ಅರಿಯಡ್ಕ : ವಿವಿಧ ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಅರಿಯಡ್ಕ : ಅರಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ದರ್ಬೆತ್ತಡ್ಕ-ಕುಂಟಾಪು ರಸ್ತೆ ಶೇಖಮಲೆ-ಮಡ್ಯಂಗಳ ಪ.ಜಾತಿ ಕಾಲೋನಿರಸ್ತೆ, ಪಾಪೆಮಜಲು-ಕುರುಂಜ ರಸ್ತೆ, ಬಪ್ಪುಂಡೇಲು-ಪೈಲಕಲ್ಲು ರಸ್ತೆ, ಮಣಿಯಡ್ಕ-ಮುಂಡಕೊಚ್ಚಿ ರಸ್ತೆಗಳಿಗೆ ಶಾಸಕ ಸಂಜೀವ ಮಠಂದೂರು ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು. ನಂತರ ಮಾತಾಡಿ ಗ್ರಾಮಾಂತರ ಪ್ರದೇಶಗಳ ರಸ್ತೆಗಳನ್ನು ಕಾಂಕ್ರೀಟಿಕರಣ ಮಾಡುವುದರ ಜೊತೆಗೆ ಶಿಕ್ಷಣ ಸಂಸ್ಥೆಗಳು, ಕುಡಿಯುವ ನೀರು, ವಿದ್ಯುತ್, ಬಡವರಿಗೆ ವಸತಿ ಯೋಜನೆಗಳನ್ನು ಸರಕಾರ ನೀಡುತ್ತಿದೆ. ಯೋಜನೆ ಅನುಷ್ಠಾನ ಆಗುವ ಸಮಯದಲ್ಲಿ ಕಾಮಗಾರಿ ಕಳಪೆಯಾಗದಂತೆ ನೋಡಿಕೊಳ್ಳುವ ಜವಬ್ದಾರಿ ನಮ್ಮದು. ಕ್ಷೇತ್ರದ ಪ್ರತಿಯೊಬ್ಬ ಪ್ರಜೆಯ ಕ್ಷೇಮವೇ ನನ್ನ ಗುರಿ, ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನ ಬಿಡುಗಡೆಯಾಗಲಿದೆ. ಗ್ರಾಮ ಅಭಿವೃದ್ಧಿಯಾಗಲು ಸಹಕಾರ ಅಗತ್ಯ, ಅಭಿವೃದ್ಧಿ ಕಾರ್ಯದಲ್ಲಿ ಯಾವುದೇ ರಾಜಕೀಯಕ್ಕೆ ಅವಕಾಶವಿಲ್ಲ. ಸರಕಾರದಿಂದ ಪಡೆದ ಸೌಲಭ್ಯ ಸದುಪಯೋಗವಾಗಲಿ ಎಂದರು.

ಕಾರ್ಯಕ್ರಮದಲ್ಲಿ ಅರಿಯಡ್ಕ ಗ್ರಾ.ಪಂಚಾಯತ್ ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯ, ಉಪಾಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಪಂಚಾಯತ್ ಸದಸ್ಯರಾದ ಸದಾನಂದ ಮಣಿಯಾಣಿ, ಮೀನಾಕ್ಷಿ ಪಾಪೆಮಜಲು, ಸಾವಿತ್ರಿ ಪೊನ್ನೆತ್ತಳ, ನಾರಾಯಣ ಚಾಕೋಟೆ, ಭಾರತಿ ವಸಂತ್ ಕೌಡಿಚ್ಚಾರು, ಪುಷ್ಪಲತಾ ಮರತ್ತಮೂಲೆ, ಹರೀಶ್ ರೈ ಜಾರತ್ತಾರು, ರೇಣುಕಾ ಸತೀಶ್ ಮಡ್ಯಂಗಳ, ರಾಜೇಶ್ ತ್ಯಾಗರಾಜೆ, ಮತ್ತು ಉಷಾರೇಖಾ ರೈ, ಬಿ.ಜೆ.ಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ನಿತಿಶ್ ಶಾಂತಿವನ, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿಜಯ ಕುಮಾರ್ ರೈ ಕೊರಂಗ, ಅರಿಯಡ್ಕಶಕ್ತಿಕೇಂದ್ರದ ಅಧ್ಯಕ್ಷ ಸಚಿನ್ ರೈ ಪಾಪೆಮಜಲು, ತಾಲೂಕು ಮಾಧ್ಯಮ ಸಂಚಾಲಕ ತಿಲಕ್ ರೈ ಕುತ್ಯಾಡಿ, ಶಿವರಾಮ ಮಣಿಯಾಣಿ ಕುರಿಂಜ, ನಿವೃತ್ತ ಸೈನಿಕ ಅಮ್ಮಣ್ಣ ರೈ ಪಾಪೆಮಜಲು, ಹರಿಪ್ರಸಾದ್ ಮಾಯಿಲಕೊಚ್ಚಿ, ಕುಂಬ್ರ ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಉಮೇಶ್‌ಗೌಡ ಕನ್ನಯ, ಗಣೇಶ್‌ರೈ ಬಳಕ್ಕ, ಸತೀಶ್ ಪೈಲಕಲ್ಲು, ಪ್ರಮೋದ್ ರೈ ಪನೆಕ್ಕಳ, ನಾರಾಯಣ ಪೂಜಾರಿ ಮಡ್ಯಂಗಳ, ನಾರಾಯಣ ಗೌಡ ಪನೆಕ್ಕಳ, ಗಣೇಶ್ ಶೇಖಮಲೆ, ಸದಾಶಿವ ಮಣಿಯಾಣಿ ಕುತ್ಯಾಡಿ, ಗೋವಿಂದ ಮಣಿಯಾಣಿ, ಸುಂದರ ಶೇಖಮಲೆ, ದಾಮೋದರ ರೈ ಪನೆಕ್ಕಳ, ಪಿ. ಡ್ಲ್ಯೂ ಇಂಜಿನಿಯರ್ ರಾಜಾರಾಂ ಹಾಗೂ ಬಾಲಕೃಷ್ಣ ಭಟ್, ಪಿ.ಡಿ.ಒ ಪದ್ಮಕುಮಾರಿ, ರಮೇಶ್ಚಂದ್ರ ಮುಂಡಕೊಚ್ಚಿ, ನವೀನ್ ಭಂಡಾರಿ ಕುತ್ಯಾಡಿ, ಪ್ರಭಾಕರ ಗೌಡ ಹೊಸಮನೆ, ವಿಶ್ವನಾಥ ಕುರಿಂಜ,ದಿವಾಕರ ಮಣಿಯಾಣಿ, ಗೋಪಾಲ ಮಣಿಯಾಣಿ, ಮನೋಜ್ ರೈ ಪಾಪೆಮಜಲು, ವಿಶ್ವನಾಥ ಗೌಡ ಪಾಪೆಮಜಲು, ಅರಿಯಡ್ಕ ಮತ್ತಿತರರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.