ಹಿರೇಬಂಡಾಡಿ: ಶಿಷ್ಠಾಚಾರ ಉಲ್ಲಂಘಿಸಿ ಅಭಿವೃದ್ಧಿ ಕೆಲಸಗಳ ಶಂಕುಸ್ಥಾಪನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಶಾಸಕರ ಊರಿನ ಪಂಚಾಯಿತಿಯಲ್ಲಿ ದ್ವೇಷ ರಾಜಕೀಯ-ಆರೋಪ
  •  ಪಂಚಾಯಿತಿ ಉಪಾಧ್ಯಕ್ಷೆ ಸಹಿತ ನಾಲ್ವರು ಸದಸ್ಯರ ಕಡಗಣನೆ
  • ಅನುದಾನ ಹಂಚಿಕೆಯಲ್ಲಿ ತಾರತಮ್ಯ

ಉಪ್ಪಿನಂಗಡಿ: ಹಿರೇಬಂಡಾಡಿ ಗ್ರಾಮ ಪಂಚಾಯಿತಿಯಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಸಂದರ್ಭದಲ್ಲಿ ಶಿಷ್ಠಾಚಾರವನ್ನು ಉಲ್ಲಂಘಿಸಿ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಪಂಚಾಯಿತಿ ಉಪಾಧ್ಯಕ್ಷೆ ಭವಾನಿ ಮುರದಮೇಲು ಆಪಾದಿಸಿದ್ದಾರೆ.

 


ಅವರು ಜ.13ರಂದು ಉಪ್ಪಿನಂಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಜ.12ರಂದು ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಸಕರಿಂದ ಹಲವು ಅಭಿವೃದ್ಧಿ ಕೆಲಸಗಳಿಗೆ ಶಂಕುಸ್ಥಾಪನೆಯನ್ನು ನಡೆಸಲಾಗಿದೆ. ಅದರಲ್ಲೂ ನಾನು ಪ್ರತಿನಿಧಿಸಿದ 3ನೇ ವಾರ್ಡುನಲ್ಲಿಯೂ ನನ್ನ ಗಮನಕ್ಕೆ ತಾರದೆ ಶಂಕುಸ್ಥಾಪನೆ ನಡೆಸಲಾಗಿದೆ. ಎಸ್.ಟಿ. ಮೀಸಲು ಕ್ಷೇತ್ರದಿಂದ ಚುನಾಯಿತಳಾಗಿ ಉಪಾಧ್ಯಕ್ಷೆಯಾಗಿರುವ ನನ್ನನ್ನು ಕನಿಷ್ಠ ಶಿಷ್ಠಾಚಾರಕ್ಕಾದರೂ ಕರೆಯದೆ ಅವಮಾನ ಮಾಡಿದ್ದಾರೆ, ಪಂಚಾಯಿತಿಯಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಹೇಳುತ್ತಲೇ, ನನ್ನ ಸಹಿತ 4 ಮಂದಿ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಇಲ್ಲಿನ ಪಂಚಾಯಿತಿಯಲ್ಲಿ ಪ್ರತಿಯೊಂದು ವಿಚಾರದಲ್ಲೂ ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದರು.

ನಾನು ಪಂಚಾಯಿತಿ ಕಚೇರಿಗೆ ಹೋದಾಗಲೆಲ್ಲ ಪಂಚಾಯಿತಿಯ ಮಾಜಿ ಅಧ್ಯಕ್ಷ, ಹಾಲಿ ಸದಸ್ಯರೋರ್ವರು “ನೀವು ಕಾಂಗ್ರೆಸ್ ಬಿಟ್ಟು ನಮ್ಮ ಜೊತೆ ಬನ್ನಿ, ನಿಮಗೆ ಏನು ಸೌಲಭ್ಯ ಬೇಕಾದರೂ ತೆಗೆಸಿಕೊಡುತ್ತೇವೆ ಎಂದು ಹೇಳುತ್ತಿರುತ್ತಾರೆ, ನಾನು ಇದನ್ನು ನಿರಾಕರಿಸುತ್ತಲೇ ಬರುತ್ತಿದ್ದು, ಇದಕ್ಕಾಗಿ ಇವರುಗಳು ನನ್ನನ್ನು ಈ ರೀತಿಯಾಗಿ ಕಡೆಗಣಿಸಿ ಅವಮಾನಿಸುತ್ತಿದ್ದಾರೆ” ಎಂದು ಆಪಾದಿಸಿದರು.

ಪಂಚಾಯಿತಿ ಸದಸ್ಯ ಸತೀಶ್ ಶೆಟ್ಟಿ ಹೆನ್ನಾಳ ಮಾತನಾಡಿ ಹಿರೇಬಂಡಾಡಿ ಪಂಚಾಯಿತಿಯಲ್ಲಿ ಬಿಜೆಪಿಗೆ ಬಹುಮತ ಇದೆ, ಇದನ್ನು ರಾಜಕೀಯವಾಗಿ ಬಳಸಿಕೊಂಡು ಕಾಂಗ್ರೆಸ್ ಬೆಂಬಲಿತ ಸದಸ್ಯರುಗಳನ್ನು ಕಡೆಗಣಿಸುತ್ತಿದ್ದಾರೆ. ಅನುದಾನ ಹಂಚಿಕೆ ವಿಚಾರದಲ್ಲಿ ತಾರತಮ್ಯ, ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ಮಾಡುವುದಕ್ಕೂ ಅನುಮತಿ ನೀಡುತ್ತಿಲ್ಲ, ಒಟ್ಟಿನಲ್ಲಿ ಇಲ್ಲಿ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ. ಎಲ್ಲೂ ಇಲ್ಲದ ಈ ರೀತಿಯ ದ್ವೇಷದ ರಾಜಕೀಯ ಶಾಸಕರ ಊರಿನ ಪಂಚಾಯಿತಿಯಲ್ಲಿ ನಡೆಯುತ್ತಿರುವುದರ ಬಗ್ಗೆ ತೀರಾ ನೋವು ಉಂಟು ಮಾಡುತ್ತಿದೆ. ಅದಾಗ್ಯೂ ಪಿಡಿಒ. ಅವರು ಓರ್ವ ಅಧಿಕಾರಿಯಾಗಿದ್ದು, ಅವರು ಕೂಡಾ ಬಿಜೆಪಿ. ಸದಸ್ಯರುಗಳ ಅನತಿಯಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿದರು.

ಸದಸ್ಯೆ ಗೀತಾ ದಾಸರಮೂಲೆ ಮಾತನಾಡಿ ಪಂಚಾಯಿತಿಯಲ್ಲಿ ಯಾವುದೇ ಕ್ರಿಯಾ ಯೋಜನೆ ಮಾಡುವಾಗ ನಮ್ಮನ್ನು ಕರೆಯುವುದಿಲ್ಲ, ನಮ್ಮ ವಾರ್ಡುಗಳಿಗೆ ಅನುದಾನ ಇಡುವುದಿಲ್ಲ, ಹರಿನಗರ ರಸ್ತೆ ಸಂಪೂರ್ಣ ಕುಲಗೆಟ್ಟು ಹೋಗಿದೆ, ಆದರೆ ಆ ವಾರ್ಡು ನಾವುಗಳು ಪ್ರತಿನಿಧಿಸಿದ್ದು ಎಂಬ ಕಾರಣಕ್ಕಾಗಿ ಆ ಪ್ರದೇಶಗಳಿಗೆ ಅನುದಾನ ಇಡುತ್ತಿಲ್ಲ. ಈ ರೀತಿಯಾಗಿ ರಾಜಕೀಯ ಮಾಡುತ್ತಿದ್ದಾರೆ.

ಕಡು ಬಡತನದಲ್ಲಿರುವ ಎಸ್.ಸಿ. ಕುಟುಂಬವೊಂದು ಕಳೆದ 2 ವರ್ಷಗಳಿಂದ ಶೌಚಾಲಯದ ಬೇಡಿಕೆ ಸಲ್ಲಿಸುತ್ತಿದೆ, ಆದರೆ ಏನಾದರೂ ಕಾರಣ ಹೇಳಿ ಅವರು ಈ ತನಕ ಶೌಚಾಲಯ ಮಂಜೂರು ಮಾಡಿರುವುದಿಲ್ಲ. ಹೀಗೇ ಬೇರೆ ಬೇರೆ ರೀತಿಯಲ್ಲಿ ನಾವುಗಳು ಪ್ರತಿನಿಧಿಸಿದ ಕ್ಷೇತ್ರವನ್ನು, ಅಲ್ಲಿನ ಬೇಡಿಕೆಗಳನ್ನು ರಾಜಕೀಯ ಕಾರಣದಿಂದಾಗಿ ಕಡೆಗಣಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪಂಚಾಯಿತಿ ಸದಸ್ಯೆ ಸವಿತಾ ಹರೀಶ್, ವಲಯ ಕಾಂಗ್ರೆಸ್ ಅಧ್ಯಕ್ಷ ರವೀಂದ್ರ ಪಟಾರ್ತಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.