ಬ್ರಹ್ಮಕಲಶೋತ್ಸವಕ್ಕೆ ಸಜ್ಜುಗೊಂಡಿದೆ ಖರಾಸುರ ಪ್ರತಿಷ್ಠೆಯ ಆಲಡ್ಕ ಸದಾಶಿವ ದೇವಸ್ಥಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಜ.19-24: ಬ್ರಹ್ಮಕಲಶೋತ್ಸವ ಸಂಭ್ರಮ

 

ಪುತ್ತೂರು: ಸುಮಾರು 900 ವರ್ಷಗಳ ಇತಿಹಾಸವನ್ನು ಹೊಂದಿರುವ ಮುಂಡೂರು ಗ್ರಾಮದ ಆಲಡ್ಕ ಶ್ರೀ ಸದಾಶಿವ ದೇವಸ್ಥಾನವು ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಇದೊಂದು ಗ್ರಾಮ ದೇವಸ್ಥಾನವಾಗಿದ್ದು ಈ ದೇವಸ್ಥಾನ ಮುಂಡೂರು ಗ್ರಾಮದಲ್ಲಿದ್ದರೂ ಮುಖ್ಯವಾಗಿ ಕೆದಂಬಾಡಿ ಗ್ರಾಮದ ಸರಹದ್ದಿನಲ್ಲಿರುವುದರಿಂದ ಕೆದಂಬಾಡಿ, ಮುಂಡೂರು, ಸರ್ವೆ ಸೇರಿದಂತೆ ಸುಮಾರು 21 ಗ್ರಾಮಗಳಿಗೆ ಸಂಬಂಧವಿದೆ ಎನ್ನಲಾಗಿದೆ. 2006ರ ಮಾರ್ಚ್ ತಿಂಗಳಿನಲ್ಲಿ ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶಾಭಿಷೇಕ ನಡೆದಿದೆ. ಪ್ರತಿ 12 ವರ್ಷಕ್ಕೊಮ್ಮೆ ಬ್ರಹ್ಮಕಲಶಾಭಿಷೇಕ ನಡೆಸಿದರೆ ಸಾನ್ನಿಧ್ಯ ಶಕ್ತಿ ಇನ್ನಷ್ಟು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದ್ದು ಇದೀಗ ಸುಮಾರು 1 ಕೋಟಿ ರೂ.ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿದ್ದು ಮತ್ತೆ ಶ್ರೀ ಕ್ಷೇತ್ರ ಬ್ರಹ್ಮಕಲಶೋತ್ಸವಕ್ಕೆ ಸಜ್ಜುಗೊಂಡಿದೆ. ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ಶಿವಲಿಂಗಕ್ಕೆ ತನ್ನದೇ ಆದ ವಿಶೇಷತೆ, ಕಾರಣಿಕತೆ ಇದೆ. ತ್ರೇತಾಯುಗದ ಖರಾಸುರ ಎಂಬವನು ಇಲ್ಲಿಯ ಶಿವಲಿಂಗವನ್ನು ಪ್ರತಿಷ್ಠಾಪಿಸಿದ್ದಾನೆ ಎನ್ನಲಾಗಿದೆ. ಈತನ ತನ್ನೆರಡು ಕೈ ಹಾಗೂ ಬಾಯಿಯಿಂದ ಶಿವಲಿಂಗವನ್ನು ಹಿಡಿದುಕೊಂಡು ಬಂದು ಬಲದ ಕೈಯ ಶಿವಲಿಂಗವನ್ನು ಆಲಡ್ಕದಲ್ಲಿ ಹಾಗೂ ಎಡದ ಕೈಯ ಶಿವಲಿಂಗವನ್ನು ಮಜಲುಮಾರು ಎಂಬಲ್ಲಿ ಹಾಗೇ ಬಾಯಿಯಲ್ಲಿ ಕಚ್ಚಿಕಂಡು ಬಂದ ಶಿವಲಿಂಗವನ್ನು ನರಿಮೊಗರಿನಲ್ಲಿ ಪ್ರತಿಷ್ಠಾಪಿಸಿದ ಎಂದು ನಂಬಲಾಗಿದೆ. ಇಲ್ಲಿರುವ ಶಿವಲಿಂಗ ದ.ಕ ಜಿಲ್ಲೆಯಲ್ಲೇ ಯಾವ ದೇವಸ್ಥಾನದಲ್ಲೂ ಕಾಣಸಿಗದ ಸುಮಾರು ೭.೫ ಅಡಿ ಎತ್ತರದ ಶಿವಲಿಂಗವಾಗಿದೆ. ಸಾಮಾನ್ಯ ೨.೫ ಅಡಿ ಎತ್ತರದ ಪಾಣಿ ಪೀಠದ ಮೇಲೆ ೨.೫ ಅಡಿ ಎತ್ತರದ ಕಪ್ಪು ಶಿಲೆಯ ಶಿವಲಿಂಗವೇ ಈ ಸದಾಶಿವ ವಿಗ್ರಹ. ಈ ಶಿವಲಿಂಗವು ಅದ್ಬುತ ಶಕ್ತಿಯುಳ್ಳದ್ದಾಗಿದೆ. ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಕಾರಣಿಕದ ಲಿಂಗವಾಗಿದೆ. ಇಲ್ಲಿಯ ಶಿವಲಿಂಗದಲ್ಲಿ ಮೂರು ದೇವರ ಸಾನ್ನಿಧ್ಯವಿದ್ದು, ಶಿವಲಿಂಗದ ಮಧ್ಯಭಾಗದಲ್ಲಿ ವಿಷ್ಣು, ಮೇಲ್ಬಾಗದಲ್ಲಿ ಶಿವ ಹಾಗೆ ಕೆಳಭಾಗದಲ್ಲಿ ಹರಿಯ ಸಾನ್ನಿಧ್ಯವಿದೆ. ಇಲ್ಲಿ ನೆಲೆ ನಿಂತಿರುವ ಶ್ರೀ ಸದಾಶಿವ ದೇವರು ದಯಾಮಯನಾಗಿದ್ದು ಭಕ್ತರ ಬೇಡಿಕೆಗಳನ್ನು ಈಡೇರಿಸುವನಾಗಿದ್ದಾನೆ. ಪುತ್ರ ಸಂತಾನ್ಯ ಭಾಗ್ಯ, ಮಾಂಗಲ್ಯ ಭಾಗ್ಯ, ವ್ಯಾಪಾರ ವೃದ್ಧಿ, ಸಂಗೀತ ಕಲಿಕೆಗೆ ಶ್ರೀ ದೇವರ ಆಶೀರ್ವಾದವಿದೆ. ಜ.19 ರಿಂದ 24 ರ ತನಕ ನಡೆಯುವ ಬ್ರಹ್ಮಕಲಶಾಭಿಷೇಕದಲ್ಲಿ ನಾವು ಕೂಡ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗೋಣ.

೧ ಕೋಟಿ ರೂ.ವೆಚ್ಚದಲ್ಲಿ ಜೀರ್ಣೋದ್ಧಾರ/ಬ್ರಹ್ಮಕಲಶೋತ್ಸವ
ದಾನಿಗಳ ನೆರವು, ಸರಕಾರದ ಅನುದಾನ ಸೇರಿದಂತೆ ಬಕ್ತಾದಿಗಳ ಪೂರ್ಣ ಸಹಕಾರದೊಂದಿಗೆ ಸುಮಾರು ೧ ಕೋಟಿ ರೂ ವೆಚ್ಚದಲ್ಲಿ ಜೀರ್ಣೋದ್ದಾರಗೊಂಡಿರುವ ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಾರಂಭವು ಜ.೧೯ ರಿಂದ ೨೪ ರ ತನಕ ವಿವಿಧ ಧಾರ್ಮಿಕ, ವೈಧಿಕ ಕಾರ್ಯಕ್ರಮಗಳೊಂದಿಗೆ ವಿಜೃಂಬಣೆಯಿಂದ ಜರಗಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಕೋವಿಡ್ ಬಗೆಗಿನ ಸರಕಾರದ ನಿಯಮಗಳನ್ನು ಪಾಲನೆ ಮಾಡಿಕೊಂಡೇ ಕಾರ್ಯಕ್ರಮ ನಡೆಯಲಿದೆ. ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ನಡೆಸುವ ಉದ್ದೇಶದಿಂದ ಈಗಾಗಲೇ ಶ್ರೀ ಕ್ಷೇತ್ರದಲ್ಲಿ ವಿವಿಧ ಸಮಿತಿಗಳನ್ನು ರಚನೆ ಮಾಡಲಾಗಿದೆ. ಆರ್ಥಿಕ ಸಮಿತಿ, ಸಾಂಸ್ಕೃತಿಕ ಸಮಿತಿ, ವೈದಿಕ ಸಮಿತಿ, ಸ್ವಚ್ಚತಾ ಸಮಿತಿ, ಪ್ರಚಾರ ಸಮಿತಿ. ಅನ್ನದಾನ ಸಮಿತಿ ಸೇರಿದಂತೆ ಪ್ರಮುಖ ಸಮಿತಿಗಳನ್ನು ಈಗಾಗಲೇ ರಚನೆ ಮಾಡಲಾಗಿದೆ.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ಕಾವು ಹೇಮನಾಥ ಶೆಟ್ಟಿ ಇವರ ನೇತ್ರತ್ವದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಅರುಣ್‌ಕುಮಾರ್ ಆಳ್ವ ಬೋಳೋಡಿ ಮತ್ತು ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾಗಿ ಶೀನಪ್ಪ ರೈ ಕೊಡಂಕೀರಿ ರವರುಗಳ ನೇತೃತ್ವದಲ್ಲಿ ಕ್ಷೇತ್ರದ ಸಕಲ ವ್ಯವಸ್ಥೆಯನ್ನೂ ಸಿದ್ದಗೊಳಿಸಲಾಗಿದೆ. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾಗಿ ಜಯರಾಮ್ ರೈ ಮಿತ್ರಂಪಾಡಿ, ಲೋಕಪ್ಪ ಗೌಡ ಕೆರೆಮನೆ, ರವಿಶೆಟ್ಟಿ ಮುಂಡೂರು ನೇಸರ, ಪ್ರಕಾಶ್ ಪುತ್ತೂರಾಯ, ಬಿ.ವಿ.ಶಗ್ರಿತ್ತಾಯ, ಮುರಳೀಧರ್ ಭಟ್ ಬಂಗಾರಡ್ಕ, ಕಾರ್ಯಾಧ್ಯಕ್ಷರಾಗಿ ಸುರೇಶ್ ಕಣ್ಣಾರಾಯ, ಬ್ರಹ್ಮಕಲಶೋತ್ಸವ ಕಾರ್ಯದರ್ಶಿಯಾಗಿ ಭಾಸ್ಕರ್ ರೈ ಗುತ್ತು, ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿಯಾಗಿ ಭಾಸ್ಕರ ಬಳ್ಳಾಲ್ ಕಾರ್ಯನಿರ್ವಹಿಸುತ್ತಿದ್ದಾರೆ. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಅರುಣ್ ಕುಮಾರ್ ಆಳ್ವ ಬೋಳೋಡಿ, ಕಾರ್ಯದರ್ಶಿ ಭಾಸ್ಕರ್ ರೈ ಗುತ್ತು, ಸದಸ್ಯರುಗಳಾಗಿ ವಿಸ್ವನಾಥ ರೈ ಕುಕ್ಕುಂಜೋಡು, ಸದಾಶಿವ ರೈ ಪೊಟ್ಟಮೂಲೆ, ಪದ್ಮಾವತಿ ಶೀನಪ್ಪ ರೈ ಕೊಡಂಕಿರಿ, ಜಯಲಕ್ಷ್ಮಿ ಗೌಡ ಬಾಳಾಯ, ರುಕ್ಮ ನಾಯ್ಕ ಮಜಲುಮನೆ, ಪ್ರಕಾಶ್ ಪುತ್ತೂರಾಯ, ಅರ್ಚಕರಾಗಿ ಸುಬ್ರಹ್ಮಣ್ಯ ಎಸ್ ಕೆ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರತೀ ಮನೆಗೂ ತಲಾ ರೂ. 5000 ದೇಣಿಗೆ
ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆಸುವ ಉದ್ದೇಶದಿಂದ ಮತ್ತು ಇದಕ್ಕಾಗಿ ಲಕ್ಷಾಂತರ ರೂ ಖರ್ಚು ಆಗಬೇಕಾದ ಹಿನ್ನೆಲೆಯಲ್ಲಿ ಕ್ಷೇತ್ರದ ವ್ಯಾಪ್ತಿಗೊಳಪಡುವ ಮುಂಡೂರು ಮತ್ತು ಕೆದಂಬಾಡಿ ಗ್ರಾಮದ ಪ್ರತೀ ಭಕ್ತಾದಿಗಳ ಮನೆಯಿಂದ ರೂ. ೫ ಸಾವಿರ ದೇಣಿಗೆ ನೀಡುವಂತೆ ಮನವಿ ಸಲ್ಲಿಸಲಾಗಿದೆ. ಪ್ರತೀ ದಿನವೂ ಅನ್ನದಾನ ನಡೆಯಲಿದೆ. ಬೆಳಿಗ್ಗೆಯಿಂದ ಉಪಹಾರ ಮಧ್ಯಾಹ್ನ ಊಟ ಸಂಜೆ ಬಳಿಕ ರಾತ್ರಿ ವೇಳಯೂ ಅನ್ನದಾನ ನಡೆಯಲಿದೆ. ಬೆಳಿಗ್ಗೆ ಫಲಾಹಾರ ಮತ್ತು ತಿಂಡಿ ಮಧ್ಯಾಹ್ನ ಊಟ ಸಂಜೆ ಫಲಾಹಾರ ಬಳಿಕ ರಾತ್ರಿ ಊಟದ ವ್ಯವಸ್ಥೆ ಮಾಡಲಾಗುತ್ತದೆ. ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯ ಕಾರ್ಯ ಪೂರ್ಣಗೊಂಡಿದ್ದು ಶ್ರೀ ಕ್ಷೇತ್ರವು ಭಕ್ತರನ್ನು ಕೈಬೀಸಿ ಕರೆಯುತ್ತಿದೆ.

ಜ.18 ರಂದು ವಿವಿಧ ಕಾಮಗಾರಿಗಳ ಉದ್ಘಾಟನೆ
ಜ.18ರಂದು ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಪಾಕಶಾಲೆ, ಬೋಜನಶಾಲೆ, ಕಚೇರಿ, ರಂಗಮಂದಿರ, ಮುಖ್ಯದ್ವಾರ, ಇಂಟರ್‌ಲಾಕ್, ಮೇಲ್ಚಾವಣಿ, ಕೈ ಸಂಕ, ಉಗ್ರಾಣ ಮತ್ತು ತಡೆ ಬೇಲಿಯ ಉದ್ಘಾಟನಾ ಕಾರ್ಯಕ್ರಮ ಹಾಗೂ ಆಲಡ್ಕದಲ್ಲಿ ಆಲದ ಮರ ನೆಡುವ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು, ಎನ್ ರಾಮಯ್ಯ ರೈ ತಿಂಗಳಾಡಿ, ಸುರೇಶ್‌ಕುಮಾರ್ ಸೊರಕೆ, ವೆಂಕಟಕೃಷ್ಣ ಪುತ್ತೂರಾಯ, ಸದಾರಾಮ ಆಳ್ವ ಬೋಳೋಡಿ ಮಿತ್ರಂಪಾಡಿ ಜಯರಾಮ ರೈ ಅಬುದಾಬಿ, ಡಾ.ಪ್ರಸಾದ್ ಭಂಡಾರಿ, ಡಾ.ಸುರೇಶ್ ಪುತ್ತೂರಾಯ, ಡಾ.ಶ್ರೀಪತಿ ರಾವ್,ಡಾ.ಶ್ರೀಕಾಂತ್ ರಾವ್, ಲಕ್ಷ್ಮೀನಾರಾಯಣ ಕಡಂಬಳಿತ್ತಾಯ, ಸುರೇಶ್ ಕಣ್ಣಾರಾಯ ಬನೇರಿ, ರವಿಶೆಟ್ಟಿ ಮೂಡಂಬೈಲು ನೇಸರ ಕಂಪ,ಕುದ್ಕಾಡಿ ಶೀನಪ್ಪ ರೈ ಕೊಡಂಕೀರಿ,ಸಂತೋಷ್ ಕುಮಾರ್ ರೈ ನಳೀಲು, ಕಡಮಜಲು ಸುಬಾಸ್ ರೈ, ಬೋಳೋಡಿ ಚಂದ್ರಹಾಸ ರೈ ಮೊದಲಾದವರು ಭಾಗವಹಿಸಲಿದ್ದಾರೆ. ಜ.೧೯ ರಂದು ಹಸಿರುವಾಣಿ ಉದ್ಘಾಟನೆ ನಡೆಯಲಿದೆ. ಮುಂಡೂರು ಗ್ರಾಪಂ ಅಧ್ಯಕ್ಷೆ ಪುಷ್ಪಾ ಮತ್ತು ಕೆದಂಬಾಡಿ ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರ ಹಸಿರುವಾಣಿಯನ್ನು ಉದ್ಘಾಟನೆ ಮಾಡಲಿದ್ದಾರೆ.ಸರಕಾರದ ಕೋವಿಡ್ ನಿಯಮಗಳನ್ನು ಅನುಸರಿಸಿಕೊಂಡು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವ್ಯವಸ್ಥಾಪನಾ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ಜೀರ್ಣೋದ್ದಾರ ಸಮಿತಿಯ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.