ಲಾವಣ್ಯ ಹರ್ಬಲ್ ಬ್ಯೂಟಿಪಾರ್ಲರ್, ಲೇಡೀಸ್ ಟೈಲರಿಂಗ್ ಶುಭಾರಂಭ

0

ಪುತ್ತೂರು:ಲಾವಣ್ಯ ಹರ್ಬಲ್ ಬ್ಯೂಟಿಪಾರ್ಲರ್ ಮತ್ತು ಲೇಡೀಸ್ ಟೈಲರಿಂಗ್ ಜ.೧೩ರಂದು ದರ್ಬೆ ಕಾವೇರಿಕಟ್ಟೆಯಲ್ಲಿ ಯೂನಿಯನ್ ಬ್ಯಾಂಕ್ ಬಳಿಯ ಪೃಥ್ವಿ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು.


ನಗರ ಸಭಾ ಉಪಾಧ್ಯಕ್ಷೆ ವಿದ್ಯಾಗೌರಿ ಹಾಗೂ ಸದಸ್ಯೆ ಶಶಿಕಲಾ ಊವಯ್ಯ ನೂತನ ಮಳಿಗೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ನಗರ ಸಭಾ ಉಪಾಧ್ಯಕ್ಷ ವಿದ್ಯಾಗೌರಿಯವರು, ಓರ್ವ ಮಹಿಳೆಯಾಗಿ ಸ್ವ-ಉದ್ಯೋಗದ ಮೂಲಕ ಜೀವನದ ಹಾದಿಯನ್ನು ಮುನ್ನಡೆಸಿಕೊಂಡು ಸ್ವಾವಲಂಬಿಯಾಗಿ ಜೀವನ ನಡೆಸಿದಾಗ ನಿಜವಾದ ಮಹಿಳಾ ಸಬಲೀಕರಣವಾಗಲಿದೆ. ಈ ನಿಟ್ಟಿನಲ್ಲಿ ಸ್ವ ಉದ್ಯೋಗ ಪ್ರಾರಂಭಿಸಿರುವ ತುಳಸಿಯವರು ಮಹಿಳಾ ಸಬಲೀಕರಣಕ್ಕೆ ಉತ್ತಮ ಉದಾಹರಣೆಯಾಗಿದ್ದಾರೆ. ಇವರು ಸ್ವ ಉದ್ಯೋಗದ ಮೂಲಕ ಇತರರಿಗೆ ಉದ್ಯೋಗ ನೀಡುವ ಮೂಲಕ ಸ್ವಾವಲಂಬಿ ಮಹಿಳೆಯಾಗಿ, ಆತ್ಮನಿರ್ಬರವಾಗಿ ಬೆಳೆದಿದ್ದಾರೆ ಎಂದರು. ನಗರದಲ್ಲಿದ್ದ ಬ್ಯೂಟಿಪಾರ್ಲರ್‌ಗಳು ಇಂದು ಹಳ್ಳಿಗಳಿಗೂ ವಿಸ್ತರಣೆಯಾಗಿದೆ. ದೇಶದಲ್ಲಿ ೬೧,೦೦೦ಕ್ಕಿಂತಲೂ ಅಧಿಕ ಬ್ಯೂಟಿಪಾರ್ಲರ್‌ಗಳಿವೆ. ಇವುಗಳ ಮುಖಾಂತರ ವಾರ್ಷಿಕವಾಗಿ ರೂ.೨೦೦೦ಕೋಟಿಗಿಂತಲೂ ಅಧಿಕ ವ್ಯವಹಾರವಾಗುತ್ತಿದೆ. ನಗರ ಪಾಲಿಕೆಗಳ ಒಟ್ಟು ಆದಾಯದಲ್ಲಿ ಶೇ.೨೭ ಆದಾಯವೇ ಬ್ಯೂಟಿಪಾರ್ಲರ್‌ಗಳಿಂದ ಬರುತ್ತಿದೆ ಎಂಬ ವರದಿಯು ಪುಣೆಯ ಸಂಶೋಧನೆಯಿಂದ ಲಭ್ಯವಾಗಿದೆ ಎಂದರು.


ನಗರ ಸಭಾ ಸದಸ್ಯೆ ಶಶಿಕಲಾ ಊವಯ್ಯ ಮಾತನಾಡಿ, ಎಲ್ಲರಿಗೂ ಸರಕಾರಿ ಉದ್ಯೋಗ ದೊರೆಯಲು ಸಾಧ್ಯವಿಲ್ಲ. ಹೀಗಾಗಿ ಸ್ವ-ಉದ್ಯೋಗದ ಪ್ರಾರಂಭಿಸಿ, ಸಮಾಜದ ಇನ್ನಷ್ಟು ಮಂದಿಗೆ ಉದ್ಯೋಗ ನೀಡುವ ಮೂಲಕ ಮಾದರಿಯಾಗಿರಬೇಕು. ಹೆಣ್ಮಕ್ಕಳಿಗೆ ತಾನು ಸುಂದರವಾಗಿರಬೇಕೆನ್ನುವ ಹಂಬಲವಿದೆ. ದೇವರುಕೊಟ್ಟ ನಮ್ಮ ರೂಪಕ್ಕೆ ಮೆರುಗು ಕೊಡುವ ಕೆಲಸ ಬ್ಯೂಟಿಪಾರ್ಲರ್‌ಗಳ ಮೂಲಕ ನಡೆಯುತ್ತದೆ ಎಂದರು.
ನಗರ ಸಭಾ ಸದಸ್ಯ ಪದ್ಮನಾಭ ನಾಕ್ ಮಾತನಾಡಿ, ತಾನು ಕಲಿತ ವಿದ್ಯೆಯನ್ನು ಆಧರಿಸಿ ಸ್ವ ಉದ್ಯೋಗ ಪ್ರಾರಂಭಿಸಿರುವ ತುಳಸಿಯವರ ಸಾಧನೆಯನ್ನು ಶ್ಲಾಘಿಸಿದರು. ವೈಭವಿ ಬ್ಯೂಟಿಪಾರ್ಲರ್‌ನ ಮ್ಹಾಲಕಿ ಸಂಧ್ಯಾ ಮಾತನಾಡಿ, ಗ್ರಾಹಕರ ಸಂತೃಪ್ತಿಯ ನಮ್ಮ ಧ್ಯೇಯ. ಹೀಗಾಗಿ ಗ್ರಾಹಕರಿ ತೃಪ್ತಿಕರವಾದ ಸೇವೆ ನೀಡಬೇಕು ಎಂದು ಹೇಳಿದರು.
ಸನ್ಮಾನ:ಮ್ಹಾಲಕಿ ತುಳಸಿಯವರ ಬ್ಯೂಟಿಷಿಯನ್ ಗುರು ವೈಭವಿ ಬ್ಯೂಟಿಪಾರ್ಲರ್‌ನ ಮ್ಹಾಲಕಿ ಸಂಧ್ಯಾರವನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.


ರಾಜ್ಯಪ್ರಶಸ್ತಿ ಪುರಸ್ಕೃತ ಪ್ರಗತಿಪರ ಕೃಷಿಕ ತ್ಯಾಂಪ ನಾಯ್ಕ ಕಜೆ, ಇರ್ದೆ ಶ್ರೀವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ವಿಠಲ್ ರೈ ಬಾಲ್ಯೊಟ್ಟುಗುತ್ತು, ಉಪ್ಪಳಿಗೆ ಶ್ರೀ ವಿಷ್ಣು ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಶಾರಾದಾಂಬ ಸಮಾಜ ಸೇವಾ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ಪಡೀಲು, ಕಟ್ಟತ್ತಿಲ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೇಶವ ದೈಪಲ, ರವೀಂದ್ರನಾಥ ಮುಳ್ಳೇರಿಯಾ, ಮಂಜುನಾಥ ಮುಳ್ಳೇರಿಯಾ, ಕೇಶವ ನಾಕ್ ಬೆಳಿಯೂರುಕಟ್ಟೆ, ಕಟ್ಟಡದ ಮ್ಹಾಲಕ ಪ್ರಾನ್ಸಿಸ್ ಡಿ ಡೋಜ, ಕೇಶವ ಬೆಳಿಯೂರುಕಟ್ಟೆ, ಜೆರೋಮಿಯಸ್ ಪಾಯಸ್, ಬೆಟ್ಟಂಪಾಡಿ ಗ್ರಾ.ಪಂ ಸದಸ್ಯ ಪ್ರಕಾಶ್ ರೈ ಬೈಲಾಡಿ, ದಾಸ್‌ಪ್ರಕಾಸ್ ರೈ ಉಪ್ಪಳಿಗೆ, ಸದಾನಂದ ಆಳ್ವ ಅಜಲಡ್ಕ ಸೇರಿದಂತೆ ಹಲವು ಮಂದಿ ಆಗಮಿಸಿ ಸಂಸ್ಥೆಗೆ ಶುಭಹಾರೈಸಿದರು. ಮ್ಹಾಲಕಿ ತುಳಸಿ ಅತಿಥಿಗಳನ್ನು ಹೂ ನೀಡಿ ಸ್ವಾಗತಿಸಿದರು. ಮ್ಹಾಲಕಿಯ ಪತಿ ಧನಂಜಯ ಅತಿಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಿದರು. ಮಂಗಳೂರು ಫಾರ್ಚುನ್ ಫೈನಾನ್ಸ್‌ನ ವ್ಯವಸ್ಥಾಪಕ ಶಿವಪ್ರಸಾದ್ ಕೊಕ್ಕಡ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ನಮ್ಮಲ್ಲಿ ಐಬ್ರೋಸ್, ಬ್ಲೀಚ್ ಮತ್ತು ಫೇಶಿಯಲ್, ಮದುಮಗಳ ಅಲಂಕಾರ, ಹೇರ್‌ಸ್ಟೈಲ್, ಹೇರ್ ಸ್ಟ್ರೈಟಿಂಗ್, (ಟ್ರೀಮ್&ಪರ್ಮನೆಂಟ್), ಮೆಹಂದಿ(ಹೇರ್), ಪಿಂಪಲ್ಸ್‌ಗೆ ಚಿಕಿತ್ಸೆ, ವ್ಯಾಕ್ಸಿಂಗ್, ಪೆಡಿಕ್ಯೂರ್ ಮತ್ತು ಮೆನಿಕ್ಯೂರ್, ಮಕ್ಕಳ ಹೇರ್ ಕಟ್ಟಿಂಗ್, ಹೇರ್ ಕಲರಿಂಗ್, ತಲೆ ಹೊಟ್ಟುಗೆ ಚಿಕಿತ್ಸೆ ನೀಡಲಾಗುವುದು. ಜೊತೆಗೆ ಮದುಮಗಳ ಅಲಂಕಾರಿಕ ಆಭರಣಗಳು ಬಾಡಿಗೆಗೆ ದೊರೆಯುತ್ತದೆ ಎಂದು ಮ್ಹಾಲಕಿ ತುಳಸಿ ಧನಂಜಯ ಉಪ್ಪಳಿಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here