ನಗರಸಭೆ ವಾಣಿಜ್ಯ ಸಂಕೀರ್ಣದೆದುರು ಪತ್ತೆಯಾದ ಶವದ ಗುರುತು ಪತ್ತೆ

0

ಪುತ್ತೂರು: ಇಲ್ಲಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿಯ ನಗರಭೆ ವಾಣಿಜ್ಯ

ಸಂಕೀರ್ಣದ ಬಳಿ ಪತ್ತೆಯಾದ ಅಪರಿಚಿತ ವ್ಯಕ್ತಿಯೊಬ್ಬರ ಶವದ ಗುರತು ಪತ್ತೆ. ಸವಣೂರು ಶಾಂತಿಮೊಗರು ನಿವಾಸಿ ಪ್ರಮೋದ್ ಮೃತಪಟ್ಟವರು. ಪ್ರಮೋದ್ ಅವರು ವಾರದ ಹಿಂದೆ ಅಸ್ವಸ್ಥಗೊಂಡು ಪುತ್ತೂರು ನೆಲ್ಲಿಕಟ್ಟೆಯ ಕಟ್ಟೆಯಲ್ಲಿ ಮಲಗಿದ್ದರು. ಇದನ್ನು ಗಮನಿಸಿದ ಸಾರ್ವಜನಿಕರು ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದರು. ಜ.14 ರಂದು ಅವರು ನಗರಸಭೆ ವಾಣಿಜ್ಯ ಸಂಕೀರ್ಣದ ಎದುರು ಕುಸಿದು ಬಿದ್ದಿದ್ದರೆನ್ನಲಾಗಿದೆ. ಬೆಳಿಗ್ಗೆ ಸ್ಥಳೀಯ ರಿಕ್ಷಾ ಚಾಲಕರು ಮತ್ತು ಸ್ಥಳೀಯರು ರಸ್ತೆ ಬದಿ ಬಿದ್ದಿರುವ ವ್ಯಕ್ತಿಯ ಪೊಲೀಸರಿಗೆ ಮಾಹಿತಿ ನೀಡಿದ್ದರೆನ್ನಲಾಗಿದೆ. ಪೊಲೀಸರು ಬಂದು ಪರಿಶೀಲಿಸಿದಾಗ ಪ್ರಮೋದ್ ಮೃತಪಟ್ಟಿರುವುದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here