ಮೂರ್ಜೆ ಮೂರ್ಕಜೆ ನಂದರವಂಶ ಒಕ್ಕಲಿಗ ಗೌಡ ತರವಾಡು ಟ್ರಸ್ಟ್ ವತಿಯಿಂದ ಶ್ರೀಕ್ಷೇತ್ರ ಶೃಂಗೇರಿ ಭೇಟಿ

0

 

ಜಗದ್ಗುರು ಶಂಕರಾಚಾರ್ಯ ಭಾರತೀತೀರ್ಥ ಸ್ವಾಮೀಜಿ ಪಾದಪೂಜೆ

ಬಂಟ್ವಾಳ ತಾಲೂಕಿನ ವಿಟ್ಲಪಡ್ನೂರು ಗ್ರಾಮದ ಮೂರ್ಜೆ ಮೂರ್ಕಜೆ ನಂದರವಂಶ ಒಕ್ಕಲಿಗ ಗೌಡ ತರವಾಡು ಟ್ರಸ್ಟ್ ವತಿಯಿಂದ ಕುಟುಂಬದ ಸದಸ್ಯರುಗಳು ಶ್ರೀಕ್ಷೇತ್ರ ಶೃಂಗೇರಿಗೆ ಸೆ.4ರಂದು ಭೇಟಿ ನೀಡಿ, ಜಗದ್ಗುರು ಶಂಕರಾಚಾರ್ಯ ಭಾರತೀ ತೀರ್ಥ ಸ್ವಾಮೀಜಿಯವರ ಪಾದಪೂಜೆ ನೆರವೇರಿಸಿದರು.

ಶೃಂಗೇರಿ ಶ್ರೀ ಶಾರದಾಂಬೆಯ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ದೇವಸ್ಥಾನಕ್ಕೆ ಸಮೀಪದಲ್ಲಿರುವ ಜಗದ್ಗುರು ಶಂಕರಾಚಾರ್ಯ ಭಾರತೀತೀರ್ಥ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳ ಪಾದಪೂಜೆ ನೆರವೇರಿಸಿದರು.


ಈ ಸಂದರ್ಭದಲ್ಲಿ ತರವಾಡು ಟ್ರಸ್ಟ್ ಅಧ್ಯಕ್ಷ ಗೋಪಾಲಕೃಷ್ಣ ಗೌಡ, ಪ್ರಧಾನ ಕಾರ್ಯದರ್ಶಿ ಹರೀಶ್ ಮೂರ್ಜೆ, ಉಪಾಧ್ಯಕ್ಷ ನವೀನ ಮುರೂರು, ಜೊತೆ ಕಾರ್ಯದರ್ಶಿ ವಸಂತ ಬೆಳ್ಳಾರೆ, ತರವಾಡು ಟ್ರಸ್ಟಿಗಳಾದ ಗಿರಿಧರಗೌಡ ಮೂರ್ಜೆ, ಕೃಷ್ಣಪ್ಪ ಗೌಡ ಪುತ್ತೂರು, ಧನಂಜಯ ಗೌಡ ಮಡಪ್ಪಾಡಿ ಪೈಲಾರು, ಶ್ರೀಧರ ಗೌಡ ಮೂರ್ಜೆ, ಹೊನ್ನಯ್ಯ ಗೌಡ ರಾಯಿ ಬಂಟ್ವಾಳ, ಚಂದ್ರಶೇಖರ ಗೌಡ ಪಂಜಿಕಲ್ಲು ಬಂಟ್ವಾಳ, ಯಶೋಧರ ಗೌಡ ಬಾಕಿಜಾಲು ಎಡಮಂಗಲ, ಬಾಬು ಗೌಡ ಪಂಜ, ಕುಶಾಲಪ್ಪ ಗೌಡ ಕುಂತೂರು, ಪವನ್ ಕುಮಾರ್ ಮುರೂರು, ಸುದರ್ಶನ ಮುರೂರು, ಅರ್ಜುನ್ ಮೂರ್ಜೆ ಸೇರಿದಂತೆ ಮೂರ್ಜೆ ಮೂರ್ಕಜೆ ನಂದರವಂಶ ಒಕ್ಕಲಿಗ ಗೌಡ ತರವಾಡು ಕುಟುಂಬದ ಸುಮಾರು ಐವತ್ತಕ್ಕೂ ಹೆಚ್ಚು ಮಂದಿ ಸದಸ್ಯರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here