ಅಂಬಿಕಾ ವಿದ್ಯಾಲಯ ಸಿಬಿಎಸ್ ಇ ಯಲ್ಲಿ ರಾಷ್ಟ್ರೀಯ ಯುವ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ವಿವೇಕಾನಂದರ ಆದರ್ಶ ತತ್ವಗಳು ಎಲ್ಲರಿಗೂ ಪ್ರೇರಣೆಯಾಗಲಿ : ರಮೇಶ್
ಪುತ್ತೂರು : ನಗರದ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್ ಇ ಬಪ್ಪಳಿಗೆಯಲ್ಲಿ ಸ್ವಾಮಿ ವಿವೇಕಾನಂದರ 159 ನೇ ಜಯಂತಿ ಉತ್ಸವವನ್ನು ಆಚರಿಸಲಾಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿ    ವಿದ್ಯಾಲಯದ ಅಧ್ಯಾಪಕ ರಮೇಶ್ ಮಾತನಾಡುತ್ತಾ ಜನವರಿ 12 ಅಂದಾಕ್ಷಣ ನೆನಪಾಗುವುದು ರಾಷ್ಟ್ರೀಯ ಯುವದಿನದ ಆಚರಣೆ, ಸ್ವಾಮಿ ವಿವೇಕಾನಂದರು ಈ ದೇಶ ಕಂಡ ಮಹಾಸಂತ, ಅವರು ದೇಶ -ವಿದೇಶಗಳಲ್ಲೂ ಸಂಚರಿಸಿ  ಹಿಂದೂ ಸಂಸ್ಕೃತಿ ಯನ್ನು ಮೊತ್ತ ಮೊದಲಿಗೆ ಪ್ರಚಾರ ಮಾಡಿದವರು.
ಅವರು ಬಾಲ್ಯದಲ್ಲಿ ನರೇಂದ್ರ ಎಂಬ ಹೆಸರಿನಲ್ಲಿ ಅನೇಕ ಸಾಹಸಮಯ ಕೆಲಸಗಳನ್ನು ಮಾಡಿದವರು. ಧೈರ್ಯ, ಸಾಹಸ, ದಯೆ, ಅನುಕಂಪ ಕರುಣೆ ಮೊದಲಾದ ಗುಣಗಳನ್ನು ಮೈಗೂಡಿಸಿಕೊಂಡಿದ್ದರು. ಅವರ ತಾಯಿ ಬಾಲ್ಯದಲ್ಲಿ ರಾಮಾಯಣ, ಮಹಾಭಾರತ ಹಾಗೂ ಪುರಾಣ ಕಥೆಗಳನ್ನು ಹೇಳಿಕೊಡುತ್ತಿದ್ದರು. ನಂತರ ರಾಮಕೃಷ್ಣ ಪರಮ ಹಂಸರಿಂದ ಸನ್ಯಾಸ ಸ್ವೀಕರಿಸಿದರು. ಇಂತಹಾ ಮಹಾನ್ ವ್ಯಕ್ತಿ ಭಾರತದ ಪ್ರಸಿದ್ಧ ಪ್ರಭಾವ ಶಾಲಿ ತತ್ವಜ್ಞಾನಿಗಳಲ್ಲಿ ಒಬ್ಬರಾಗಿದ್ದಾರೆ. ನಿರ್ಭಯತೆ, ಆಶಾವಾದ, ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಪರಿಗಣಿತವಾಗಿದ್ದಾರೆ. ಅಲ್ಲದೆ ನೇತಾಜಿ, ಭಗತ್ ಸಿಂಗ್, ಶಾಸ್ತ್ರಿ, ಅಬ್ದುಲ್ ಕಲಾಂ ರವರಂತಹ ಮಹಾನ್ ಸಾಧಕರಿಗೆ ಸ್ಫೂರ್ತಿಯಾಗಿದ್ದಾರೆ.  ಆದುದರಿಂದ ಅವರ ಆದರ್ಶ, ತತ್ವಗಳು ನಮಗೆಲ್ಲರಿಗೂ ಪ್ರೇರಣೆಯಾಗಲಿ ಎಂದು ಶುಭ ಹಾರೈಸಿದರು. ರಾಷ್ಟ್ರೀಯ ಯುವ ದಿನಾಚರಣೆಯ ಪ್ರಯುಕ್ತ ಏರ್ಪಡಿಸಿದ ಚಿತ್ರಕಲೆ, ಘೋಷಣಾ ವಾಕ್ಯಗಳು ಹಾಗೂ ಸೂಚನಾಫಲಕದ ಅಲಂಕಾರ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ವೇದಿಕೆಯಲ್ಲಿ ವಿದ್ಯಾಲಯದ ಪ್ರಾಂಶುಪಾಲರು ಮಾಲತಿ ಡಿ, ಉಪಪ್ರಾಂಶುಪಾಲರು   ಸುಜನಿ ಬೋರ್ಕರ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕು. ನಮ್ರತಾ  ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೇಷ್ಠ ಆಳ್ವ ನಿರ್ವಹಿಸಿ, ಸಂಸ್ಕೃತಿ   ವಂದಿಸಿದರು.
ಕಾರ್ಯಕ್ರಮದ ಬಳಿಕ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸ್ವಾಮಿ ವಿವೇಕಾನಂದರ ಜೀವನದಲ್ಲಿ ನಡೆದ ಘಟನೆಗಳನ್ನು ಆಧರಿಸಿದ ಪ್ರಹಸನ, ದೇಶಭಕ್ತಿ ಗಾಯನ, ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.