ಸತ್ಪ್ರಜೆಗಳ ನಿರ್ಮಾಣದಲ್ಲಿ ರಾಷ್ಟ್ರೀಯ ಸೇವಾಯೋಜನೆಯ ಪಾತ್ರ ಬಹುಮುಖ್ಯ : ಡಾ|ಆಂಟನಿ ಪ್ರಕಾಶ್ ಮೊಂತೆರೋ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

ಪುತ್ತೂರು : ಎಲ್ಲವೂ ಸರಕಾರದಿಂದ ಸಾಧ್ಯವಾಗದು ಮತ್ತು ಅಂಥ ನಿರೀಕ್ಷೆಯೂ ಸರಿಯಲ್ಲ. ಸಾಮಾಜಿಕ ಬದ್ಧತೆ ಪ್ರತಿಯೊಬ್ಬ ನಾಗರೀಕನ ಜವಾಬ್ದಾರಿ. ಸಾಮಾಜಿಕ ಎಚ್ಚರದ ಅರಿವು ವಿದ್ಯಾರ್ಥಿ ಜೀವನದಲ್ಲಿಯೇ ಮೂಡಿಸಬೇಕಾದ ಅಗತ್ಯವಿದೆ. ಸತ್ಪ್ರಜೆಗಳ ನಿರ್ಮಾಣದಲ್ಲಿ ರಾಷ್ಟ್ರೀಯ ಸೇವಾಯೋಜನೆಯ ಪಾತ್ರ ಬಹು ಮುಖ್ಯ ಎಂದು ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಡಾ|ಆಂಟನಿ ಪ್ರಕಾಶ್ ಮೊಂತೆರೋ ಹೇಳಿದರು. ಕಾಲೇಜಿನಲ್ಲಿ 2021-22ನೇ ಸಾಲಿನ ಎನ್‌ಎಸ್‌ಎಸ್ ಘಟಕದ ಕಾರ್ಯಚಟುವಟಿಕೆಗಳನ್ನು ಉದ್ಘಾಟಿಟಿಸುತ್ತ ಮಾತನಾಡುತ್ತಿದ್ದರು. ಪರಿಸರ ಸ್ವಚ್ಚತೆ, ಹಸುರೀಕರಣ, ಶಾಲೆಗಳನ್ನು ದತ್ತು ತೆಗೆದುಕೊಂಡು ನೆರವು ನೀಡುವುದು, ವಿಪತ್ತಿನ ಸಂದರ್ಭಗಳಲ್ಲಿ ಸಹಾಯ, ಮೊದಲಾದ ಜವಾಬ್ದಾರಿಯ ಕಾರ್ಯಚಟುವಟಿಕೆಗಳಲ್ಲಿ ಎನ್‌ಎಸ್‌ಎಸ್ ಘಟಕದ ಸದಸ್ಯರು ತಮ್ಮನ್ನು ತೊಡಗಿಸಿಕೊಳ್ಳಬೇಕು ಮತ್ತು ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದು ಹೇಳಿ ಶುಭ ಹಾರೈಸಿದರು.


ಘಟಕದ ಸದಸ್ಯರಾದ ಸಹನ, ಸೃಜನ್, ಹರ್ಷಿಲ್ ಮತ್ತು ಅಶ್ವಿತಾ ಪ್ರಾರ್ಥಿಸಿದರು. ರಾಷ್ತ್ರೀಯ ಸೇವಾಯೋಜನಾ ಘಟಕದ ಅಧಿಕಾರಿ ಪ್ರೊ. ವಾಸುದೇವ ಎನ್ ಸ್ವಾಗತಿಸಿದರು ಮತ್ತು ಎನ್‌ಎಸ್‌ಎಸ್ ಘಟಕದ ಕಾರ್ಯಯೋಜನೆಗಳ ಕುರಿತು ಮಾಹಿತಿ ನೀಡಿದರು. ಸಹ ಅಧಿಕಾರಿ ಪ್ರೊ.ಪುಷ್ಪ ಎನ್ ವಂದಿಸಿದರು. ಸೃಜನ್ ಎಸ್ ಕಾರ್ಯಕ್ರಮವನ್ನು ನಿರ್ವಹಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.