ಇಂದು ಸಮಾಜ ಸುಧಾರಕ ಮಹಾಪುರುಷ ಸ್ವಾಮಿ ವಿವೇಕಾನಂದ ಜನ್ಮ ದಿನ-ರಾಷ್ಟ್ರೀಯ ಯುವ ದಿನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನಮ್ಮ ಭಾರತ ದೇಶಕ್ಕೆ ದೊಡ್ಡ ಪರಂಪರೆ ಇದೆ. ಇಲ್ಲಿ ಹಲವಾರು ಸಮಾಜ ಸುಧಾರಕರು, ಮಹಾಪುರುಷರು ಜನ್ಮವೆತ್ತಿದ್ದಾರೆ. ೧೯ನೇ ಶತಮಾನದಲ್ಲಿ ಭಾರತದಲ್ಲಿ ಸಾಮಾಜಿಕ, ಧಾರ್ಮಿಕ ಜಾಗೃತಿ ಮೂಡಿಸಿದೆ. ಅನೇಕ ಅಮಾಜ ಸುಧಾರಕರು ತಮ್ಮ ಆದ ಕೊಡುಗೆಗಳನ್ನು ನೀಡಿದ್ದಾರೆ. ಇಂತಹ ಸಮಾಜ ಸುಧಾರಕರಲ್ಲಿ ಸ್ವಾಮಿ ವಿವೇಕಾನಂದರು ಒಬ್ಬರಾಗಿರುತ್ತಾರೆ.

ವಿವೇಕಾನಂದರು ೧೮೬೩ ಜನವರಿ ೧೨ರಂದು ಕಲ್ಕತ್ತೆಯಲ್ಲಿ ಜನಿಸಿದರು. ತಂದೆ ವಿಶ್ವನಾಥದತ್ತ, ತಾಯಿ ಭುವನೇಶ್ವರಿ ದೇವಿ ವಿವೇಕಾನಂದರ ಮೊದಲ ಹೆಸರು ನರೇಂದ್ರನಾಥದತ್ತ ಅಧ್ಯಯನದಲ್ಲಿ ಏಕಾಗ್ರತೆಯನ್ನು ಅಳಿದುಕೊಳ್ಳುವ ಕುತೂಹಲವಿತ್ತು. ಪದವಿ ಪರೀಕ್ಷೆಯನ್ನು ಪಾಸುಮಾಡಿ ಕಾನೂನು ಅಭ್ಯಾಸಕ್ಕೆ ಸೇರಿದರು. ರಾಮಕೃಷ್ಣ ಪರಮಹಂಸರ ಶಿಷ್ಯರಾಗಿದ್ದ ಇವರು ತಂದನಂತರ ಸನ್ಯಾಸ ಸ್ವೀಕರಿಸಿದರು. ನಂತರ ಭರತ ಖಂಡವನ್ನು ಕಾಲ್ನಡಿಗೆಯಲ್ಲಿ ಸಂಚರಿಸಿದ ವಿವೇಕಾನಂದರು ಭಾರತದ ಅಂದಿನ ಸಾಮಾಜಿಕ ಸ್ಥಿತಿಗತಿಯನ್ನು ಕಂಡು ಮರುಗಿದರು. ಕನ್ಯಾಕುಮಾರಿ ಭೂಶಿರದಲ್ಲಿ ಧ್ಯಾನಸ್ಥರಾಗಿ ದೇಶ ಸೇವೆಗೆ ಪಣತೊಟ್ಟರು. ೧೮೯೩ರಲ್ಲಿ ಅಮೇರಿಕದ ಚಿಕಾಗೋ ನಗರದಲ್ಲಿ ನಡೆದ ಪ್ರಥಮ ವಿಶ್ವ ಸರ್ವಧರ್ಮ ಸಮ್ಮೇಳದಲ್ಲಿ ಭಾಗವಹಿಸಿ ವೇದಾಂತವನ್ನು ಕುರಿತು ಮಾಡಿದ ಭಾಷಣ ಅವರನ್ನು ವಿಶ್ವ ವಿಖ್ಯಾತರನ್ನಾಗಿಸಿತು. ಮೂರು ವರ್ಷಗಳ ಕಾಲ ವಿದೇಶದಲ್ಲಿ ಸಂಚರಿಸಿ ಚರ್ಚಾ ಸಭೆಗಳಲ್ಲಿ ಭಾಗವಹಿಸಿ ನಂತರ ಭಾರತಕ್ಕೆ ಮರಳಿ ಕನುಆಕುಮಾರಿಯಿಂದ ಕಾಶ್ಮೀರದವರೆಗೆ ಅಪನ್ಯಾಸ, ಯಾತ್ರೆಗಳನ್ನು ನಡೆಸಿ ಯುವಜನರಲ್ಲಿ ಜಾಗೃತಿ ಮೂಡಿಸಿದರು. ಆನರ ಸರ್ವತೋಮುಖಭಿವೃದ್ಧಿಗೆ ಸಹಾಯ ಮಾಡಲು ಮಾನವಹಿತ ಮತ್ತು ಸಮಾಜ ಸೇವೆಯನ್ನು ನಿರಂತರವಾಗಿ ನಡೆಸಿಕೊಂಡು ಹೋಗಲು ಅವರು ರಾಮಕೃಷ್ಣಮಿಷನ್ ಸ್ಥಾಪಿಸಿದರು. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿಯೂ ಪ್ರಮುಖ ವಹಿಸಿ ಯುವಜನರಲ್ಲಿ ಸ್ಫೂರ್ತಿ ತುಂಬಿದರು. ಬಡವರ ಸೇವೆಗೆ ಕರೆ ನೀಡಿದರು. ಒಟ್ಟಾರೆ ಭಾರತದ ಉನ್ನತಿಯ ಕನಸನ್ನು ಕಂಡರು. ವಿವೇಕಾನಂದರ ಶೈಕ್ಷಣಿಕ, ಆಧ್ಯಾತ್ಮಿಕ, ವೈಜ್ಞಾನಿಕ ವಿಚಾರಧಾರೆಗಳು, ಚಿಂತನೆಗಳು ಸರ್ವಕಾಲಕ್ಕೂ ಮಾನ್ಯವಾದುದು. ನಮ್ಮೆಲ್ಲರ ಬದುಕಿಗೆ ದಾರಿದೀಪವೂ ಆಗಿದೆ.

ಸ್ವಾಮಿ ವಿವೇಕಾನಂದರು ೧೯೦೨ ಜುಲೈ ೪ರಂದು ೩೯ನೇ ವಯಸ್ಸಿನಲ್ಲಿ ದೈವಾಧೀನರಾದರು. ಭೂಮಿಯ ಮೇಲೆ ತಾವು ಬದುಕಿದ್ದ ಅಲ್ಪಾವಧಿಯಲ್ಲೇ ಜಗತ್ತಿಗೆ ಭಾರತದ ಪರಿಚಯ ಮಾಡಿಕೊಡುವುದರಲ್ಲಿ ಮತ್ತು ಭಾರತೀಯರಿಗೆ ತಮ್ಮ ಸಂಸ್ಕೃತಿಯ ಪರಂಪರೆಯನ್ನು ಕರ್ತವ್ಯವನ್ನು ತಿಳಿಸಿಕೊಡುವಲ್ಲಿ ಯಶಸ್ಸುಗಳಿಸಿದರು. ರಾಷ್ಟ್ರೀಯ ಯುವದಿನ ಸ್ವಾಮಿ ವಿವೇಕಾನಂದರ ಹುಟ್ಟು ಹಬ್ಬದ ಸವಿನೆನಪಿಗಾಗಿ ಜನವರಿ ೧೨ರ ದಿನವನ್ನು ರಾಷ್ಟ್ರೀಯ ಯುವದಿನ ಎಂದು ಆಚರಿಸಲಾಗುತ್ತದೆ. ೧೯೮೪ರಲ್ಲಿ ಭಾರತ ಸರಕಾರ ಈ ದಿನವನ್ನು ಯುವದಿನವಾಗಿ ಆಚರಿಸುವಂತೆ ಘೋಷಣೆಯನ್ನು ಹೊರಡಿಸಿತು. ಸ್ವಾಮಿ ವಿವೇಕಾನಂದರ ತತ್ವಗಳು ಆದರ್ಶಗಳು ಭಾರತ ಯುವಜನತೆಯ ದೊಡ್ಡ ಸಂಪನ್ಮಾಉಲ ಹಾಗೂ ಸ್ಫೂರ್ತಿಯ ಮೂಲ ಎಂದು ಪರಿಗಣಿಸಿ ೧೯೮೫ರ ನಂತರ ಪ್ರತಿವರ್ಷ ಜನವರಿ ೧೨ರನ್ನು ರಾಷ್ಟ್ರೀಯ ಯುವಜನವನ್ನಾಗಿ ಆಚರಿಸಲಾಗುತ್ತದೆ. ‘ಏಳಿ ಎzಳಿ ಗುರಿ ಮುಟ್ಟುವ ತನಕ ನಿಲ್ಲದಿರಿ’ ಎಂದು ಯುವಕರಿಗೆ ಕರೆಕೊಟ್ಟ ವಿವೇಕಾನಂದರಿಗೆ ಯುವಶಕ್ತಿಯ ಮೇಲೆ ಅಪಾರ ನಂಬಿಕೆ ಇತ್ತು. ಭಾರತೀಯ ಯುವಜನತೆ ಕೂಡ ವಿವೇಕಾನಂದರನ್ನು ಗುರುವಿನಂತೆ ಕಂಡವರು.

ಸ್ವಾಮಿ ವಿವೇಕಾನಂದರ ನುಡಿಮುತ್ತುಗಳು :
ನೀವು ಮಾಡುವ ಯಾವುದೇ ಕೆಲಸದ ಮೇಲೆ ಸಂಪೂರ್ಣ ಏಕಾಗ್ರತೆ ಇರಲಿ ಶಕ್ತಿಯೇ ಜೀವನ ದೌರ್ಬಲ್ಯವೇ ಮರಣ. ಸಾಮಾಜಿಕ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಿ ಧೈರ್ಯದಿಂದ ಕಾರ್ಯಮಗ್ನರಾಗಿರಿ, ಸ್ಥಿರ ಪ್ರಯತ್ನ ಮತ್ತು ಸಹನೆ ಯಶಸ್ವಿಗೆ ದಾರಿ ನಮಗಿರುವ ಅತ್ಯಂತ ಶ್ರೇಷ್ಠವಾದ ಬೆಂಬಲವೆಂದರೆ ಅದು ನಮ್ಮಲ್ಲಿ ನಮಗಿರುವ ವಿಶ್ವಾಸ, ಆತ್ಮ ಶ್ರದ್ಧೆ ಪರಿಶುದ್ಧತೆ, ಸಹನೆ ಮತ್ತು ದೃಢತೆ ಇವು ಮೂರು ಯಶಸ್ವಿಗೆ ಅವಶ್ಯಕವಾದುದು
ಇನ್ನೊಬ್ಬರಿಗಾಗಿ ಮಾಡುವ ಕೆಲಸ ಅಲ್ಪವಾಗಿದ್ದರೂ ಅದು ನಿಮ್ಮ ಸುಪ್ತಶಕ್ತಿಯನ್ನು ಜಾಗೃತಗೊಳಿಸುವುದು ಸ್ವಾಮಿ ವಿವೇಕಾನಂದರ ಆದರ್ಶತತ್ವ ನುಡಿ ಮುತ್ತುಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆದರ್ಶ ವ್ಯಕ್ತಿಗಳಾಗಿ ಬಾಳೋಣ. ಬಡವರ, ನೊಂದವರ ಬದುಕಿಗೆ ನಾವು ಬೆಳಕಾಗೋಣ.

ಜೀವನ ಕೌಶಲ್ಯಗಳು, ಜೀವನ ಮೌಲ್ಯಗಳು ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಪೂರಕರಾಗಿರುತ್ತದೆ. ಆರೋಗ್ಯಕರ ಜೀವನದತ್ತ ಗಮನಹರಿಸಿರಿ. ನಾಳಿನ ಸಂತುಷ್ಟ ಹಾಗೂ ಸುರಕ್ಷಿತ ಸಮಾಜ ನಿರ್ಮಿಸುವಲ್ಲಿ ಯುವಕರ ಪಾತ್ರ ಮಹತ್ತರವಾದುದು. ಆದರ್ಶ ಸಮಾಜವನ್ನು ನಿರ್ಮಿಸುವ ಶಕ್ತಿ ಯುವಕರಲ್ಲಿದೆ. ಇಂದು ಯುವಕರಿಗೆ ಹಿರಿಯರ, ನಮ್ಮೆಲ್ಲರ ಮಾರ್ಗ ದರ್ಶನ ಸಲಹೆ ಸೂಚನೆಗಳ ಅಗತ್ಯವಿದೆ. ಅವರ ದೈಹಿಕ ಮಾನಸಿಕ ಶಕ್ತಿಯನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳುವ ಕೆಲಸ ಆಗಬೇಕಾಗಿದೆ. ಅವರಿಗೆ ಎಲ್ಲಾ ರೀತಿಯ ಸಹಕಾರವನ್ನು ನೀಡಿ ಸ್ಫೂರ್ತಿ ತುಂಬೋಣ ರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ ಯುವ ಸಮುದಾಯಕ್ಕೆ ಶುಭಹಾರೈಕೆಗಳು ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಮಹಾನ್ ಶಕ್ತಿಯಾಗಿ ಉತ್ತಮ ಭವಿಷ್ಯವನ್ನು ಕರುಣಿಸಲಿ ಎಂದು ನಾವೆಲ್ಲರೂ ಶುಭ ಹಾರೈಸೋಣ.

 

 

 

 

 

 

 

ಲೇಖನ :
ಕೋಟಿಯಪ್ಪ ಪೂಜಾರಿ ಸೇರ
ಎಂ.ಎ.ಬಿ.ಎಡ್.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.