ನರೇಂದ್ರ ಪ.ಪೂ.ಕಾಲೇಜಿನಲ್ಲಿ ಮಕರ ಸಂಕ್ರಾಂತಿ ಹಬ್ಬದ ಆಚರಣೆಯ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು:  ಮಕರ ಸಂಕ್ರಾಂತಿಯಂದು ವಿಶೇಷ ಪೂಜಾ ಕೈಂಕರ್ಯಗಳ ಮೂಲಕ ಆರಾಧಿಸುವ ವ್ರತವಾಗಿದ್ದು, ಇದು ದೇಹ,ಮನಸ್ಸು ಮತ್ತು ಆತ್ಮಕ್ಕೆ ಶಕ್ತಿಯನ್ನು ನೀಡುತ್ತದೆ.ಹಿಂದೂ ಪುರಾಣಗಳ ಪ್ರಕಾರ ಈ ಹಬ್ಬವು ಸೂರ್ಯ ದೇವನ ಆರಾಧನೆಯ ದಿನವಾಗಿದೆ.ಸೂರ್ಯ ನಮಗೆ ಬೆಳಕನ್ನು ನೀಡುವುದಲ್ಲದೆ,ಬದುಕನ್ನು ನೀಡುವನು ಮತ್ತು ಜ್ಞಾನದ ಸಂಕೇತವಾದ ಸೂರ್ಯನು ಜಗತ್ತಿನ ಅಂಧಕಾರವನ್ನು ಹೋಗಲಾಡಿಸುವನು.ಆತನಿಲ್ಲದೆ ಜಗತ್ತಿನ ಸಕಲ ಚಟುವಟಿಕೆಗಳೂ ನಿಂತು ಹೋಗುತ್ತದೆ.

ಈ ಹಬ್ಬವು ಧಾರ್ಮಿಕ ಮತ್ತು ವೈಜ್ಞಾನಿಕ ದೃಷ್ಟಿಕೋನದಿಂದ ತನ್ನ ಪ್ರಾಮುಖ್ಯತೆಯನ್ನು ಹೊಂದಿದೆ.ಇತರರನ್ನು ಗೌರವಿಸುವ ಮತ್ತು ಶಾಂತಿ ,ಸೌಹಾರ್ದತೆಯಿಂದ ಬದುಕುವ ,ಸಮಾಜದಲ್ಲಿ ಸಹೋದರತ್ವದ ಸ್ಪೂರ್ತಿಯನ್ನು ವೃದ್ಧಿಸುವ ಮತ್ತು ಎಲ್ಲರ ಮನದಲ್ಲೂ ವಿಕಾಸದ ಬೆಳಕನ್ನು ಮೂಡಿಸುವ ಗುರಿಯನ್ನು ಹೊಂದಿದೆ. ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಸಾರ್ವಜನಿಕ ಸಂಪರ್ಕ ಅಧಿಕಾರಿಯಾದ ವೆಂಕಟೇಶ ಮುದೂರು ಇವರು ಹೇಳಿದರು.

ನರೇಂದ್ರ ಪ.ಪೂ,ಕಾಲೇಜಿನಲ್ಲಿ ಆಯೋಜಿಸಿದ ಮಕರ ಸಂಕ್ರಾಂತಿಯ ಆಚರಣೆಯ ಮಹತ್ವ ಇದರ ಬಗೆಗಿನ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಕರಾತ್ಮಕ ಯೋಚನೆಗಳನ್ನು ಪ್ರೇರೇಪಿಸುವ ,ಪ್ರಕೃತಿಯೊಂದಿಗೆ ಜೋಡಿಸುವ ಈ ಹಬ್ಬದ ಆಚರಣೆಯ ಮೂಲಕ ರಾಷ್ಟ್ರಪ್ರೇಮದ ಚೈತನ್ಯವನ್ನು ವಿದ್ಯಾರ್ಥಿಗಳಲ್ಲಿ ಉದ್ದೀಪನಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರಾದ ಶ್ರೀಮತಿ ಪುಷ್ಪಲತಾ ಅವರು ಮಾತನಾಡಿ ಈ ಹಬ್ಬವು ಸಂತೋಷ,ಸಂಪತ್ತು ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗಿದೆ. ಈ ಆಚರಣೆ ಎಳ್ಳು ಬೆಲ್ಲವನ್ನು ಹಂಚುವ ಮೂಲಕ ಜೀವನದ ಎಲ್ಲಾ ಕಹಿಗಳನ್ನು ಮರೆತು ಸಿಹಿಯಾದ ಮಾತುಗಳ ಮೂಲಕ ಬಾಂಧವ್ಯವನ್ನು ವೃದ್ಧಿಸುವಲ್ಲಿ ಯಶಸ್ವಿಯಾಗಿದೆ. ಈ ಹಬ್ಬವು ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ,ನವಚೈತನ್ಯ,ನೆಮ್ಮದಿಯ ಬಾಳನ್ನು ಕರುಣಿಸಲಿ ಎಂದು ಶುಭಹಾರೈಸಿದರು.

ವೇದಿಕೆಯಲ್ಲಿ ನರೇಂದ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಸಂಸ್ಕೃತ ಭಾಷಾ ಉಪನ್ಯಾಸಕರಾದ ವಿಘ್ನೇಶ ವೈ. ಇವರು ಸ್ವಾಗತಿಸಿ,ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.