ಮಣ್ಣಾಪು ಕೊರಗಜ್ಜ ಕ್ಷೇತ್ರದಲ್ಲಿ ವಾರ್ಷಿಕ ನೇಮೋತ್ಸವ-ಆಮಂತ್ರಣ ಪತ್ರಿಕೆ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸರಿಸುಮಾರು 380 ವರ್ಷಗಳ ಇತಿಹಾಸವಿರುವ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಶ್ರೀ ಕೊರಗಜ್ಜ ಮತ್ತು ಶ್ರೀ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನದ ಶ್ರೀ ಕ್ಷೇತ್ರ ಮಣ್ಣಾಪು ಕೊರಗಜ್ಜ ದೈವಸ್ಥಾನದಲ್ಲಿ ವರ್ಷಾವಧಿ ನಡೆಸಿಕೊಂಡು ಬಂದಿರುವ ಶ್ರೀ ಕೊರಗಜ್ಜ ದೈವದ ನೇಮೋತ್ಸವವು ಜ.23 ರಿಂದ ೨೫ರ ತನಕ ಶ್ರೀ ಕ್ಷೇತ್ರದಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆಯು ಇತ್ತೀಚೆಗೆ ಶ್ರೀ ಕ್ಷೇತ್ರದ ಗೌರವಾಧ್ಯಕ್ಷರಾದ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರ ಅಧ್ಯಕ್ಷತೆಯಲ್ಲಿ ಜರಗಿತು.

ಶ್ರೀ ಕ್ಷೇತ್ರದ ಗೌರವಾಧ್ಯಕ್ಷರಾದ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರು ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಹಿಂಜಾವೇ ಜಿಲ್ಲಾ ಕಾರ್ಯದರ್ಶಿ ಅಜಿತ್ ರೈ ಹೊಸಮನೆ, ತಾಲೂಕು ಅಧ್ಯಕ್ಷ ಅಶೋಕ್ ತ್ಯಾಗರಾಜನಗರ, ಭಜರಂಗದಳ ತಾಲೂಕು ಸಂಚಾಲಕ ಹರೀಶ್ ದೋಳ್ಪಾಡಿ, ಹಿಂಜಾವೇ ತಾಲೂಕು ಕಾರ್ಯದರ್ಶಿ ದಿನೇಶ್ ಪಂಜಿಗ, ನಗರ ಉಪಾಧ್ಯಕ್ಷ ಗೀತೇಶ್ ಮೊಡಪ್ಪಾಡಿ, ಭಜರಂಗದಳ ಸುರಕ್ಷಾ ಪ್ರಮುಖ್ ಅನಿಲ್ ಇರ್ದೆ, ಕೆಮ್ಮಿಂಜೆ-ಮಣ್ಣಾಪು ಶ್ರೀ ಕೊರಗಜ್ಜ ಮತ್ತು ಶ್ರೀ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನದ ಅಧ್ಯಕ್ಷ ವಿಶ್ವನಾಥ್ ಮಣ್ಣಾಪು-ಕೆಮ್ಮಿಂಜೆ, ಉಪಾಧ್ಯಕ್ಷ ಕೇಶವ ಮಣ್ಣಾಪು, ಕಾರ್ಯದರ್ಶಿ ಉಮೇಶ್ ಮಣ್ಣಾಪು, ಮಧ್ಯಸ್ತರು ಗಣೇಶ್ ಪೂಜಾರಿ ಕೆಮ್ಮಿಂಜೆ, ಅರ್ಚಕರಾದ ಕುಂಡ ಮಣ್ಣಾಪು ಹಾಗೂ ಅಣ್ಣು ಮಣ್ಣಾಪು, ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ಯಶವಂತ ಪೇರಾಜೆ, ಉಪಾಧ್ಯಕ್ಷ ವಿಶ್ವನಾಥ್ ಪೂಜಾರಿ ಪ್ರಮುಖರಾದ ಗೌರವ ಸಲಹೆಗಾರ ಗಂಗಾಧರ್ ಮಣ್ಣಾಪು, ರವಿ ಕೆ.ಮಣ್ಣಾಪು, ಸುಶೀಲ ಮಣ್ಣಾಪು, ಚನ್ನು ಮಣ್ಣಾಪು, ಲೋಕೇಶ್ ಜಿ.ಆರ್ ಮಣ್ಣಾಪು, ಸುಜೀರ್ ಶೆಟ್ಟಿ ನುಳಿಯಾಲು ಹಾಗೂ ಕೆಮ್ಮಿಂಜೆ-ಮಣ್ಣಾಪು ಪರಿಸರದ ಸ್ಥಳೀಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶಿಸ್ತುಬದ್ಧವಾಗಿ ನಡೆಸಲು ಸರ್ವರೂ ಸಹಕರಿಸಲಿ
ಕೊರಗಜ್ಜ ದೈವಸ್ಥಾನದ ಜೀರ್ಣೋದ್ಧಾರ, ಮೂಲ ಶಿಲಾ ಪುನರ್ ಪ್ರತಿಷ್ಠೆ ಮತ್ತು ನೇಮೋತ್ಸವವು ಕಳೆದ ವರ್ಷ ಸರ್ವರ ಸಹಕಾರದಿಂದ ವಿಜ್ರಂಭಣೆಯಿಂದ ನೆರವೇರಿದೆ. ಇಂದಿನ ಈ ಕಲಿಯುಗದಲ್ಲಿ ಮಾನವನಿಗೆ ಪ್ರಾರ್ಥಿಸಿದ್ದನ್ನು ಕರುಣಿಸುವ ಕೊರಗಜ್ಜ ದೈವವೇ ದೇವರು ಆಗಿದ್ದಾರೆ. ಯುವಕರೇ ಈ ಕ್ಷೇತ್ರದ ಶಕ್ತಿಯಾಗಿದ್ದು, ಈ ಕ್ಷೇತ್ರದ ಮಕ್ಕಳಿಗೆ ಒಳ್ಳೆಯ ಉದ್ಯೋಗ ಕೊಡಿಸುವ ಮೂಲಕ ಸುಖ, ಸಂಪತ್ತು, ಆರೋಗ್ಯವನ್ನು ಕರುಣಿಸುವ ಭಾಗ್ಯ ಕೊರಗಜ್ಜ ದೇವರು ನೀಡಲಿ ಎಂಬುದೇ ನಮ್ಮ ಪ್ರಾರ್ಥನೆಯಾಗಿದೆ. ಮುಂದಿನ ದಿನಗಳಲ್ಲಿ ಶ್ರೀ ಕ್ಷೇತ್ರದಲ್ಲಿ ನಡೆಯುವ ವರ್ಷಂಪ್ರತಿ ನೇಮೋತ್ಸವ ಕಾರ್ಯಕ್ರಮವು ಬಹಳ ಶಿಸ್ತುಬದ್ಧವಾಗಿ ನಡೆಯಲು ಸರ್ವರ ಸಹಕಾರ ಹಾಗೂ ಪ್ರೋತ್ಸಾಹವಿರಲಿ ಎನ್.ರವೀಂದ್ರ ಶೆಟ್ಟಿ ನುಳಿಯಾಲು, ಗೌರವಾಧ್ಯಕ್ಷರು, ಜೀರ್ಣೋದ್ಧಾರ ಸಮಿತಿ, ಶ್ರೀ ಕ್ಷೇತ್ರ ಮಣ್ಣಾಪು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.