ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಮಿಲನ್ ಇನ್‌ಸ್ಪೈರ್ ಅವಾರ್ಡ್‌ಗೆ ಆಯ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ನೆಲ್ಯಾಡಿ ಜ್ಞಾನೋದಯ ಬೆಥನಿ ಪದವಿ ಪೂರ್ವ ಕಾಲೇಜಿನ ೮ನೇ ತರಗತಿ ವಿದ್ಯಾರ್ಥಿ ಮಿಲನ್‌ರವರು ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಶಾಲಾ ವಿದ್ಯಾರ್ಥಿಗಳಾಗಿ ನಡೆಸುವ Invotion in science pursuit for Inspired Research (INSPIRE)ಅವಾರ್ಡ್‌ಗೆ ಆಯ್ಕೆಯಾಗಿ ೧೦ ಸಾವಿರ ರೂ., ನಗದು ಬಹುಮಾನ ಪಡೆದುಕೊಂಡಿದ್ದಾರೆ.

 


ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ವಿದ್ಯಾರ್ಥಿಗಳಲ್ಲಿ ಉತ್ತಮ ಸಂಶೋಧನಾ ಗುಣವನ್ನು ಬೆಳೆಸುವ ಹಾಗೂ ಯುವ ವಿಜ್ಞಾನಿಗಳನ್ನು ಸ್ಪಷ್ಟಿಸಿ ಸೃಜನಾತ್ಮಕ ಕೌಶಲ್ಯವನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಪ್ರತಿವರ್ಷವು ಹಮ್ಮಿಕೊಳ್ಳುತ್ತಿದೆ. ಮಿಲನ್‌ರವರು ವಿದ್ಯುತ್ ಸರಬರಾಜು ಮಾಡುವ ತಂತಿಗೆ ತೊಂದರೆಯಾಗುವ ಬಾಗಿದ ಅಥವಾ ಮುರಿದು ನೇತಾಡುವ ಮರ ಕೊಂಬೆ-ರೆಂಬೆಗಳನ್ನು ಕಡಿಯಲು ಬಳಸಬಹುದಾದ Tree Pruning Vehicle ಎಂಬ ಯಂತ್ರ ಚಾಲಿತ ವಾಹವನ್ನು ಅಭಿವೃದ್ಧಿಪಡಿಸಿದ್ದರು. ಇವರಿಗೆ ವಿಜ್ಞಾನ ಶಿಕ್ಷಕಿ ವಿಶಾಖರವರು ಮಾರ್ಗದರ್ಶನ ನೀಡಿದ್ದಾರೆ. ಇವರು ನೆಲ್ಯಾಡಿಯ ವಿದ್ಯುತ್ ಬಿಡಿ ಭಾಗಗಳ ಹಾಗೂ ವಿದ್ಯುತ್ ಉಪಕರಣಗಳ ದುರಸ್ತಿಮಾಡುವ ಅಂಗಡಿಯ ಮಾಲಕ ನೆಲ್ಯಾಡಿಯ ಮನೋಜ್ ಹಾಗೂ ಬೆಥನಿ ಪ.ಪೂ.ಕಾಲೇಜಿನ ಶಿಕ್ಷಕಿ ಲಿಸ್ಸಿಯವರ ಪುತ್ರ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.