ಕಾವು: ಮಾಡ್ನೂರು ಗ್ರಾಮ ವ್ಯಾಪ್ತಿಯಲ್ಲಿ ಶಾಸಕರಿಂದ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ ಹಾಗೂ ನಿವೇಶನ ಹಕ್ಕು ಪತ್ರ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಾವು:ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್,ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಅರಿಯಡ್ಕ ಹಾಗೂ ಶಾಸಕರ ಅನುದಾನದಿಂದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಮತ್ತು ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಜ.15 ರಂದು ಕಾವು ಸಮುದಾಯ ಭವನ ದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ದೀಪ ಬೆಳಗಿಸಿ , 28 ಫಲಾನುಭವಿಗಳಿಗೆ ನಿವೇಶನ ಹಕ್ಕು ಪತ್ರ ವಿತರಣೆ ಮಾಡಿ ಮಾತನಾಡಿದ ಶಾಸಕ ಸಂಜೀವ ಮಠ0ದೂರು ಶಾಸಕನಾಗಿ ನನ್ನ ಕ್ಷೇತ್ರದ ಪ್ರತಿಯೊಬ್ಬ ಪ್ರಜೆಯ ಕ್ಷೇಮವನ್ನು ಕಾಯುವದು ನನ್ನ ಧರ್ಮವಾಗಿದೆ,ಕ್ಷೇತ್ರದ ಜನತೆಗೆ ಯಾವುದೇ ಚ್ಯುತಿಬಾರದ ರೀತಿಯಲ್ಲಿ ಪ್ರಾಮಾಣಿಕವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದೇನೆ,ಪ್ರತಿಯೊಬ್ಬ ವ್ಯಕ್ತಿಯು ಪ್ರಧಾನಮಂತ್ರಿ ಯವರ ಆತ್ಮನಿರ್ಭರ ಮುಂತಾದ ಯೋಜನೆಗಳ ಸದುಪಯೋಗ ಪಡೆದುಕೊಂಡು ಸ್ವಾಭಿಮಾನದಿಂದ ಸ್ವಾವಲಂಬಿಯಾಗಿ ಬದುಕಬೇಕೆಂಬುದು ಪ್ರಧಾನಿ ನರೇಂದ್ರ ಮೋದಿಯವರ ಆಶಯವಾಗಿದೆ, ಸ್ವಚ್ಛ ಭಾರತ್ ಶ್ರೇಷ್ಠ ಭಾರತ್ ಎಂಬ ದ್ಯೇಯ ವಾಕ್ಯವನ್ನು ಪ್ರತಿಯೋರ್ವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸ್ವಚ್ಛ ಮನಸ್ಸು,ಸ್ವಚ್ಛ ಮನೆ,ಸ್ವಚ್ಛ ಪರಿಸರದೊಂದಿಗೆ ಆರೋಗ್ಯವಂತ ಪ್ರಜೆಯಾಗಿ ಜೀವನ ನಡೆಸಬೇಕು ಎಂದರು,ಕಾವು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮುಡಿತ್ತಾಯ ಮಾತನಾಡಿ ಮಾಡ್ನೂರು ಗ್ರಾಮದ ಪ್ರತಿಯೊಂದು ಅಭಿವೃದ್ಧಿ ಬೇಡಿಕೆಗಳಿಗೆ ಶೀಘ್ರವಾಗಿ ಸ್ಪಂದಿಸುತ್ತಿರುವ ಶಾಸಕರಿಗೆ ಓರ್ವ ಉತ್ತಮ ಜನಪ್ರತಿನಿಧಿ ಎಂಬ ಕೀರ್ತಿ ಸಲ್ಲಬೇಕು ಎಂದರು.

ಶಾಸಕರಿಂದ ಫಲಾನುಭವಿಗಳಿಗೆನಿವೇಶನ ಹಕ್ಕು ಪತ್ರ ವಿತರಣೆ
ಮಾಣಿಯಡ್ಕದಲ್ಲಿ “ಮೋಕ್ಷಾಧಾಮ” ಹಿಂದೂರುದ್ರ ಭೂಮಿ ಲೋಕಾರ್ಪಣೆ

 

ಆಮ್ಚಿನಡ್ಕ ಬಿಂತೋಡಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ವಚ್ಚ್ಜ ಸಂಕೀರ್ಣ ಉದ್ಘಾಟನೆ

ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮಾತನಾಡಿ ಆಮ್ಚಿನಡ್ಕ ಬಿಂತೋಡಿಯಲ್ಲಿ ಉದ್ಘಾಟನೆಗೊಂಡ ಘನತ್ಯಾಜ್ಯ ವಿಲೇವಾರಿ ಘಟಕ ಸ್ವಚ್ಛ ಸಂಕೀರ್ಣದ ಸದುಪಯೋಗವನ್ನು ಎಲ್ಲ ನಾಗರಿಕರು ಪಡೆದುಕೊಂಡು ಸ್ವಚ್ಛ ಗ್ರಾಮವನ್ನಾಗಿಸುವದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಎಂದರು. ಶೈಲಜಾ ಭಟ್ ಮಾತನಾಡಿ ಅರಿಯಡ್ಕ ಗ್ರಾಮ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದ್ದು ನರೇಗಾ ಯೋಜನೆಯಡಿಯಲ್ಲಿ ಕೆರೆ ಅಭಿವೃದ್ಧಿ, ಉದ್ಯಾನವನ, ಹಾಗೂ ಆಟದ ಮೈದಾನಗಳ ಅಭಿವೃದ್ಧಿಗಳ ಸದುಪಯೋಗ ಪಡೆದುಕೊಳ್ಳುವಂತೆ ವಿನಂತಿಸಿದರು. ಸಭಾಧ್ಯಕ್ಸತೆ ವಹಿಸಿ ಮಾತನಾಡಿದ ಗ್ರಾಮ ಪಂಚಾಯತ್ ಅರಿಯಡ್ಕ ಇದರ ಅಧ್ಯಕ್ಷರಾದ ಸೌಮ್ಯ ಬಾಲಸುಬ್ರಹ್ಮಣ್ಯ ಮುಂಡಕೊಚ್ಚಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡಿದ ಶಾಸಕರಿಗೆ ಹಾಗೂ ಅಭಿವೃದ್ಧಿ ಗೆ ಸಹಕರಿಸಿದ ಎಲ್ಲಾ ನಾಗರಿಕರಿಗೂ ಅಭಿನಂದನೆ ಸಲ್ಲಿಸಿದರು.

ಅನುದಾನ ನೀಡಿದ ಶಾಸಕರಿಗೆ ಪಂಚಾಯತ್ ಸದಸ್ಯರಿಂದ ಸನ್ಮಾನ

ಸನ್ಮಾನ ಕಾರ್ಯಕ್ರಮ
ಮಾಡ್ನೂರು ಹಾಗೂ ಆರಿಯಡ್ಕ ಗ್ರಾಮ ವ್ಯಾಪ್ತಿ ಗೆ ಸುಮಾರು ಒಂದು ಕೋಟಿ ಎಂಬತ್ತು ಲಕ್ಷ ಅನುದಾನ ನೀಡಿದ ಶಾಸಕ ಸಂಜೀವ ಮಠ0ದೂರು ಇವರಿಗೆ ಪಂಚಾಯತ್ ಸದಸ್ಯರಿಂದ ಶಾಲು ಹೊದಿಸಿ ಹಾರ ಹಾಕಿ ಸ್ಮರಣಿಕೆ ಫಲಪುಷ್ಪ ನೀಡಿ ಸನ್ಮಾನಿಸಲಾಯಿತು, ಮಾಡ್ನೂರು ಗ್ರಾಮದ ಕಾವು ಸಿ ಆರ್ ಸಿ ಕಾಲೊನಿಯ ಕುಟುಂಬಕ್ಕೆ ಗ್ರಾಮ ಪಂಚಾಯತ್ ನಿವೇಶನ ಹಕ್ಕು ಪತ್ರ ನೀಡುವಲ್ಲಿ ಅವಿರತ ಶ್ರಮ ಪಟ್ಟು ನಿವೇಶನ ಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ ಅರಿಯಡ್ಕ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಲೋಕೇಶ್ ಚಾಕೋಟೆಯವರಿಗೆ ಸಿ ಆರ್ ಸಿ ಕಾಲೋನಿ ಫಲಾನುಭವಿಗಳ ಪರವಾಗಿ ಶಾಲು ಹೊದಿಸಿ ಹಾರ ಹಾಕಿ ಫಲಪುಷ್ಪ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ನಿವೇಶನ ಹಕ್ಕುಪತ್ರ ನಿವೇಶನ ಹಕ್ಕುಪತ್ರ ಪಡೆದ ಫಲಾನುಭವಿಗಳ ಪರವಾಗಿ ಸುಧೀಂದ್ರ ಕಾವು ಮಾತನಾಡಿ ಸ್ವಂತ ನಿವೇಶನ ನೀಡುವಲ್ಲಿ ಸಹಕರಿಸಿದ ಶಾಸಕರು,ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರಿಗೆ, ಸದಸ್ಯರು,ಅಧಿಕಾರಿ ವರ್ಗದವರಿಗೆ ಕ್ರತಜ್ಞತೆ ಸಲ್ಲಿಸಿದರು.

ಕಾವು ಸಿ ಆರ್ ಸಿ ಕಾಲೊನಿಯ ಕುಟುಂಬಗಳಿಗೆ ನಿವೇಶನ ಹಕ್ಕು ಪತ್ರ ವಿತರಣೆ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ ಪಂಚಾಯತ್ ಸದಸ್ಯ ಲೋಕೇಶ್ ಚಾಕೋಟೆ ಇವರಿಗೆ ಕಾವು ಸಿ ಆರ್ ಸಿ ಕಾಲೋನಿ ಫಲಾನುಭವಿಗಳಿಂದ ಗೌರವಾರ್ಪಣೆ

 

ಆಮ್ಚಿನಡ್ಕ ಕಾಲುಸಂಕ ದಾರಿ ಉದ್ಘಾಟನೆ

 

ಕಾವು ಮಾಣಿಯಡ್ಕ ರಸ್ತೆ ಕಾಮಗಾರಿಗೆ ಶಿಲಾನ್ಯಾಸ

 

ಸಾಂತ್ಯ ಸಸ್ಪೆಟ್ಟಿ ರಸ್ತೆ ಕಾಮಗಾರಿಗೆ ಶಿಲಾನ್ಯಾಸ
ಸಾಂತ್ಯ ಪಳನೀರು ಮುಗುಳಿ ರಸ್ತೆ ಕಾಮಗಾರಿಗೆ ಶಿಲಾನ್ಯಾಸ

ಕಾವು ಮಾಣಿಯಡ್ಕ ದಲ್ಲಿ ಲೋಕರ್ಪಣೆಗೊಂಡ ‘ಮೋಕ್ಷಾಧಾಮ’ ಹಿಂದೂ ರುದ್ರ ಭೂಮಿಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಒಂದು ಲಕ್ಷ ಅನುದಾನ ಬಂದಿದ್ದು ಇದರ ಪರವಾಗಿ ಯೋಜನೆಯ ಪ್ರತಿನಿಧಿ ಸಾವಿತ್ರಿ ಪೊನ್ನೇತಡ್ಕ ಇವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು, ಕಾರ್ಯಕ್ರಮವನ್ನು ಪ್ರಾಸ್ತಾವಿಕ ಮಾತಿನೊಂದಿಗೆ ಪಂಚಾಯತ್ ಉಪಾಧ್ಯಕ್ಷ ಸಂತೋಷ್ ಮಣಿಯಣಿ ಸ್ವಾಗತಿಸಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪದ್ಮಾ ಕುಮಾರಿ ವಂದಿಸಿದರು, ಪಂಚಾಯತ್ ಸದಸ್ಯ ಸದಾನಂದ ಮಣಿಯಾಣಿ ಕಾರ್ಯಕ್ರಮ ನಿರೂಪಿಸಿದರು,ಕಾರ್ಯಕ್ರಮ ದಲ್ಲಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್,ಕುಂಬ್ರ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ನಿತೀಶ್ ಕುಮಾರ್ ಶಾಂತಿವನ,ಕಾವು ಪಂಚಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರ ಶೇಖರ್ ರಾವ್ ನಿಧಿಮುಂಡ, ತಾಲೂಕು ಕೆಡಿಪಿ ನಾಮನಿರ್ದೇಶಿತ ಸದಸ್ಯ ಲೋಹಿತ್ ಅಮ್ಚಿನಡ್ಕ ,ಪಂಚಾಯತ್ ಸದಸ್ಯರಾದ ಲೋಕೇಶ್ ಚಾಕೋಟೆ, ಸದಾನಂದ ಮಣಿಯಣಿ, ವಿಜಿತ್ ಕೆರೆಮಾರು ,ಪ್ರವೀಣ್ ಆಮ್ಚಿನಡ್ಕ,ಹೇಮಾವತಿ ಚಾಕೋಟೆ, ಅನಿತಾಜಗದೀಶ್,ರಾಜೇಶ್ ಹೆಚ್ ,ಹರೀಶ್ ರೈ ಜರತ್ತಾರು,ರೇಣುಕಾ ಸತೀಶ್,ಭಾರತಿ ವಸಂತ್,ನಾರಾಯಣ ನಾಯ್ಕ ಚಾಕೋಟೆ, ಸಾವಿತ್ರಿ ಪೊನ್ನೆತಡ್ಕ,ಮೀನಾಕ್ಷಿ, ಪುಷ್ಪಲತಾ ಮರತ್ತಮೂಲೆ,ಉಷರೇಖಾ ರೈ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಮೊದಲು ಉದ್ಘಾಟನೆ ಹಾಗೂ ಶಿಲಾನ್ಯಾಸ ಗೊಂಡ ಕಾಮಗಾರಿಗಳ ವಿವರ
1.ಕಾವು ಮಾಣಿಯಡ್ಕ ಎಂಬಲ್ಲಿ “ಮೋಕ್ಷಾಧಾಮ” ಹಿಂದೂ ರುದ್ರ ಭೂಮಿ ಲೋಕಾರ್ಪಣೆ
2.2020-2021 ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಸಸ್ಪೆಟ್ಟಿ ,ಪಳನೀರು ಮುಗುಳಿ ರಸ್ತೆ ಕಾಂಕ್ರೀಟಿಕರಣಕ್ಕೆ 10 ಲಕ್ಷ ಅನುದಾನದ ಶಿಲಾನ್ಯಾಸ
3.PWD ಟಾಸ್ಕ್ ಪೋರ್ಶ್ ಅನುದಾನದಲ್ಲಿ ಸಾಂತ್ಯ ಸಸ್ಪೆಟ್ಟಿ ಪ.ಪಂಗಡಗಳ ಕಾಲೋನಿ ರಸ್ತೆಗೆ ಕಾಂಕ್ರೀಟಿಕರಣಕ್ಕೆ 10 ಲಕ್ಷ ಅನುದಾನದ ಶೀಲಾನ್ಯಾಸ
4.2020-2022ನೇ ಸಾಲಿನ ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ 20 ಲಕ್ಷ ಹಾಗೂ PWD ಟಾಸ್ಕ್ ಪೋರ್ಶ್ ಅನುದಾನದಲ್ಲಿ 10 ಲಕ್ಷ ಒಟ್ಟಾಗಿ ಕಾವು ಮಾಣಿಯಡ್ಕ ರಸ್ತೆಗೆ 30 ಲಕ್ಷ ಕಾಮಗಾರಿಗೆ ಶಿಲಾನ್ಯಾಸ
5.ಗ್ರಾಮ ಬಂಧು ಯೋಜನೆಯಡಿ ಯಲ್ಲಿ ಆಮ್ಚಿನಡ್ಕ ದಲ್ಲಿ ನಿರ್ಮಾಣವಾದ ಕಾಲು ಸಂಕ ಉದ್ಘಾಟನೆ
6. ಆಮ್ಚಿನಡ್ಕ ಬಿಂತೋಡಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ವಚ್ಛ ಸಂಕೀರ್ಣ ಉದ್ಘಾಟನೆ
7.28 ಕುಟುಂಬಗಳಿಗೆ ನಿವೇಶನ ಹಕ್ಕು ಪತ್ರ ವಿತರಣೆ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.