ಭಾರೀ ಮಳೆಗೆ ಬೊಳುಬೈಲಿನಲ್ಲಿ ಕೆರೆಯಂತಾದ ರಾಷ್ಟ್ರೀಯ ಹೆದ್ದಾರಿ

0

 

ಕೃತಕ ನೆರೆಯಿಂದಾಗಿ ವಾಹನ ಸವಾರರ ಪರದಾಟ

 

ಸೆ.5ರಂದು ಸಂಜೆ ಸುರಿದ ಧಾರಾಕಾರ ಮಳೆಗೆ ಬೊಳುಬೈಲಿನ ಅರ್ಜುನ್ ಟ್ರಾನ್ಸ್ ಪೋರ್ಟ್ ಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆನೀರು ತುಂಬಿದ ಪರಿಣಾಮವಾಗಿ ಪೂರ್ತಿ ರಸ್ತೆಯೇ ಕೆರೆಯಂತಾದ ಘಟನೆ ಸಂಭವಿಸಿದೆ.
ಸಂಜೆ ಸುರಿದ ಭಾರೀ ಪ್ರಮಾಣದ ಮಳೆಯಿಂದಾಗಿ ಬೊಳುಬೈಲಿನಲ್ಲಿ ಮುಖ್ಯರಸ್ತೆಯ ಬದಿಯಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣದಿಂದಾಗಿ ಮಳೆನೀರು ಏಕಾಏಕಿಯಾಗಿ ಮುಖ್ಯರಸ್ತೆಯಲ್ಲಿ ಆವರಿಸಿದ ಪರಿಣಾಮವಾಗಿ ವಾಹನ ಸವಾರರು ತೀವ್ರ ಸಂಕಷ್ಟ ಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇದನ್ನರಿತ ಸ್ಥಳೀಯ ಯುವಕರು ಸೇರಿ ರಸ್ತೆಯಲ್ಲಿ ನಿಂತು ಕೆಲಕಾಲ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿದರು.
ತಿಂಗಳ ಹಿಂದೆಯೂ ಬೊಳುಬೈಲಿನ ಈ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಮಳೆನೀರು ರಸ್ತೆಗೆ ಆವರಿಸಿ ಕೃತಕ ನೆರೆ ಸೃಷ್ಟಿಯಾಗಿತ್ತು.
ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಕೆ.ಆರ್.ಡಿ.ಸಿ.ಎಲ್. ನವರು ರಸ್ತೆ ಬದಿಗಳಲ್ಲಿ ಸಮರ್ಪಕವಾದ ಚರಂಡಿ ನಿರ್ಮಿಸದೇ ಇರುವುದೇ ಇದಕ್ಕೆ ಕಾರಣ ಎಂದು ಸ್ಥಳೀಯರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here