ಜ.13 ಪುತ್ತೂರು ಶಾರದಾ ಭಜನಾ ಮಂದಿರದಲ್ಲಿ ಅರ್ಧ ಏಕಾಹ ಭಜನೆ, ಉಲ್ಪೆ ಮೆರವಣಿಗೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಜ.14 ಸಂಜೆ 6ಕ್ಕೆ ಬಲ್ನಾಡು ಅಮ್ಮನೆಡೆಗೆ ಭಜನಾ ಪಾದಯಾತ್ರೆ

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿರುವ ಶಾರದಾ ಭಜನಾ ಮಂದಿರದಲ್ಲಿ 85ನೇ ವರ್ಷದ ಅರ್ಧ ಏಕಾಹ ಭಜನೆಯು ಜ.13ರ ಸೂರ್ಯೋದಯದಿಂದ ರಾತ್ರಿ 8ರ ವರೆಗೆ ವಿವಿಧ ಭಜನಾ ಮಂಡಳಿಗಳ ಸಹಕಾರದೊಂದಿಗೆ ನಡೆಯಲಿದೆ.

ಸಂಜೆ ಉಲ್ಪೆ ಮೆರವಣಿಗೆ: ಜ.3ರಂದು ನಗರ ಸಂಕೀರ್ತನೆ ಪ್ರಾರಂಭಗೊಂಡಿದ್ದು ಏಕಾಹ ಭಜನೆಯ ಪ್ರಯುಕ್ತ ಜ.13ರಂದು ಸಂಜೆ 6ಕ್ಕೆ ಉಲ್ಪೆ ಮೆರವಣಿಗೆ (ಹಣ್ಣು ಹಂಪಲು) ನಡೆಯಲಿದೆ. ರಾತ್ರಿ 8ಕ್ಕೆ ಮಂಗಳಾಚರಣೆಯೊಂದಿಗೆ ಅರ್ಧ ಏಕಾಹ ಭಜನೆ ಮುಕ್ತಾಯಗೊಳ್ಳಲಿದೆ.

ಜ.14 ಬಲ್ನಾಡು ಅಮ್ಮನೆಡೆಗೆ ಭಜನಾ ಪಾದಯಾತ್ರೆ: ಶ್ರೀ ಶಾರದಾ ಭಜನಾ ಮಂದಿರದ ವತಿಯಿಂದ ಜ.14ರಂದು ಸಂಜೆ 6ಕ್ಕೆ ಭಜನೆಯೊಂದಿಗೆ ಮಂದಿರದಿಂದ ಭಕ್ತಾದಿಗಳ ಪಾದಯಾತ್ರೆಯು ಬಲ್ನಾಡು ದಂಡನಾಯಕ ಶ್ರೀ ಉಳ್ಳಾಲ್ತಿ ದೈವಸ್ಥಾನದವರೆಗೆ ನಡೆಯಲಿರುವುದು. ಕೋವಿಡ್ ಮಾರ್ಗಸೂಚಿಯಿಂತೆ ರಾತ್ರಿ ಕರ್ಫ್ಯೂ ಇರುವುದರಿಂದ ಪಾದಯಾತ್ರೆಯು ಸಂಜೆ 6ಕ್ಕೆ ಹೊರಡಲಿರುವುದು. ಕಳೆದ ಹಲವಾರು ವರ್ಷಗಳಿಂದ ಈ ಪದ್ಧತಿ ನಡೆಯುತ್ತಿದ್ದು ಮಕರ ಸಂಕ್ರಮಣದ ಶುಭದಿನದಂದು ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದ ಸದಸ್ಯರೂ ಸೇರಿದಂತೆ ಭಕ್ತಾದಿಗಳು ಮೆರವಣಿಗೆ ಮೂಲಕ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಳ್ತಿ ದೈವಸ್ಥಾನಕ್ಕೆ ಭಜನೆ ಮೂಲಕ ತೆರಳುವರು. ಬಲ್ನಾಡು ದೈವಸ್ಥಾನಕ್ಕೆ ತೆರಳಿದ ಬಳಿಕ ನಡೆಯುವ ತಂಬಿಲ ಸೇವೆಯಲ್ಲಿ ಪಾಲ್ಗೊಂಡು ನಂತರ ಮೂಲ ದೈವಸ್ಥಾನಕ್ಕೆ ತೆರಳಿ ಅಲ್ಲಿ ಪ್ರದಕ್ಷಿಣೆ ಹಾಕುವ ಮೂಲಕ ಪುನಃ ದೈವಸ್ಥಾನಕ್ಕೆ ಬಂದು ಅಲ್ಲಿಂದ ಪುತ್ತೂರು ಮಂದಿರಕ್ಕೆ ತೆರಳಲಿದ್ದು, ಭಕ್ತಾದಿಗಳು ಕೋವಿಡ್ ನಿಯಮ ಪಾಲಿಸಿಕೊಂಡು ಸಹಕರಿಸಬೇಕೆಂದು ಮಂದಿರದ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.