ತೆಂಕಿಲ: ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿವೇಕಾನಂದ ಜಯಂತಿ ಆಚರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

ಪುತ್ತೂರು:  ಏಳಿ ಎದ್ದೇಳಿ, ಎಲ್ಲಿಯೂ ವಿಶ್ರಮಿಸದಿರಿ ಗುರಿ ಮುಟ್ಟುವ ತನಕ ಹೋರಾಡಿ ಎಂಬ ವಿವೇಕದ ಮಾತುಗಳನ್ನಾಡಿದ ಮಹಾನ್ ಸಂತ ಸ್ವಾಮಿ ವಿವೇಕಾನಂದರ ಹುಟ್ಟುಹಬ್ಬವನ್ನು ಜ.12ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಯಾದವಶ್ರೀ ಸಭಾಂಗಣದಲ್ಲಿ ವಿವೇಕಾನಂದ ಜಯಂತಿಯನ್ನು ಸರಳ ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಾಲಾ ಆಡಳಿತ ಮಂಡಳಿ ಸಂಚಾಲಕರಾದ ರವಿನಾರಾಯಣ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದು ವಿವೇಕಾನಂದರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಮೈಗೂಡಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಆಡಳಿತ ಮಂಡಳಿ ಸದಸ್ಯರಾದ  ಹರೇಕೃಷ್ಣ, ಡಾ.ಅಮೃತ ಕೃಷ್ಣಪ್ರಸಾದ್, ಕೃಷ್ಣಮೋಹನ್.ಪಿ.ಎಸ್,  ಚಂದ್ರಶೇಖರ್ ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು. ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ವಿವೇಕವಾಣಿ, ಭಾಷಣ, ಮತ್ತು ದೇಶಭಕ್ತಿಯನ್ನು ಸ್ಪುರಿಸುವ ಹಾಡುಗಳನ್ನು ಹಾಡಿದರು. ದಿವ್ಯಚೇತನಕ್ಕೆ ಪುಷ್ಪಾರ್ಚನೆ ಗೈಯುವುದರ ಮೂಲಕ ಗೌರವವನ್ನು ಸಲ್ಲಿಸಿದರು.  ಕು.ಸಾನ್ವಿ ಸ್ವಾಗತಿಸಿ, ಕು.ಸ್ತುತಿ ಶೆಟ್ಟಿ ವಂದಿಸಿದರು. ಮಾ|ಶುಭನ್ ಶೆಣೈ, ಕು ನೇಹ ಹೆಗ್ಡೆ, ಕು.ವೈಷ್ಣವಿ, ಹಾಗೂ ಮಾ.ವೇದ್ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕ-ಶಿಕ್ಷಕೇತರ ವೃಂದದವರು ಸಹಕರಿಸಿದರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.