ಪುತ್ತೂರು: ಹಿಂದೂಗಳ ಆರಾಧ್ಯ ದೈವ ಸ್ವಾಮಿ ಕೊರಗಜ್ಜನ ಬಗ್ಗೆ ಅವಹೇಳನಕಾರಿಯಾಗಿ ಅವಮಾನ ಮಾಡಿದ ಅನ್ಯಧರ್ಮೀಯ ವ್ಯಕ್ತಿಗೆ ತಕ್ಕಶಾಸ್ತಿಯನ್ನು ಮಾಡುವಂತೆ ಇದ್ಯಪ್ಪೆ ಇಲ್ಲಿಯ ಕೊರಗಜ್ಜನ ಕಟ್ಟೆಯಲ್ಲಿ ಬಿಜೆಪಿ ಶಕ್ತಿಕೇಂದ್ರ ಕೆದಂಬಾಡಿ ಗ್ರಾಮ ಸಮಿತಿ ಇದರ ವತಿಯಿಂದ ಪ್ರಾರ್ಥನೆಯನ್ನು ಮಾಡಲಾಯಿತು. ಇದಲ್ಲದೆ ಇತ್ತೀಚೆಗೆ ಪಂಜಾಬ್ ನಲ್ಲಿ ನಡೆದಂತಹ ಘಟನೆಯನ್ನು ಉಲ್ಲೇಖಿಸಿ ನರೇಂದ್ರ ಮೋದಿಯವರಿಗೆ ಆಯುರಾರೋಗ್ಯ ಆಯುಷ್ಯವನ್ನು ಹೆಚ್ಚಿಸಿ ಇನ್ನಷ್ಟು ದೇಶ ಸೇವೆಯನ್ನು ಮಾಡುವಂತೆ ಕರುಣಿಸು ಎಂದು ಕೊರಗಜ್ಜನಲ್ಲಿ ಪ್ರಾರ್ಥಿಸಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಿತೀಶ್ ಶಾಂತಿವನ, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಯುಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಗೂ ಕೆದಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರತನ್ ರೈ ಕುಂಬ್ರ, ಶಕ್ತಿಕೇಂದ್ರ ಸಂಚಾಲಕ ನಾರಾಯಣ ಪೂಜಾರಿ ಕುರಿಕ್ಕಾರ, ಕೆದಂಬಾಡಿ ಗ್ರಾಮ ಪಂಚಾಯತ್ ಸದಸ್ಯ ಕೃಷ್ಣಕುಮಾರ್ ಇದ್ಯಪೆ, ಬೂತ್ ಸಮಿತಿ ಅಧ್ಯಕ್ಷ ಸೀತಾರಾಮ ಗೌಡ ಇದ್ಯಪೆ ಹಾಗೂ ಕೊರಗಪ್ಪ ಪೂಜಾರಿ ತಿಂಗಳಾಡಿ ಕಾರ್ಯದರ್ಶಿ ಎ.ಟಿ ನಾರಾಯಣ್, ಮಾಜಿ ಪಂಚಾಯತ್ ಸದಸ್ಯೆ ರೇಖಾ ಆರ್ ಗೌಡ, ಕವಿತಾ ಇದ್ಯಪೆ, ಚಿರಾಗ್ ರೈ ಬೆದ್ರುಮಾರು, ಶೇಖರ್ ಪೂಜಾರಿ, ಶೀನಪ್ಪ ಇದ್ಯಪೆ, ಉದಯಕುಮಾರ್ ಇದ್ಯಪೆ, ಮಹೇಶ್ ಇದ್ಯಪೆ ,ನೂತನ್ ಇದ್ಯಪೆ, ಯಮುನ ಪೂಜಾರಿ, ಮಹಾಲಿಂಗ ಇದ್ಯಪೆ, ಸುರೇಶ ಇದ್ಯಪೆ ಮತ್ತಿತರರು ಉಪಸ್ಥಿತರಿದ್ದರು.