ಬನ್ನೂರು ಶ್ರೀ ಮಹಾಲಕ್ಷ್ಮೀ ಮಂದಿರ- ಬ್ರಹ್ಮಕಲಶೋತ್ಸವಕ್ಕೆ ಸಿದ್ದತಾ ಸಭೆ

0


ಪುತ್ತೂರು: ಬನ್ನೂರು ಶ್ರೀ ಮಹಾಲಕ್ಷ್ಮೀ ಮಂದಿರದಲ್ಲಿ ಜ.21ರಂದು ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವ ಸಿದ್ಧತಾ ಸಭೆಯು ಜ.13ರಂದು ಮಂದಿರದ ವಠಾರದಲ್ಲಿ ನಡೆಯಿತು.

ಶ್ರೀ ಮಹಾಲಕ್ಷ್ಮೀ ಅಮ್ಮನವರ ಬಿಂಬ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಹಂಸ ಸ್ವಾಮೀಜಿಯವರು ಆಗಮಿಸಲಿದ್ದು, ಈ ಸಂದರ್ಭ ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಬ್ರಹ್ಮಕಲಶೋತ್ಸವ ಸಮಿತಿ ಮತ್ತು ಶ್ರೀ ಶಿವಪಾರ್ವತಿ ಮಂದಿರದ ಅಧ್ಯಕ್ಷರಾಗಿರುವ ವಿಶ್ವನಾಥ ಗೌಡ ಅವರು ವಿನಂತಿಸಿದರು.

ಶ್ರೀ ಶಿವಪಾರ್ವತಿ ಮಂದಿರದ ಗೌರವಾಧ್ಯಕ್ಷ ಉದಯ ಕುಮಾರ್, ಮೋಹನ್ ಜೈನ್, ನಿವೃತ್ತ ಮೆಸ್ಕಾಂ ಇಂಜಿನಿಯರ್ ಶೇಷಪ್ಪ ಪೂಜಾರಿ, ಚಂದ್ರಶೇಖರ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು, ಸದಸ್ಯೆ ಮೋಹಿನಿ ವಿಶ್ವನಾಥ್, ಪುರುಷೋತ್ತಮ ಆಚಾರ್ಯ ಸೇರಿದಂತೆ ಪರಿಸರದ ಮಂದಿ ಸಭೆಯಲ್ಲಿ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಂದರ್ಭ ವೈದಿಕ ಕಾರ್ಯಕ್ರಮ, ಅಲಂಕಾರಗಳು, ಅತಿಥಿ ಸತ್ಕಾರ, ಬ್ಯಾನರ್ ಅಳವಡಿಕೆ, ಪ್ರಸಾದ ವಿತರಣೆ ಕುರಿತು ಸಭೆಯಲ್ಲಿ ಊರವರು ವಿವಿಧ ಸಲಹೆ ಸೂಚನೆ ನೀಡಿದರು.

LEAVE A REPLY

Please enter your comment!
Please enter your name here