ಕಾವು: ತುಡರ್ ಯುವಕ ಮಂಡಲದಿಂದ ರಾಷ್ಟ್ರೀಯ ಯುವ ಸಪ್ತಾಹದ 2ನೇ ಕಾರ್ಯಕ್ರಮವಾಗಿ ಉಚಿತ ದಂತ ಚಿಕಿತ್ಸಾ ಶಿಬಿರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 


ಕಾವು: ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್ ಯುವಕ ಮಂಡಲದ ನೇತೃತ್ವದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಪ್ರಯುಕ್ತ ಏಳು ದಿನಗಳ ಕಾಲ ಹಮ್ಮಿಕೊಂಡಿರುವ ರಾಷ್ಟ್ರೀಯ ಯುವ ಸಪ್ತಾಹದ ೨ನೇ ಕಾರ್ಯಕ್ರಮದಂಗವಾಗಿ ಮಾಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘ ನಿ. ಕಾವು ಮತ್ತು ಕೆ.ವಿ.ಜಿ ದಂತ ಮಹಾವಿದ್ಯಾಲಯ ಸುಳ್ಯ ಇವರ ಸಹಯೋಗದೊಂದಿಗೆ ಜ.೧೩ರಂದು ಬೆಳಿಗ್ಗೆ ಕಾವು ಸಹಕಾರ ಸಂಘದ ಶಿವಸದನ ಸಭಾಭವನದಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ ನಡೆಯಿತು.

ನಂಬಿಕೆ, ವಿಶ್ವಾಸದಿಂದ ಯಶಸ್ಸು ಸಾಧ್ಯ-ಕೃಷ್ಣಪ್ರಸಾದ್ ಕೊಚ್ಚಿ
ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮಾಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೃಷ್ಣಪ್ರಸಾದ್ ಕೊಚ್ಚಿರವರು ಮಾತನಾಡಿ ತುಡರ್ ಯುವಕ ಮಂಡಲವು ಕಳೆದ ೧೦ ವರ್ಷದಿಂದ ಈ ಭಾಗದಲ್ಲಿ ನಿರಂತರ ಸಮಾಜಮುಖಿ ಕಾರ್ಯಗಳನ್ನು ಮಾಡುವುದರ ಜತೆಗೆ ಈ ಭಾಗದ ಎಲ್ಲ ಜನರ ಪ್ರೀತಿ, ವಿಶ್ವಾಸ, ನಂಬಿಕೆಯನ್ನು ಉಳಿಸಿಕೊಂಡಿರುವುದರಿಂದ ಯಶಸ್ಸು ಪಡೆಯಲು ಸಾಧ್ಯವಾಗಿದೆ, ಯುವ ಸಪ್ತಾಹದ ಎಲ್ಲಾ ಕಾರ್ಯಕ್ರಮಗಳು ಜನರಿಗೆ ಅನುಕೂಲವಾಗಿ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.

ಸಪ್ತಾಹದಿಂದ ಆರೋಗ್ಯ ಭಾಗ್ಯ ಮನೆ ಬಾಗಿಲಿಗೆ-ಡಾ. ಹೇಮಂತ್ ಬಟ್ಟೂರು
ಶಿಬಿರದ ಬಗ್ಗೆ ಮಾಹಿತಿ ನೀಡಿದ ಕೆವಿಜಿ ದಂತ ಮಹಾವಿದ್ಯಾಲಯದ ಉಪನ್ಯಾಸಕ ಡಾ. ಹೇಮಂತ್ ಬಟ್ಟೂರುರವರು ಮಾತನಾಡಿ ತುಡರ್ ಯುವ ಸಂಸ್ಥೆ ಹಮ್ಮಿಕೊಂಡಿರುವ ಯುವ ಸಪ್ತಾಹದಿಂದಾಗಿ ಗ್ರಾಮೀಣ ಜನರ ಮನೆಬಾಗಿಲಿಗೆ ಆರೋಗ್ಯ ಸೇವೆ ಸಿಕ್ಕಿದಂತಾಗಿದೆ, ಇಂತಹ ಸಪ್ತಾಹ ಕಾರ್ಯಕ್ರಮ ಪ್ರತಿ ವರ್ಷವೂ ನಡೆಯಲಿ ಎಂದು ಹೇಳಿದರು.

ಯುವ ನಾಯಕತ್ವಕ್ಕೆ ವಿವೇಕಾನಂದರ ಜೀವನ ಆದರ್ಶ-ಲೋಕೇಶ್ ಚಾಕೋಟೆ
ಮುಖ್ಯ ಅತಿಥಿಯಾಗಿದ್ದ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಲೋಕೇಶ್ ಚಾಕೋಟೆಯವರು ಮಾತನಾಡಿ ಯುವ ನಾಯಕತ್ವಕ್ಕೆ ಸ್ವಾಮಿ ವಿವೇಕಾನಂದರ ಜೀವನವೇ ಆದರ್ಶವಾಗಿದೆ, ಹಾಗಾಗಿ ವಿವೇಕಾನಂದರ ಜನ್ಮದಿನಾಚರಣೆಯಂಗವಾಗಿ ತುಡರ್ ಯುವ ಸಂಸ್ಥೆಯು ಯುವ ಸಪ್ತಾಹದಲ್ಲಿ ಹಮ್ಮಿಕೊಂಡಿರುವ ಎಲ್ಲಾ ಕಾರ್ಯಕ್ರಮಗಳು ಸಮಾಜಕ್ಕೆ ಅಗತ್ಯವಾಗಿದೆ, ದಂತ ಚಿಕಿತ್ಸಾ ಶಿಬಿರದ ಮೂಲಕ ಜನರ ಹಲ್ಲಿನ ಸಮಸ್ಯೆ ತಿಳಿಯಲು, ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳಲು ಪೂರಕವಾಗಿದೆ ಎಂದು ಹೇಳಿದರು.

ಸಮಾಜಸೇವೆಯ ಯುವಕರಿಂದ ಊರಿನ ಅಭಿವೃದ್ಧಿ-ದಿವ್ಯನಾಥ ಶೆಟ್ಟಿ
ಮುಖ್ಯ ಅತಿಥಿಯಾಗಿದ್ದ ಅರಿಯಡ್ಕ ಗ್ರಾ.ಪಂ ಸದಸ್ಯ ಕಾವು ದಿವ್ಯನಾಥ ಶೆಟ್ಟಿಯವರು ಮಾತನಾಡಿ ಒಂದು ಊರಿನಲ್ಲಿ ಸಮಾಜ ಸೇವೆಯ ಯುವಕರು ಬೆಳೆದು ಬಂದಾಗ ಆ ಊರಿನಲ್ಲಿ ಅಭಿವೃದ್ಧಿ ಸಾಧ್ಯವಿದೆ ಎಂದು ತುಡರ್ ಯುವಕ ಮಂಡಲದ ಯುವಕರು ಸಾಧಿಸಿ ತೋರಿಸಿದ್ದಾರೆ ಎಂದು ಹೇಳಿದರು.

ಬಡಜನರ ಸೇವೆಗೆ ಶಿಬಿರ ಪೂರಕ-ಜಯಂತ ತಳೂರು
ಕೆವಿಜಿ ದಂತ ಮಹಾವಿದ್ಯಾಲಯದ ಶಿಬಿರದ ಸಂಯೋಜಕ ಜಯಂತ ತಳೂರು ಮಾತನಾಡಿ ಗ್ರಾಮೀಣ ಭಾಗದಲ್ಲಿ ಬಡಜನರ ಆರೋಗ್ಯ ಸೇವೆ ಮಾಡಲು ಇಂತಹ ಶಿಬಿರಗಳು ಪೂರಕವಾಗಿದೆ ಎಂದು ಹೇಳಿದರು.

ಕಾವು ತುಡರ್ ಯುವಕ ಮಂಡಲದ ಉಪಾಧ್ಯಕ್ಷ ಶ್ರೀಕುಮಾರ್ ಬಲ್ಯಾಯ ಸಭಾಧ್ಯಕ್ಷತೆ ವಹಿಸಿ ವಂದಿಸಿದರು. ತುಡರ್ ಯುವಕ ಮಂಡಲದ ಸದಸ್ಯ, ಕಾರ್ಯಕ್ರಮ ಸಂಯೋಜಕ ಶ್ರೀಕಾಂತ್ ಗೌಡ ಸ್ವಾಗತಿಸಿದರು. ಸದಸ್ಯ ದಿವ್ಯಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು. ಸದಸ್ಯರುಗಳು ಸಹಕರಿಸಿದರು. ಶಿಬಿರದಲ್ಲಿ ಹಲ್ಲಿನ ತಪಾಸಣೆ, ಸ್ವಚ್ಛತೆ, ಹುಳುಕು, ಅಲುಗಾಡುವ ಹಲ್ಲುಗಳ ಕೀಳುವಿಕೆ, ಹಲ್ಲುಗಳ ಫಿಲ್ಲಿಂಗ್ ಉಚಿತವಾಗಿ ನಡೆಸಲಾಯಿತು. ಶಿಬಿರದಲ್ಲಿ ಸುಮಾರು ೧೦೦ಕ್ಕೂ ಅಧಿಕ ಜನ ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದುಕೊಂಡರು.

ಇಂದು ಸಪ್ತಾಹದಲ್ಲಿ
ರಾಷ್ಟ್ರೀಯ ಯುವ ಸಪ್ತಾಹದ ಮೂರನೇ ದಿನವಾದ ಜ.೧೪ರಂದು ಬೆಳಿಗ್ಗೆ ಗಂಟೆ ೧೦ ರಿಂದ ಮಧ್ಯಾಹ್ನ ೧ ರವರೆಗೆ ನನ್ಯ ಜನಮಂಗಲ ಸಭಾಭವನದಲ್ಲಿ ಕುಟುಂಬ ಮಿಲನ ಕಾರ್ಯಕ್ರಮ ನಡೆಯಲಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗದ ಕುಟುಂಬ ಪ್ರಭೋಧನ್ ಸಂಯೋಜಕ ಗಜಾನನ ಪೈಯವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.