ಪುತ್ತೂರು ವಲಯ ಸಮಸ್ತ ಮೊಹಲ್ಲ ಖತೀಬ್ ಒಕ್ಕೂಟ ಅಸ್ತಿತ್ವಕ್ಕೆ ಅಧ್ಯಕ್ಷ ಸಯ್ಯದ್ ಹಬೀಬುರ್ರಹ್ಮಾನ್ ತಂಙಳ್ ಮುಕ್ವೆ, ಪ್ರ.ಕಾರ್ಯದರ್ಶಿ ನಝೀರ್ ಅಝ್ಹರಿ ಉಪ್ಪಿನಂಗಡಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಕೋಶಾಧಿಕಾರಿ ಅಬೂಬಕರ್ ಸಿದ್ದಿಕ್ ಅಹ್ಮದ್ ಜಲಾಲಿ ಕಲ್ಲೇಗ
  • ಸಂಘಟನಾ ಕಾರ್ಯದರ್ಶಿಯಾಗಿ ಅಹ್ಮದ್ ನಈಂ ಫೈಝಿ ಮಅಬರಿ ಕಲ್ಲುಗುಂಡಿ ಆಯ್ಕೆ

ಉಪ್ಪಿನಂಗಡಿ: ಸಮಸ್ತ ಕೇರಳ ಜಂಇಯ್ಯತುಲ್ ಖುತಬಾ ಇದರ ಪುತ್ತೂರು ವಲಯ ಸಮಸ್ತ ಮೊಹಲ್ಲ ಖತೀಬ್ ಒಕ್ಕೂಟ ಅಸ್ತಿತ್ವಕ್ಕೆ ತರಲಾಗಿ ಪ್ರಥಮ ಅಧ್ಯಕ್ಷರಾಗಿ ಸಯ್ಯದ್ ಹಬೀಬುರ್ರಹ್ಮಾನ್ ತಂಙಳ್ ಮುಕ್ವೆ, ಪ್ರಧಾನ ಕಾರ್ಯದರ್ಶಿಯಾಗಿ ನಝೀರ್ ಅಝ್ಹರಿ ಉಪ್ಪಿನಂಗಡಿ, ಉಪಾಧ್ಯಕ್ಷರಾಗಿ ಅಬ್ದುಲ್ ಹಮೀದ್ ಬಾಖವಿ ಕಬಕ, ಕೋಶಾಧಿಕಾರಿಯಾಗಿ ಅಬೂಬಕರ್ ಸಿದ್ದೀಕ್ ಅಹ್ಮದ್ ಜಲಾಲಿ ಕಲ್ಲೇಗ, ಸಂಘಟನಾ ಕಾರ್ಯದರ್ಶಿಯಾಗಿ ಅಹ್ಮದ್ ನಈಂ ಫೈಝಿ ಮಅಬರಿ ಕಲ್ಲುಗುಂಡಿ ಇವರುಗಳು ಆಯ್ಕೆಯಾಗಿದ್ದಾರೆ.

 

ಸಯ್ಯದ್ ಹಬೀಬುರ್ರಹ್ಮಾನ್ ತಂಙಳ್
ನಝೀರ್ ಅಝ್ಹರಿ
ಅಬೂಬಕರ್ ಸಿದ್ದಿಕ್ ಅಹ್ಮದ್ ಜಲಾಲಿ
ಅಹ್ಮದ್ ನಈಂ ಫೈಝಿ ಮಅಬರಿ

ಪುತ್ತೂರು ಮದರಸದಲ್ಲಿ ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ ಅಧ್ಯಕ್ಷತೆಯಲ್ಲಿ, ಸ್ಥಳೀಯ ಖತೀಬರಾದ ಅಬ್ಬಾಸ್ ಫೈಝಿ ಪುತ್ತಿಗೆ, ಶಂಸುದ್ದೀನ್ ದಾರಿಮಿ ಬೆಳ್ತಂಗಡಿ ಇವರುಗಳ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗಿ ಉಳಿದಂತೆ ಪದಾಧಿಕಾರಿಗಳನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಮೀದ್ ಬಾಖವಿ ಕಬಕ, ಅಬ್ದುಲ್ ಮಜೀದ್ ದಾರಿಮಿ ಮಿತ್ತೂರು, ಉಮರ್ ದಾರಿಮಿ ಸಾಲ್ಮರ. ಜೊತೆ ಕಾರ್ಯದರ್ಶಿಗಳಾಗಿ ಅಹ್ಮದ್ ಸ್ವಾಲಿಹ್ ಕೌಸರಿ ವಳತ್ತಡ್ಕ, ಶುಕೂರ್ ದಾರಿಮಿ ಕಾವು, ಅಬ್ದುಲ್ ಕರೀಂ ದಾರಿಮಿ ಬೊಳುವಾರು ಆಯ್ಕೆಯಾಗಿದ್ದಾರೆ.

ಜಿಲ್ಲಾ ಸಮಿತಿ ಸದಸ್ಯರುಗಳಾಗಿ ಅಬ್ದುಲ್ ರಶೀದ್ ರಹ್ಮಾನಿ ಪರ್ಲಡ್ಕ, ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಅಶ್ರಫ್ ದಾರಿಮಿ ಸಂಟ್ಯಾರ್, ಇಸ್ಹಾಕ್ ದಾರಿಮಿ ಈಶ್ವರಮಂಗಲ.

ಕಾರ್ಯಕಾರಿ ಸಮಿತಿ ಸದಸ್ಯರುಗಳು: ಉಮರ್ ದಾರಿಮಿ ಆತೂರು, ಹಸನ್ ಬಾಖವಿ ಮುಕ್ರಂಪಾಡಿ, ಅಶ್ರಫ್ ರಹ್ಮಾನಿ ಮುಂಡೋಳೆ, ಸಿದ್ದೀಕ್ ಫೈಝಿ ಸೆರ್ಕಳ, ರಶೀದ್ ದಾರಿಮಿ ಉಜಿರ್ಪಾದೆ, ಉಸ್ಮಾನ್ ದಾರಿಮಿ ಹಳೆಗೇಟು, ಜಲೀಲ್ ದಾರಿಮಿ ಕೋಡಿಯಾಡಿ, ರಫೀಕ್ ಅರ್ಶದಿ ಹಳೆನೇರಂಕಿ, ಅಬ್ದುಸ್ಸಲಾಂ ಫೈಝಿ ಅಂಚಿನಡ್ಕ ಆಯ್ಕೆಯಾಗಿದ್ದಾರೆ.

ವಿವಾಹದ ಹೆಸರಿನಲ್ಲಿ ನಡೆಯುವ ಅನಾಚಾರಗಳಿಗೆ ಕಡಿವಾಣಕ್ಕೆ ಕ್ರಮ ಸಭೆಯಲ್ಲಿ ವಿವಾಹದ ಹೆಸರಲ್ಲಿ ನಡೆಯುವ ಅನಾಚಾರಗಳ ಬಗ್ಗೆ ಮೊಹಲ್ಲಗಳಲ್ಲಿ ಜಾಗ್ರತಿ ಮೂಡಿಸುವ ಬಗ್ಗೆ ಚರ್ಚಿಸಲಾಯಿತು. ಆಡಂಬರದ ವಿವಾಹಗಳು, ತಾಳ ಇನ್ನಿತರ ಹೆಸರಲ್ಲಿ ನಡೆಯುವ ಧರ್ಮ ವಿರೋದಿ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾಗಿದ್ದು, ಈ ನಿಟ್ಟಿನಲ್ಲಿ ಮಸೀದಿಯ ಆಡಳಿತ ಸಮಿತಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಬಗ್ಗೆ ಆಗ್ರಹಿಸಲಾಗಿ ನಿರ್ಣಯ ಅಂಗೀಕರಿಸಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.