ಸವಣೂರು : ಸಮವಸ್ತ್ರ ವಿತರಣಾ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸರಕಾರಿ ಪದವಿ ಪೂರ್ವ ಕಾಲೇಜು ಸವಣೂರು ಪ್ರೌಢಶಾಲಾ ವಿಭಾಗದಲ್ಲಿ ಜ.10 ರಂದು ಸರ್ಕಾರದಿಂದ ಕೊಡ ಮಾಡುವ ಸಮವಸ್ತ್ರ ವಿತರಣಾ ಕಾರ್ಯಕ್ರಮ ಜರುಗಿತು. ಸಭಾಧ್ಯಕ್ಷತೆಯನ್ನು ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಜೀವಿ ಶೆಟ್ಟಿ ವಹಿಸಿ, ಸಮವಸ್ತ್ರವನ್ನು ವಿತರಿಸಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

 

ಪಂಚಾಯತ್ ಉಪಾಧ್ಯಕ್ಷರಾದ ಶೀನಪ್ಪ ಶೆಟ್ಟಿ, ಪಂಚಾಯತ್ ಸದಸ್ಯರಾದ ಚಂದ್ರಾವತಿ, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಕಾಲೇಜಿನ‌ ಕಾರ್ಯಾಧ್ಯಕ್ಷ ಗಿರಿಶಂಕರ ಸುಲಾಯ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ವಿತರಿಸಿ ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಮುಖ್ಯಗುರು ರಘು ಬಿ . ಆರ್. ಸ್ವಾಗತಿಸಿ, ಗಣೇಶ್ ಮರಕಲ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಮಾಮಚ್ಚನ್ ಎಂ. ಕಾರ್ಯಕ್ರಮವನ್ನು ನಿರೂಪಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರೀನಾ ಎಂ .ಡಿ. ನಯನ ಜಿ. ಪಾಲೇಕರ್ , ಕವಿತಾ ಸಿ.ಕೆ , ರೇಖಾ ಪ್ರಶಿಕ್ಷಣಾರ್ಥಿ ಶಿಕ್ಷಕರುಗಳಾದ ಹರ್ಷಿಣಿ ಕೆ.ಎಸ್. ಪವಿತ್ರ ಜೆ. ಎಸ್. ರಕ್ಷಿತಾ ಎ. ಸೌಮ್ಯ ಕೆ. ಅಶ್ವಿನಿ ಎಸ್ , ಸ್ವಾತಿ ಬಿ.ಸಿ. ತೇಜಸ್ವಿ ಎಸ್ ರವರುಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.