ಬಂಧಿಸಿರುವ ಎಸ್.ಐ ಸುತೇಶ್ ಕೆ.ಪಿ ನೇತೃತ್ವದ ಪೊಲೀಸ್ ತಂಡ ಈ ಪ್ರಕರಣದ ತನಿಖಾಧಿಕಾರಿಯವರಿಗೆ ವಶಕ್ಕೆ ನೀಡಿದೆ.

LEAVE A REPLY

Please enter your comment!
Please enter your name here