ಬಜತ್ತೂರು: 1.15 ಕೋಟಿ ರೂ.,ಅನುದಾನದ ಕಿಜಾನ-ಬಿದಿರಾಡಿ ಪರಿಶಿಷ್ಠ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿಗೆ ಗುದ್ದಲಿಪೂಜೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಡಾ| ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ 25ಕೋಟಿ ರೂ.,ಅನುದಾನ: ಸಂಜೀವ ಮಠಂದೂರು

ನೆಲ್ಯಾಡಿ: 80 ಲಕ್ಷ ರೂ.ಅನುದಾನದಲ್ಲಿ ಡಾಮರೀಕರಣ ಹಾಗೂ 35 ಲಕ್ಷ ರೂ.,ಅನುದಾನದಲ್ಲಿ ಕಾಂಕ್ರಿಟೀಕರಣ ಸೇರಿದಂತೆ ಒಟ್ಟು 1.15 ಕೋಟಿ ರೂ.,ಅನುದಾನದಲ್ಲಿ ನಡೆಯುವ ಬಜತ್ತೂರು ಗ್ರಾಮದ ಕಿಜಾನ-ಬಿದಿರಾಡಿ ಪರಿಶಿಷ್ಠ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಜ.12ರಂದು ಬಿದಿರಾಡಿಯಲ್ಲಿ ಗುದ್ದಲಿಪೂಜೆ ನೆರವೇರಿಸಲಾಯಿತು.


ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಶಾಸಕ ಸಂಜೀವ ಮಠಂದೂರುರವರು, ಬಜತ್ತೂರು ಗ್ರಾಮದ ಬಿದಿರಾಡಿಯಲ್ಲಿ ೨೫ ಕೋಟಿ ರೂ.,ಅನುದಾನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣಗೊಳ್ಳಲಿದೆ. ಇಲ್ಲಿ ಶಿಕ್ಷಕರ ವಸತಿ ನಿಲಯ, ವಿದ್ಯಾರ್ಥಿನಿಲಯ, ಕ್ಲಾಸ್‌ರೂಂ, ಆರೋಗ್ಯ ಸಹಾಯಕಿ, ಆಟದ ಮೈದಾನ ಸೇರಿದಂತೆ ಎಲ್ಲಾ ಸೌಲಭ್ಯ ಒದಗಿಸಲಾಗುವುದು. ಇದಕ್ಕೆ ಪೂರಕವಾಗಿಯೇ ಕಿಜಾನ-ಬಿದಿರಾಡಿ ಪರಿಶಿಷ್ಠ ಜಾತಿ ಕಾಲೋನಿ ರಸ್ತೆಗೆ ೧.೧೫ ಕೋಟಿ ರೂ.,ಅನುದಾನ ನೀಡಲಾಗಿದೆ. ರಸ್ತೆ ಅಭಿವೃದ್ಧಿ ಕಾಮಗಾರಿ ಸಂದರ್ಭದಲ್ಲಿ ಊರಿನ ಜನರೂ ಸಹಕಾರ ನೀಡಬೇಕೆಂದು ಹೇಳಿದರು. ಕಿಜಾನ-ಬಿದಿರಾಡಿ ರಸ್ತೆ ಅಭಿವೃದ್ಧಿಗೆ ೨೫ ವರ್ಷದ ಹಿಂದೆ ಡಿ.ವಿ.ಸದಾನಂದ ಗೌಡರವರು ಪುತ್ತೂರು ಶಾಸಕರಾಗಿದ್ದ ವೇಳೆ ದೊಡ್ಡ ಅನುದಾನ ಬಿಡುಗಡೆಗೊಳಿಸಿದ್ದರು. ಕಿಜಾನದಲ್ಲಿ ಶಿಥಿಲಾವಸ್ಥೆಯಲ್ಲಿರುವ ಸೇತುವೆಗೂ ೧.೫೦ ಕೋಟಿ ರೂ.,ಪ್ರಸ್ತಾವನೆ ಕೆಆರ್‌ಡಿಸಿಎಲ್‌ಗೆ ಕಳುಹಿಸಿಕೊಡಲಾಗಿದೆ ಎಂದು ಹೇಳಿದ ಶಾಸಕ ಸಂಜೀವ ಮಠಂದೂರುರವರು, ಬಜತ್ತೂರು ಗ್ರಾಮದಲ್ಲಿ ೧.೧೦ ಕೋಟಿ ರೂ.,ಅನುದಾನದಲ್ಲಿ ಕುಡಿಯುವ ನೀರಿನ ಯೋಜನೆಯೂ ಅನುಷ್ಠಾನಕ್ಕೆ ಬರಲಿದೆ. ವಸತಿ ಯೋಜನೆಯಡಿ ಗ್ರಾಮಕ್ಕೆ ೪೦ ಮನೆ ಮಂಜೂರುಗೊಂಡಿದೆ. ಬೆಳಕು ಯೋಜನೆಯಡಿ ವಿದ್ಯುತ್ ಇಲ್ಲದ ಮನೆಗಳಿಗೆ ವಿದ್ಯುತ್ ಸಂಪರ್ಕವೂ ಮಾಡಿಕೊಡಲಾಗುವುದು. ಸರ್ವೆ ನಂ.೪/೧ರಲ್ಲಿ ೯೪ಸಿ, ಅಕ್ರಮ ಸಕ್ರಮದಲ್ಲಿ ಜಾಗ ಮಂಜೂರಾತಿಗೆ ಇರುವ ಸಮಸ್ಯೆಯನ್ನೂ ಸರಿಪಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.

ಗ್ರಾಮ ಸಡಕ್‌ನಲ್ಲಿ 46 ಕೋಟಿ ರೂ.,:
ಪ್ರಧಾನ ಮಂತ್ರಿ ಗ್ರಾಮಸಡಕ್ ಯೋಜನೆಯಡಿ ಪ್ರಸ್ತುತ ವರ್ಷ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ೪೬ ಕೋಟಿ ರೂ.,ಅನುದಾನ ಬಂದಿದೆ. ಇದರಲ್ಲಿ ಹೊಸ ರಸ್ತೆ ಕಾಮಗಾರಿ, ರಸ್ತೆ ನಿರ್ವಹಣೆ, ಗುಂಡಿ ಮುಚ್ಚುವ ಕಾಮಗಾರಿ ನಡೆದಿದೆ. ಅಟಲ್‌ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ವೇಳೆ ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆ ಜಾರಿಗೆ ತಂದಿದ್ದರು. ಈಗಿನ ಪ್ರಧಾನಿ ನರೇಂದ್ರ ಮೋದಿಯವರು ಈ ಯೋಜನೆಯಡಿ ಅನುದಾನ ಮಂಜೂರುಗೊಳಿಸುತ್ತಿದ್ದಾರೆ ಎಂದು ಸಂಜೀವ ಮಠಂದೂರು ಹೇಳಿದರು.

ಪಿಎಂಜಿಎಸ್‌ವೈ ಇಂಜಿನಿಯರ್ ಶ್ರೀನಿವಾಸ ಮೂರ್ತಿಯವರು ಮಾತನಾಡಿ, ಕಿಜಾನ-ಬಿದಿರಾಡಿ ರಸ್ತೆಯಲ್ಲಿ ೨.೩೬ಕಿ.ಮೀ.ರಸ್ತೆ ಡಾಮರೀಕರಣ ಹಾಗೂ ಕಾಂಕ್ರಿಟೀಕರಣ ನಡೆಯಲಿದೆ. ಕಾಮಗಾರಿ ಆರಂಭಗೊಂಡ ಬಳಿಕದ ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು. ತಾ.ಪಂ.ಮಾಜಿ ಸದಸ್ಯ ಮುಕುಂದ ಬಜತ್ತೂರು, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ಬಜತ್ತೂರು ಗ್ರಾ.ಪಂ.ಅಧ್ಯಕ್ಷೆ ಪ್ರೇಮಾ, ಉಪ್ಪಿನಂಗಡಿ ಗ್ರಾ.ಪಂ.ಅಧ್ಯಕ್ಷೆ ಉಷಾಚಂದ್ರ ಮುಳಿಯ, ಬಿಜೆಪಿ ಬಜತ್ತೂರು ಶಕ್ತಿಕೇಂದ್ರದ ಅಧ್ಯಕ್ಷ ವಸಂತ ಗೌಡ ಪಿಜಕ್ಕಳ, ಬೂತ್ ಸಮಿತಿ ಅಧ್ಯಕ್ಷ ಉಮೇಶ್ ಕಾಂಚನ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಜತ್ತೂರು ಗ್ರಾ.ಪಂ.ಸದಸ್ಯ ಸಂತೋಷ್ ಪಂರ್ದಾಜೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗ್ರಾಮಸ್ಥರಾದ ರಾಧಾಕೃಷ್ಣ ಕೆ.ಎಸ್., ಶಿವಣ್ಣ ಗೌಡ ಬಿದಿರಾಡಿ, ಲೋಕೇಶ್ ಗೌಡ ನಡ್ಪ, ಯಶವಂತ ಗುಂಡ್ಯ, ಸುನೀಲ್‌ದಡ್ಡು, ಬಜತ್ತೂರು ಗ್ರಾ.ಪಂ.ಉಪಾಧ್ಯಕ್ಷೆ ಸ್ಮಿತಾ, ಪಿಡಿಒ ಪ್ರವೀಣ್‌ಕುಮಾರ್, ಗ್ರಾ.ಪಂ.ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಗುದ್ದಲಿಪೂಜೆ ಸಂದರ್ಭದಲ್ಲಿ ಶಾಸಕರು ತೆಂಗಿನಸಸಿ ನೆಟ್ಟರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.