ಜಯಪ್ರಸಾದ್ ಅತ್ಯಡ್ಕ (ಕೆಮ್ಮೂರು)ನಿಧನ

0

ಪಂಜದ ಕೆಮ್ಮೂರು ನಿವಾಸಿ ಅತ್ಯಡ್ಕ ದಿ.ಕುಶಾಲಪ್ಪ ಗೌಡರ ಪುತ್ರ ಜಯಪ್ರಸಾದ್ ರವರು ಹೃದಯಾಘಾತದಿಂದ ಸೆ.6 ರಂದು ಸ್ವಗೃಹದಲ್ಲಿ ನಿಧನರಾದರು.ಅವರಿಗೆ 44 ವರ್ಷ ವಯಸ್ಸಾಗಿತ್ತು.

ಅವರು ಸ್ವಂತ ಜೀಪ್ ಹೊಂದಿದ್ದು ಜೀಪ್ ಬಾಡಿಗೆ ನಡೆಸುತ್ತಿದ್ದರು. ಅನೇಕ ವರ್ಷಗಳಿಂದ ಅವರ ಜೀಪಿನಲ್ಲಿ ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ಕೆಲಸಕ್ಕೆ ಜನ ಕರೆದು ಕೊಂಡು ಹೋಗಿ ಅಲ್ಲಿ ಕೆಲಸ ಮಾಡುತ್ತಿದ್ದರು.ಸುಮಾರು 2 ತಿಂಗಳಿಂದ ಅನಾರೋಗ್ಯದಿಂದ ಕಾಡುತ್ತಿದ್ದರಿಂದ ಕೆಲಸಕ್ಕೆ ಹೋಗದೆ ಮನೆಯಲ್ಲಿ ಇದ್ದರು. ಇಂದು ಮುಂಜಾನೆ ಶೌಚಾಲಯಕ್ಕೆ ಹೋದವರು ಹೃದಯಾಘಾತದಿಂದ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಮೃತರು ಅವಿವಾಹಿತರಾಗಿದ್ದು, ಸಹೋದರರಾದ ಬಾಲಕೃಷ್ಣ, ಪದ್ಮನಾಭ, ಸಹೋದರಿಯರಾದ ಶ್ರೀಮತಿ ಹೇಮಾವತಿ, ಶ್ರೀಮತಿ ವಿಶಾಲಾಕ್ಷಿ, ಶ್ರೀಮತಿ ಭುವನೇಶ್ವರಿ, ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ

LEAVE A REPLY

Please enter your comment!
Please enter your name here