ಪಾಣಾಜೆ: ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಿಂದ ಶಂಕುಸ್ಥಾಪನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಪ್ರತೀ ಗ್ರಾಮದಲ್ಲಿ ಆಜಾದಿಕಾ ಅಮೃತಮಹೋತ್ಸವ ಸಂಭ್ರಮ – ಮಠಂದೂರು

ಬೆಟ್ಟಂಪಾಡಿ: ಪ್ರಧಾನಿಯವರ ಆಶಯದಂತೆ ಆಜಾದಿಕಾ ಅಮೃತ ಮಹೋತ್ಸವದ ಸಂಭ್ರಮ ದಿಲ್ಲಿಯಲ್ಲಿ ಮಾತ್ರವಲ್ಲದೇ ಪ್ರತೀ ಹಳ್ಳಿ ಗ್ರಾಮಗಳಲ್ಲಿಯೂ ವಿವಿಧ ಅಭಿವೃದ್ಧಿಗಳನ್ನು ಕಾಣುವ ಮೂಲಕ ಆಚರಿಸಲು ಉದ್ದೇಶ ಇರಿಸಿಕೊಳ್ಳಲಾಗಿದೆ. ಅದಕ್ಕಾಗಿ ಈಗಾಗಲೇ ಬೂತ್ ಮಟ್ಟದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದೇವೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

 


ಮುಖ್ಯಮಂತ್ರಿಯವರ ವಿಶೇಷ ಅನುದಾನದಡಿಯಲ್ಲಿ ಪಾಣಾಜೆ ಗ್ರಾಮದಲ್ಲಿ ೯೨.೯೫ ಲಕ್ಷ ರೂ. ಅನುದಾನದಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಯಡಿಯೂರಪ್ಪನವರ ಸರಕಾರದ ಸಮಯದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ೧೮ ಕೋಟಿ ರೂ. ಮಂಜೂರಾಗಿತ್ತು. ಪ್ರತೀ ಬೂತ್‌ಗೆ ೧೦ ಲಕ್ಷ ರೂ. ನಂತೆ ಅಭಿವೃದ್ಧಿ ಕಾಮಗಾರಿ ನಡೆಸಿ ೧ ತಿಂಗಳೊಳಗಾಗಿ ಲೋಕಾರ್ಪಣೆ ಮಾಡಲಿದ್ದೇವೆ. ಗ್ರಾಮಗಳಲ್ಲಿ ತಡೆಗೋಡೆ, ಕಿಂಡಿಅಣೆಕಟ್ಟು, ಸರಕಾರಿ ಶಾಲೆಗಳಿಗೆ ೫ ಲಕ್ಷ ರೂ., ಅಂಗನವಾಡಿ ಕೇಂದ್ರಕ್ಕೆ ಕುಡಿಯುವ ನೀರಿಗಾಗಿ ೪೦,೦೦೦ ಅನುದಾನದಲ್ಲಿ ಅಭಿವೃದ್ದಿ ಕಾಮಗಾರಿಗಳು ನಡೆಯಲಿವೆ ಎಂದು ಶಾಸಕರು ಹೇಳಿದರು.

ಕೀಲಂಪಾಡಿಯಲ್ಲಿ ಸ್ಥಳೀಯ ನಿವಾಸಿ, ಪಂಚಾಯತ್ ಮಾಜಿ ಸದಸ್ಯರೂ ಆದ ಚೋಮ ನಲಿಕೆಯವರು ಮಾತನಾಡಿ `೩೦ ವರ್ಷಗಳಷ್ಟು ಹಳೆಯದಾದ ರಸ್ತೆ ಇದಾಗಿದ್ದು, ಸಂಚಾರಕ್ಕೆ ತೀರಾ ಕಷ್ಟವಾಗುತ್ತಿತ್ತು. ಈಗ ಶಾಸಕರು ಈ ರಸ್ತೆ ಅಭಿವೃದ್ಧಿಗೆ ಅನುದಾನ ಕಲ್ಪಿಸಿರುವುದರಿಂದ ನಮಗೆಲ್ಲಾ ಸಂತೋಷವಾಗಿದೆ’ ಎಂದರು.

95.95 ಲಕ್ಷ ರೂ. ಅನುದಾನದ ಕಾಮಗಾರಿಗಳು
ತಲಾ ರೂ. 10 ಲಕ್ಷದಲ್ಲಿ ಪಾಣಾಜೆ-ಕೊಂದಲಕಾನ-ಒಡ್ಯ ರಸ್ತೆ ರಿಪೇರಿ, ಒಡ್ಯ ರಸ್ತೆ ಅಭಿವೃದ್ಧಿ, ಕಲ್ಲಪದವು ಕಂಚಿಲ್ಕುಂಜ ರಸ್ತೆ ಕಾಂಕ್ರಿಟೀಕರಣ, ಉಡ್ಡಂಗಳ – ಕೀಲಂಪಾಡಿ ರಸ್ತೆ ಕಾಂಕ್ರಿಟೀಕರಣ, ಬೇರಿಕೆ ರಣಮಂಗಲ ರಸ್ತೆ ಅಭಿವೃದ್ಧಿ, ಆರ್ಲಪದವು ಕಡಂದೇಲು ರಸ್ತೆ ಕಾಂಕ್ರಿಟೀಕರಣ, ನೆಲ್ಲಿತ್ತಿಮಾರು ಅಪಿನಿಮೂಲೆ ರಸ್ತೆ ಕಾಂಕ್ರಿಟೀಕರಣ, ತೂಂಬಡ್ಕ ಪಾಲ್ತಮೂಲೆ ರಸ್ತೆ ಕಾಂಕ್ರಿಟೀಕರಣ, ರೂ. 6.72ಲಕ್ಷದಲ್ಲಿ ಪರಿಶಿಷ್ಟ ಪಂಗಡ ಜನತಾ ಕಾಲನಿ ರಸ್ತೆ ಅಭಿವೃದ್ಧಿ ಮತ್ತು ರೂ. 6.23 ಲಕ್ಷದಲ್ಲಿ ಪರಿಶಿಷ್ಟ ಜಾತಿ ಜನತಾ ಕಾಲನಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಶಂಕುಸ್ಥಾಪನೆ ಮಾಡಿದರು.

ಶಾಸಕರ ಜೊತೆ ತಾ.ಪಂ. ಸ್ಥಾಯಿ ಸಮಿತಿ ನಿಕಟಪೂರ್ವ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ತಾ.ಪಂ. ಮಾಜಿ ಸದಸ್ಯೆ ಮೀನಾಕ್ಷಿ ಮಂಜುನಾಥ್, ಪಾಣಾಜೆ ಬಿಜೆಪಿ ಶಕ್ತಿ ಕೇಂದ್ರದ ಸಂಚಾಲಕ ಸದಾಶಿವ ರೈ ಸೂರಂಬೈಲು, ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಭಟ್, ಉಪಾಧ್ಯಕ್ಷ ಅಬೂಬಕ್ಕರ್, ಸದಸ್ಯರಾದ ಸುಭಾಸ್ ರೈ ಚಂಬರಕಟ್ಟ, ಮೋಹನ್ ನಾಯ್ಕ್, ಸುಲೋಚನಾ, ಜಯಶ್ರೀ ದೇವಸ್ಯ, ಕೃಷ್ಣಪ್ಪ ಪೂಜಾರಿ ಬೊಳ್ಳಿಂಬಳ, ನಾರಾಯಣ ನಾಯ್ಕ್ ಅಪಿನಿಮೂಲೆ, ವಿಮಲ, ಮೈಮೂನತ್ತುಲ್ಲಾ ನೆಹ್ರಾ, ಮಾಜಿ ಸದಸ್ಯರಾದ ಪುಷ್ಪಾವತಿ, ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರಾದ ನಾರಾಯಣ ಪೂಜಾರಿ ತೂಂಬಡ್ಕ, ಗಣಪತಿ ಬಲ್ಯಾಯ, ರಘುನಾಥ ಪಾಟಾಳಿ, ಒಡ್ಯ ಶಾಲಾ ಮುಖ್ಯಗುರು ಉಸ್ಮಾನ್, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಕೃಷ್ಣ ಭಟ್, ಪಾಣಾಜೆ ಪ್ರಾ.ಕೃ.ಪ.ಸಹಕಾರಿ ಸಂಘದ ನಿರ್ದೇಶಕರಾದ ರವಿಶಂಕರ ಶರ್ಮ ಬೊಳ್ಳುಕಲ್ಲು, ಗುಣಶ್ರೀ, ಗೀತಾ, ಸಂಜೀವ ಕೀಲಂಪಾಡಿ, ಮಾಜಿ ಉಪಾಧ್ಯಕ್ಷ ಜಾನು ನಾಯ್ಕ ಭರಣ್ಯ, ಪ್ರಮುಖರಾದ ಸದಾಶಿವ ಭಟ್ ಪಾಲ್ತಮೂಲೆ, ನಿವೃತ್ತ ಐಆರ್‌ಎಸ್ ಅಧಿಕಾರಿ ರಾಮ್‌ಕುಮಾರ್ ಮತ್ತಿತರರು ಪಾಲ್ಗೊಂಡರು. ಬಿಜೆಪಿ ತಾಲೂಕು ಕಾರ್ಯಕಾರಿಣಿ ಸದಸ್ಯ ರವೀಂದ್ರ ಭಂಡಾರಿ ಸ್ವಾಗತಿಸಿದರು.

 

ಒಂದು ತಿಂಗಳಲ್ಲಿ ಪ್ರತೀ ಬೂತ್‌ಗೆ 20 ಲಕ್ಷ ರೂ. ಅನುದಾನ
ಈಗಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ವಿಶೇಷ ಅನುದಾನದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 50 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ. ಮತ್ತೆ ಪ್ರತೀ ಬೂತ್‌ಗೆ ೨೦ ಲಕ್ಷ ರೂ. ಅನುದಾನ ಬರಲಿದೆ ಎಂದು ಶಾಸಕರು ಈ ವೇಳೆ ತಿಳಿಸಿದರು.

ಶೀಘ್ರದಲ್ಲಿ ಪಾಣಾಜೆ ಪ್ರಾ. ಆರೋಗ್ಯ ಕೇಂದ್ರಕ್ಕೆ ಪೂರ್ಣಕಾಲಿಕ ವೈದ್ಯಾಧಿಕಾರಿ ನೇಮಕ
ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪೂರ್ಣಕಾಲಿಕ ವೈದ್ಯಾಧಿಕಾರಿಯ ಕೊರತೆಯ ಬಗ್ಗೆ ಸುದ್ದಿ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಶಾಸಕರು `ಕೊರೊನಾ ಮತ್ತೆ ಮುಂದುವರಿಯುತ್ತಿರುವುದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮೂಲಭೂತ ಸೌಲಭ್ಯ ಮತ್ತು ಸೇವೆ ಬಗ್ಗೆ ಹೆಚ್ಚಿನ ಗಮನಹರಿಸಲಾಗುತ್ತಿದೆ. ಉನ್ನತ ಶಿಕ್ಷಣ ಹಾಗೂ ಇತರ ಕಾರಣಾಂತರಗಳಿಂದ ವೈದ್ಯರುಗಳು ವರ್ಗಾವಣೆ ಪಡೆದುಕೊಳ್ಳುತ್ತಿರುವುದರಿಂದ ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪೂರ್ಣಕಾಲಿಕ ವೈದ್ಯಾಧಿಕಾರಿಯ ಕೊರತೆ ಕಾಣುತ್ತಿದೆ. ಈ ಬಗ್ಗೆ ಈಗಾಗಲೇ ಡಿಎಚ್‌ಒ ಗೆ ತಿಳಿಸಲಾಗಿದ್ದು, ಶೀಘ್ರದಲ್ಲಿ ಪೂರ್ಣಕಾಲಿಕ ವೈದ್ಯರ ನೇಮಕ ಮಾಡಲು ಸರಕಾರ ಕ್ರಮ ಕೈಗೊಳ್ಳಲಿದೆ ಎಂದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.