ಇಂದು ಶಿಕ್ಷಕರ ದಿನಾಚರಣೆ…

0

 

ಗುರುವಿಗೊಂದು ನಮನವಿರಲಿ

✍️ ರೇಶ್ಮಾ ವೀರ ಕ್ರಾಸ್ತಾ

ಪ್ರತಿ ವರ್ಷ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. 1962ರಿಂದಲೂ ಆಚರಿಸಿಕೊಂಡು ಬರಲಾಗಿದೆ . ಈ ದಿನ ಭಾರತೀಯ ಶಿಕ್ಷಣಕ್ಕೆ ಅಪ್ರತಿಮ ಕೊಡುಗೆ ನೀಡಿದ ಶಿಕ್ಷಕ, ದಾರ್ಶನಿಕ ಭಾರತದ ಉಪ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವೂ ಹೌದು. ಶಿಕ್ಷಕ ಅನ್ನೋದು ಬರಿ ಮೂರು ಅಕ್ಷರಗಳ ಪದವಲ್ಲ ಅದು ಇಡೀ ಜಗತ್ತನ್ನು ಬೆಳಗುವ ಪದಗಳ ಸರಮಾಲೆ ಪ್ರಾಚೀನ ಕಾಲದಲ್ಲಿ ಶಿಕ್ಷಕರನ್ನು ಗುರು ಎಂದು ಕರೆಯಲಾಗುತ್ತಿತ್ತು.

 

ಗುರು ಎಂದರೆ ಸಹಸ್ರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗುವ ವ್ಯಕ್ತಿ. ಸಂಸ್ಕೃತದಲ್ಲಿ “ಗುರು” ಎಂದರೆ ಕತ್ತಲೆಯನ್ನು ಹೋಗಲಾಡಿಸುವವನು ಎಂದರ್ಥ ಅಜ್ಞಾನದಿಂದ ಸುಜ್ಞಾನದೆಡೆಗೆ ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಏಕಮಾತ್ರ ಶಕ್ತಿ ಇರುವುದು ಗುರುವಿಗೆ ಮಾತ್ರ ಆತ ಪ್ರತಿಯೊಂದು ವಿದ್ಯಾರ್ಥಿಗಳ ಬಾಳಿಗೆ ದಾರಿ ದೀಪ ಕೂಡ ಹೌದು.

ಮಕ್ಕಳ ಭವಿಷ್ಯವನ್ನು ರೂಪಿಸುವ ಪಠ್ಯಕಿಂತಲೂ ಹೆಚ್ಚಾಗಿ ವಿದ್ಯಾರ್ಥಿಗಳಲ್ಲಿ ವಿವೇಕ, ತಾಳ್ಮೆ, ದೂರ ದೃಷ್ಟಿ ಮಾನವೀಯತೆಯನ್ನು ಬೋಧಿಸುವ ಮೂಲಕ ವಿದ್ಯಾರ್ಥಿಗಳನ್ನು ಭವ್ಯ ದೇಶದ ಸತ್ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ಪ್ರತಿ ಶಿಕ್ಷಕನಲ್ಲಿರುತ್ತದೆ. ಮಗು ಮೊದಲು ಶಾಲೆಗೆ ಹೋಗುವಾಗ ಶಿಕ್ಷಕ ಹೇಳಿದನೆಲ್ಲ ನಂಬುತ್ತದೆ ಮಗುವಿನ ಜಗತ್ತಿನಲ್ಲಿ ಶಿಕ್ಷಕನೇ “ರೋಲ್ ಮಾಡೆಲ್” ಅವರೇ “ಸೂಪರ್ ಮ್ಯಾನ್” ತನ್ನ ಗುರುಗಳಿಗೆ ತಿಳಿಯದ ವಿಷಯನೇ ಇಲ್ಲ ಎಂದು ಭಾವಿಸುತ್ತದೆ. ಈ ಹಂತದಲ್ಲಿ ನೀಡಿದ ಶಿಕ್ಷಣವೇ ಮಗುವನ್ನು ಜವಾಬ್ದಾರಿಯುತ ಪ್ರಜೆಯಾಗಿ ಬೆಳೆಸುತ್ತದೆ. ಶಿಕ್ಷಕರಿಗೂ ವಿದ್ಯಾರ್ಥಿಗಳಿಗೂ ಅವಿನಾಭಾವ ಸಂಬಂಧವಿದೆ. ಮಕ್ಕಳ ವಿದ್ಯಾಭ್ಯಾಸ ದೇಶದ ಭವಿಷ್ಯವನ್ನೇ ಬದಲಿಸಿ ಬಿಡುತ್ತದೆ ಒಂದು ವೇಳೆ ಯಾವುದಾದರೂ ವ್ಯಕ್ತಿ ಉನ್ನತ ಸ್ಥಾನ ಪಡೆದರೆ ಅದಕ್ಕೆ ತಳಹದಿ ಶಿಕ್ಷಕನಾಗಿರುತ್ತಾನೆ.

ಪ್ರತಿಯೊಬ್ಬ ವಿದ್ಯಾರ್ಥಿಯ ಏಳಿಗೆಯಲ್ಲಿ ಪ್ರಮುಖ ಪಾತ್ರ ಶಿಕ್ಷಕರದಾಗಿರುತ್ತದೆ. ಅವರ ಅವಿರತ ಪರಿಶ್ರಮ, ಮಾರ್ಗದರ್ಶನ ನೀಡಿ ಸಮಾಜದಲ್ಲಿ ಸ್ಪೂರ್ತಿಯ ಉತ್ತಮ ನಾಗರಿಕರನಾಗಿ ರೂಪಿಸುವವರು ಜೀವನದ ಭದ್ರಬುನಾದಿಯನ್ನು ಹಾಕುವವರು
ಅಲ್ಬರ್ಟ್ ಐನ್ ಸ್ಟೀನ್ ಹೇಳುವಂತೆ ಸೃಜನಶೀಲ ಅಭಿವ್ಯಕ್ತಿ ಮತ್ತು ಜ್ಞಾನವನ್ನು ಜಾಗೃತಗೊಳಿಸುವುದು ಶಿಕ್ಷಕನ ಅತಿ ಶ್ರೇಷ್ಠ ಕಲೆ ವಿದ್ಯಾರ್ಥಿಗಳು ಕೌಶಲ್ಯ, ವ್ಯಕ್ತಿತ್ವ ಬೆಳವಣಿಗೆ ಸುಜ್ಞಾನದೆಡೆಗೆ ಕರೆದೊಯ್ಯುವ ಶಕ್ತಿ ಗುರುಗಳಲ್ಲಿದೆ. ಸಮಯ ಮತ್ತು ಬದುಕಿನ ಮೌಲ್ಯ ಬೋಧಿಸುವ ಅರಿವು ಅವರಿಗಿರುತ್ತದೆ ಚಿಂತನೆಯನ್ನು ಸೃಷ್ಟಿಸಿ ಅರಿವು ಮೂಡಿಸುವ ಜವಾಬ್ದಾರಿ ಶಿಕ್ಷಕನಲ್ಲಿ ಇರುತ್ತದೆ .

ವಿದ್ಯೆಯೆಂಬ ಬೆಳಕನ್ನು ಜ್ಞಾನದ ಹಣತೆಯ ಮೂಲಕ ದೀಪದಿಂದ ಜಗತ್ತಿಗೆ ಪಸರಿಸುವ ಅಮೂಲ್ಯವಾದ ಗುಣ ಅವರಲ್ಲಿರುತ್ತದೆ.

ಶಿಕ್ಷಣ ಇಂದು ಮಾರಾಟ ವಸ್ತುವಾದರೂ ಜ್ಞಾನವನ್ನು ಮಾರಾಟ ಮಾಡಲು ಸಾಧ್ಯವಿಲ್ಲ. ಅದು ಗುರುವನ್ನು ಅರಿದರೆ ಅರಿತರೆ ಮಾತ್ರ ಸಾಧ್ಯ ಇತ್ತೀಚಿನ ದಿನಗಳಲ್ಲಿ ಯುವಕರೇ ಅಪರಾಧಗಳನ್ನು ಮಾಡಿ ಪೊಲೀಸ್ ಸ್ಟೇಷನ್ಗಳಲ್ಲಿ ತಪ್ಪು ಮಾಡಿ ಶಿಕ್ಷೆ ಅನುಭವಿಸುವವರೇ ಹೆಚ್ಚು. ಇತ್ತೀಚಿಗೆ ನನ್ನ ಗುರುಗಳು ಹೇಳಿದ ಮಾತು ನೆನಪಿಸುತ ಶಾಲೆಯಲ್ಲಿ ಪೆಟ್ಟು ಕೊಡುವುದು ಕಡಿಮೆಯಾದಂತೆ ಅಪರಾಧಗಳನ್ನು ಮಾಡಿ ಪೊಲೀಸ್ ಸ್ಟೇಷನ್ನಲ್ಲಿ ಪೆಟ್ಟು ತಿನ್ನುವಂತಾಗಿದೆ ಎಂದು ಹೇಳಿದಾಗ ಅದನ್ನು ಕುಲಂಕುಷ ವಾಗಿ ಯೋಚಿಸುವಾಗ ಹೌದು ಎಂದು ಅನಿಸುತ್ತಿದೆ.

ಅಂಗನವಾಡಿಯಲ್ಲಿ ಟೀಚರ್ ಕೈ ಹಿಡಿದು ಅ, ಆ ,ಇ ,ಈ ಬರೆಸಿ ಆನಂತರ ನಾವು ಶಾಲೆ, ಕಾಲೇಜು ಮೆಟ್ಟಿಲುಗಳನ್ನು ಹತ್ತಿ ಎಲ್ಲಾ ಶಿಕ್ಷಣದ ಅರಿವನ್ನು ಮೂಡಿಸಿದ ಎಲ್ಲ ಗುರುಗಳನ್ನುನಾವು ನೆನಪಿಸಲೇಬೇಕು ನಮಿಸಲೇಬೇಕು ನಮಗೆ ಜೀವನದ ಕದನದಲ್ಲಿ ಹೋರಾಟ ಮಾಡಲು ಚಿಂತನೆ, ಅಭಿವ್ಯಕ್ತಿ, ಮಾರ್ಗದರ್ಶನ ನೀಡಿದವರು ಶಿಕ್ಷಕರು ಅವರಿಗೆ ಮೀಸಲಾದ ಈ ದಿನದಲ್ಲಿ ನೆಚ್ಚಿನ ಎಲ್ಲಾ ಗುರುಗಳಿಗೂ ಹಾಗೂ ಶಿಕ್ಷಕರಿಗೂ ಈ ಶುಭದಿನವಾದ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

*ರೇಷ್ಮಾ ವೀರ ಕ್ರಾಸ್ತ*
ಉಪನ್ಯಾಸಕಿ
ತಡಗಜೆ, ಬೆಳ್ಳಾರೆ

LEAVE A REPLY

Please enter your comment!
Please enter your name here