ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ – ರಾಷ್ಟ್ರೀಯ ಯುವ ಸಪ್ತಾಹ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ವಿವೇಕಾನಂದರ ಆದರ್ಶ ಇಂದಿನ ಯುವಜನತೆಗೆ ಸ್ಪೂರ್ತಿ- ರಮೇಶ್ ಬಾಬು

ಪುತ್ತೂರು: ರಾಷ್ಟ್ರ ನಿರ್ಮಾಣದಲ್ಲಿ ಯುವಜನರ ಪಾತ್ರ ಮಹತ್ತರವಾದುದು. ಸ್ವಾಮಿ ವಿವೇಕಾನಂದರ ಆದರ್ಶ ಇಂದಿನ ಯುವ ಜನರಿಗೆ ಸ್ಪೂರ್ತಿಯಾಗಲಿದೆ ಎಂದು ತಹಶಿಲ್ದಾರ್ ರಮೇಶ್ ಬಾಬು ಹೇಳಿದರು.

ತಾಲೂಕು ಪಂಚಾಯತ್ ಪುತ್ತೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪುತ್ತೂರು ಯುವಜನ ಒಕ್ಕೂಟ ಪುತ್ತೂರು ಇದರ ಸಹಯೋಗದೊಂದಿಗೆ ನಡೆದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ರಾಷ್ಟ್ರೀಯ ಯುವ ಸಪ್ತಾಹ ಮತ್ತು ಕರ್ನಾಟಕ ಯುವ ನೀತಿ 2021-22 ಅಭಿಪ್ರಾಯ ಸಂಗ್ರಹ ಕಾರ್ಯಕ್ರಮವನ್ನು ತಾಲೂಕು ಆಡಳಿತ ಸೌಧದಲ್ಲಿ ಉದ್ಘಾಟಿಸಿ ಮಾತನಾಡಿದರು. ತಾಲೂಕು ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಮಾತನಾಡಿ ಯುವಜನರಿಗೆ ಮಾದರಿ ಸ್ವಾಮಿ ವಿವೇಕಾನಂದರು ಅವರ ಸ್ಪೂರ್ತಿದಾಯಕ ಮಾತುಗಳು ಅವರ ಜೀವನ ಶೈಲಿ ಯುವಜನತೆಗೆ ಪ್ರೇರಣೆ ನೀಡುತ್ತದೆ ಎಂದು ಹೇಳಿದರು. ಸಂಪನ್ಮೂಲ ವ್ಯಕ್ತಿಯಾಗಿ ವಿವೇಕಾನಂದ ಪದವಿ ಕಾಲೇಜಿನ ಲ್ಯಾಬ್ ಸಹಾಯಕರಾದ ನಾರಾಯಣ ಕುಂಬ್ರ ಮಾತನಾಡಿ ಯುವ ನೀತಿಯು ಯುವಜನರ ಶಿಕ್ಷಣ ಉದ್ಯೋಗ, ಮೂಲಭೂತ ಸೌಕರ್ಯ ಮಾನಸಿಕತೆಯ ಆಧಾರದ ಮೇಲೆ ಗುರಿಯಾಗಿಸಿ ಇಟ್ಟುಕೊಂಡು ರೂಪಿಸಬೇಕು ಎಂದು ಅಭಿಪ್ರಾಯ ನೀಡಿದರು. ಕಾರ್ಯಕ್ರಮದಲ್ಲಿ ತಾಲೂಕು ಯುವ ಜನ ಒಕ್ಕೂಟದ ಅಧ್ಯಕ್ಷ ದಿನೇಶ್ ಸಾಲಿಯಾನ್ ಮೊದಲಾದವರು ಉಪಸ್ಥಿತರಿದ್ದರು. ತಾಲೂಕಿನ ಯುವಜನರ ಯುವ ನೀತಿಗೆ ಅಭಿಪ್ರಾಯ ಸಂಗ್ರಹಿಸಲಾಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೇಲ್ವಿಚಾರಕರಾದ ಶ್ರೀಕಾಂತ್ ಬಿರಾವು ಸ್ವಾಗತಿಸಿ ಯುವ ಜನ ಒಕ್ಕೂಟದ ಕೋಶಾಧಿಕಾರಿ ಹಮೀದ್ ಸಾಜ ವಂದಿಸಿದರು, ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿನಿ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.