ಏಣಿತ್ತಡ್ಕ ಶ್ರೀ ಶಿರಾಡಿ ದೈವ ಮತ್ತು ಪರಿವಾರ ದೈವಗಳ ನೇಮೋತ್ಸವ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಆಲಂಕಾರು: ಕೊಯಿಲ ಗ್ರಾಮದ ಏಣಿತ್ತಡ್ಕ ಶ್ರೀ ನಾಗ ಸನ್ನಿಧಿ ಮತ್ತು ಶ್ರೀ ಗ್ರಾಮ ದೈವ ಶಿರಾಡಿ ಹಾಗು ಪರಿವಾರ ದೈವಗಳ ನೇಮೋತ್ಸವವು ಜ.10 ರಂದು ನಡೆಯಿತು. ಜ.3 ರಂದು ಗೊನೆಮುಹೂರ್ತ ನಡೆದು.ಜ.9 ರಂದು ಅದಿತ್ಯವಾರ ಹಸಿರುವಾಣಿ ಸಮರ್ಪಣೆ ನಡೆದು.

ಜ.10 ರಂದು ಬೆಳಿಗ್ಗೆ ವೆಂಕಟ್ರರಮಣ ಕುದ್ರೆತ್ತಾಯ ರವರ ನೇತೃತ್ವದಲ್ಲಿ ಸ್ಥಳ ಶುದ್ದಿ,ನಾಗದೇವರಿಗೆ ಹಾಲು ಅಭಿಷೇಕ ನಾಗತಂಬಿಲ ದೈವಗಳಿಗೆ ಕಲಶಾಭಿಷೇಕ ಮತ್ತು ತಂಬಿಲ ಸೇವೆ ನಡೆದು ಮದ್ಯಾಹ್ನ ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಿತು. ಸಾಯಂಕಾಲ ಏಣಿತಮಲೆ ಮೂಲಸ್ಥಾನದಿಂದ ಗ್ರಾಮದೈವ ಶಿರಾಡಿ ಮತ್ತು ಪರಿವಾರ ದೈವಗಳ ಭಂಡಾರ ತೆಗೆದು ವಾಲಸಾರಿಯಾಗಿ ಭಂಡಾರ ಏರಿ ಅನ್ನಸಂತರ್ಪಣೆ ನಡೆದು ಕಲುರ್ಟಿ, ಕುಪ್ಪೆ ಪಂಜುರ್ಲಿ, ಗ್ರಾಮದೈವ ಶಿರಾಡಿ ಮತ್ತು ಗುಳಿಗ ದೈವದ ನೇಮೋತ್ಸವ ನಡೆಯಿತು.

ಅಗಮಿಸಿದ ಭಕ್ತಾಧಿಗಳು ದೈವಕ್ಕೆ ಹರಕೆ ಸಮರ್ಪಣೆ ಮಾಡಿ ದೈವ,ದೇವರ ಗಂಧಪ್ರಸಾದ ಸ್ವಿಕರಿಸಿ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು ಈ ಸಂಧರ್ಭದಲ್ಲಿ ಅಡಳಿತ ಮೋಕ್ತಸರರಾದ ಆರುವಾರ ಸಂತೋಷ್ ರೈ ಸಬಳೂರು,ಉತ್ಸವ ಸಮಿತಿ ಅಧ್ಯಕ್ಷರಾದ ಮಹಾಬಲ ನಾಯ್ಕ.ಎ ಕಾರ್ಯದರ್ಶಿ ಸತೀಶ್ ನಾಯ್ಕ ಚೆಕ್ಕಿತ್ತಡ್ಕ,ಕಾರ್ಯದರ್ಶಿ ಸುಂದರ ನಾಯ್ಕ ಏಣಿತ್ತಡ್ಕ ಸೇರಿದಂತೆ ಹಲವು ಪ್ರಮುಖ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.