ಕ್ಯಾ|ಡಾ.ಅನಿತೇಜ್ ರಾವ್‌ರವರಿಗೆ ಮಾಜಿ ಸೈನಿಕರ ಸಂಘದಿಂದ ಸನ್ಮಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಭಾರತೀಯ ಭೂ ಸೇನೆಯಲ್ಲಿ ಅಧಿಕಾರಿಯಾಗಿ ಆಯ್ಕೆಯಾಗಿ, ಪ್ರಸ್ತುತ ೧೮ ಸಾವಿರ ಅಡಿ ಎತ್ತರದ ಬಟಾಲಿಕ್ ಪ್ರದೇಶದಲ್ಲಿ ಆರ್ಮಿ ಮೆಡಿಕಲ್ ಕೋರ್‌ನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಕ್ಯಾಪ್ಟನ್ ಡಾ.ಅನಿತೇಜ್ ರಾವ್ ಇವರನ್ನು ಪುತ್ತೂರು ಮಾಜಿ ಸೈನಿಕರ ಸಂಘದ ವತಿಯಿಂದ ಜ.೧೧ ರಂದು ಸೈನಿಕ ಭವನದಲ್ಲಿ ಸನ್ಮಾನಿಸಲಾಯಿತು.

ರಜೆಯ ನಿಮಿತ್ತ ಪುತ್ತೂರಿಗೆ ಆಗಮಿಸಿದ್ದ ಕ್ಯಾಪ್ಟನ್ ಡಾ.ಅನಿತೇಜ್ ರಾವ್‌ರವರು ಕರ್ತವ್ಯಕ್ಕೆ ಹೊರಡುವ ಮುನ್ನ ಮಾಜಿ ಸೈನಿಕರ ಸಂಘವು ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿ ಮುಂದಿನ ಕರ್ತವ್ಯಕ್ಕೆ ಶುಭ ಕೋರಲಾಯಿತು. ಸಂಘದ ಸದಸ್ಯರು ಹಾಗೂ ಚಟುವಟಿಕೆಗಳ ಬಗ್ಗೆ ಎಲ್.ಇ.ಎಂ.ಪಿ ಶ್ರೀರಂಗ ಶಾಸ್ತ್ರಿರವರು ವಿವರಣೆ ನೀಡಿದರು. ಸಂಘದಲ್ಲಿನ ಪ್ರತಿ ಮಾಜಿ ಸೈನಿಕರು ಈ ಸಂದರ್ಭದಲ್ಲಿ ಅವರವರ ಪರಿಚಯ ಹಾಗೂ ರಕ್ಷಣಾ ಇಲಾಖೆಯಲ್ಲಿ ನೀಡಿದ ಸೇವೆಯ ಕುರಿತು ಕ್ಯಾಪ್ಟನ್ ಅನಿತೇಜ್‌ರವರಿಗೆ ವಿವರ ನೀಡಿದರು. ಕ್ಯಾ|ಡಾ.ಅನಿತೇಜ್‌ರವರು, ತಾನು ಎಂಬಿಬಿಎಸ್ ವೈದ್ಯಕೀಯ ಪದವಿ ಪಡೆದು ಕ್ಯಾಪ್ಟನ್ ಹುದ್ದೆಗೇರಿ ಬಟಾಲಿಕ್ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿನ ಅನುಭವವನ್ನು ಮಾಜಿ ಸೈನಿಕರೊಂದಿಗೆ ಹಂಚಿಕೊಂಡರು ಹಾಗೂ ಅಲ್ಲಿನ ಪ್ರಾಕೃತಿಕ ಸ್ಥಿತಿಗಳ ಬಗ್ಗೆ ವಿವರಣೆ ನೀಡಿದರು.

ಮಾಜಿ ಸೈನಿಕರ ಸಂಘದ ವತಿಯಿಂದ ಕರ್ನಲ್ ಜಿ.ಡಿ ಭಟ್‌ರವರು ಹೂಗುಚ್ಛ ನೀಡಿದ್ದು, ಸಂಘದ ಅಧ್ಯಕ್ಷ ಸಾರ್ಜಂಟ್ ರಾಮಚಂದ್ರ ಪುಚ್ಚೇರಿರವರು ನೆನಪಿನ ಕಾಣಿಕೆಯನ್ನು ನೀಡಿ ಶುಭ ಕೋರಿದರು. ವೇದಿಕೆಯಲ್ಲಿ ನಿವೃತ್ತ ಅಧ್ಯಾಪಕ ಸುರೇಶ್ ಶೆಟ್ಟಿ ಉಪಸ್ಥಿತರಿದ್ದು ಡಾ.ಅನಿತೇಜ್‌ರವರಿಗೆ ಶುಭ ಕೋರಿದರು. ಪೆಟ್ಟಿ ಆಫೀಸರ್ ಜಗನ್ನಾಥ್ ರೈ ವಂದಿಸಿ, ನಾಕ್ ಜ್ಯೋ ಡಿ’ಸೋಜ ಕಾರ್ಯಕ್ರಮ ನಿರೂಪಿಸಿದರು.

ಪುತ್ತೂರಿನಿಂದ ೪ನೇ ಅಧಿಕಾರಿ..
ಭಾರತೀಯ ಸೇನೆಗೆ ಈಗಾಗಲೇ ಪುತ್ತೂರಿನಿಂದ ಮೂರು ಮಂದಿ ಯುವ ಅಧಿಕಾರಿಗಳನ್ನು ಕೊಟ್ಟಿದ್ದು, ಕ್ಯಾ|ಡಾ.ಅನಿತೇಜ್ ರಾವ್‌ರವರು ನಾಲ್ಕನೇ ಯುವ ಅಧಿಕಾರಿಯಾಗಿರುತ್ತಾರೆ. ಇವರು ಚೇತನಾ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಶ್ರೀಕಾಂತ್ ರಾವ್ ಮತ್ತು ಡೆಂಟಿಸ್ಟ್ ವೈದ್ಯೆ ಡಾ.ನಂದಿತಾ ರಾವ್‌ರವರ ಪುತ್ರರಾಗಿದ್ದಾರೆ ಎಂದು ಸಂಘದ ಅಧ್ಯಕ್ಷ ರಾಮಚಂದ್ರ ಪುಚ್ಚೇರಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.