ಬಡಗನ್ನೂರು: ಆಸಿಡ್ ಸೇವಿಸಿದ ವ್ಯಕ್ತಿ ಮೃತ್ಯು

0

ಪುತ್ತೂರು: ಆಸಿಡ್ ಸೇವಿಸಿ ಚಿಂತಾಜನಕ ಸ್ಥಿತಿಯಲ್ಲಿದ್ದ ಬಡಗನ್ನೂರು ಗ್ರಾಮದ ಸಂಪಿಗೆ ಮಜಲು ನಿವಾಸಿಯೊಬ್ಬರು ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಬಡಗನ್ನೂರು ಗ್ರಾಮದ ಸಂಪಿಗೆಮಜಲು ನಿವಾಸಿ ವೆಂಕಪ್ಪ ಗೌಡ ಅವರು ಮೃತಪಟ್ಟವರು. ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಅವರು ಜ.10ರಂದು ರಬ್ಬರ್ ಹಾಲಿಗೆ ಮಿಶ್ರಣ ಮಾಡಲು ಕ್ಯಾನ್‌ನಲ್ಲಿ ತಂದಿರಿಸಿದ್ದ ಆಸಿಡ್ ಅನ್ನು ಸ್ಟೀಲ್ ಲೋಟದಲ್ಲಿ ಹಾಕಿ ಸೇವಿಸಿದ್ದಾರೆ. ಇದನ್ನು ಗಮನಿಸಿದ ಅವರ ಪತ್ನಿ ಹೇಮಲತಾ ಮತ್ತು ಮನೆ ಮಂದಿ ತಕ್ಷಣ ವೆಂಕಪ್ಪ ಗೌಡರನ್ನು ಪುತ್ತೂರು ಆಸ್ಪತ್ರೆಗೆ ಕರೆ ತಂದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ರಾತ್ರಿ ಮೃತಪಟ್ಟಿದ್ದಾರೆ. ಮೃತರ ಪುತ್ರಿ ಸುಷ್ಮಾ ಅವರು ನೀಡಿದ ದೂರಿನಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here