ನೆಕ್ಕಿಲು ಸ್ವಸ್ತಿಕ್ ಗೆಳೆಯರ ಬಳಗದ ಉದ್ಘಾಟನೆ ಪ್ರಯುಕ್ತ ಕೂಡುರಸ್ತೆ-ತಿಂಗಳಾಡಿ ರಸ್ತೆ ಬದಿಯಲ್ಲಿ ಸ್ವಚ್ಛತಾ ಶ್ರಮದಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸ್ವಸ್ತಿಕ್ ಗೆಳೆಯರ ಬಳಗ ನೆಕ್ಕಿಲು ಇದರ ಉದ್ಘಾಟನೆಯ ಅಂಗವಾಗಿ ಜ.೯ರಂದು ಸರ್ವೆ ಗ್ರಾಮದ ಕೂಡುರಸ್ತೆಯಿಂದ ತಿಂಗಳಾಡಿ ವರೆಗೆ ರಸ್ತೆಯ ಇಕ್ಕೆಲೆಗಳಲ್ಲಿ ಬೆಳೆದಿದ್ದ ಹುಲ್ಲು, ಪೊದೆಗಳನ್ನು ಕಡಿದು ತೆರವುಗೊಳಿಸಿ ಸ್ವಚ್ಛಗೊಳಿಸಲಾಯಿತು. ನೂತನ ಸಂಘವನ್ನು ಗೌರವಾಧ್ಯಕ್ಷ ಸುಂದರ ಬಲ್ಯಾಯ ನೆಕ್ಕಿಲು ದೀಪ ಬೆಳಗಿಸಿ ಉದ್ಘಾಟಿಸಿದರು. ಗೌರವ ಸಲಹೆಗರಾದ ಪದ್ಮಯ್ಯ ನಾಯ್ಕ ನೆಕ್ಕಿಲು, ತಿಮ್ಮಪ್ಪ ನಾಯ್ಕ ನೆಕ್ಕಿಲು, ಅಶೋಕ ನಾಯ್ಕ ನೆಕ್ಕಿಲು ಉಪಸ್ಥಿತರಿದ್ದರು.
ಸಂಘದ ಪದಾಧಿಕಾರಿಗಳು, ಸದಸ್ಯರಲ್ಲದೇ ಊರವರಾದ ಚಂದ್ರಹಾಸ ನಾಯ್ಕ, ನಾರಾಯಣ ನಾಯ್ಕ, ಆನಂದ ಬಾಳಾಯ, ಜಯಪ್ರಕಾಶ್ ಬಾಳಯ, ವಿಖ್ಯಾತ್, ಲಿಖಿತಾ ಬಾಳಾಯ, ಗೌತಮಿ ನೆಕ್ಕಿಲು, ಕೃತಿ ಬಲ್ಯಾಯ, ರಶ್ಮಿತಾ ನೆಕ್ಕಿಲು ಇವರು ಶ್ರಮದಾನದಲ್ಲಿ ಭಾಗವಹಿಸಿದ್ದರು. ಬೆಳಗ್ಗಿನಿಂದ ಸಂಜೆವರೆಗೆ ಶ್ರಮದಾನ ನಡೆಯಿತು. ಲಕ್ಷ್ಮೀಶ ಮಯ್ಯ ಎಲಿಯ, ಸೃಜನ್ ರೈ ಸೊರಕೆ, ರಝಾಕ್ ಕೂಡುರಸ್ತೆ ಮೊದಲಾದವರು ಶ್ರಮದಾನಕ್ಕೆ ವಿವಿಧ ರೀತಿಯ ನೆರವು ನೀಡಿದರು.

ಗ್ರಾಮಸ್ಥರಿಂದ ಮೆಚ್ಚುಗೆ:
ಕೂಡುರಸ್ತೆ-ತಿಂಗಳಾಡಿ ರಸ್ತೆ ಬದಿಯಲ್ಲಿ ಗಿಡಗಂಟಿಗಳು, ಪೊದೆ ಹುಲ್ಲುಗಳು ಅಪಾರವಾಗಿ ಬೆಳೆದಿತ್ತಲ್ಲದೇ ಅನೇಕ ಕಡೆಗಳಲ್ಲಿ ರಸ್ತೆಯನ್ನೇ ಆವರಿಸಿತ್ತು. ಇದೀಗ ನೆಕ್ಕಿಲು ಸ್ವಸ್ತಿಕ್ ಗೆಳೆಯರ ಬಳಗದವರು ಸೇರಿಕೊಂಡು ಸ್ವಚ್ಛತಾ ಶ್ರಮದಾನದ ಮೂಲಕ ಹುಲ್ಲು, ಪೊದೆಗಳನ್ನು ಕಡಿದು ತೆರವುಗೊಳಿಸಿರುವುದು ವಾಹನ ಸವಾರರಿಗೆ ಮತ್ತು ಪಾದಾಚಾರಿಗಳಿಗೆ ಬಹು ಉಪಯುಕ್ತವಾಗಿ ಪರಿಣಮಿಸಿದೆ. ಮುಂಡೂರು ಗ್ರಾ.ಪಂ ವ್ಯಾಪ್ತಿಯಾದ್ಯಂತ ರಸ್ತೆ ಬದಿಗಳಲ್ಲಿ ಹುಲ್ಲು, ಪೊದೆಗಳು ಬೆಳೆದು ಜನರಿಗೆ ತೊಂದರೆಯಾಗುತ್ತಿರುವ ಬಗ್ಗೆ ಇತ್ತೀಚೆಗೆ ನಡೆದ ಮುಂಡೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲೂ ಚರ್ಚೆ ನಡೆದಿತ್ತು. ಸ್ವಸ್ತಿಕ್ ಗೆಳೆಯರ ಬಳಗದವರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.