ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಕರ ಜ್ಯೋತಿ ಉತ್ಸವ, ಭಜನಾ ಮಹೋತ್ಸವ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಕರ ಜ್ಯೋತಿ ಉತ್ಸವ, ಭಜನಾ ಮಹೋತ್ಸವ ಜ.14ರಂದು ನಡೆಯಿತು. ಪ್ರಾತ:ಕಾಲ ದೇವಸ್ಥಾನದ ಪ್ರಧಾನ ಅರ್ಚಕ ಸುರೇಶ್ ಮುಚ್ಚಿಂತಾಯರಿಂದ ಶ್ರೀ ಅಯ್ಯಪ್ಪ ಸ್ವಾಮಿ ದೇವರಿಗೆ ಉಷಾ ಪೂಜೆ ನಂತರ ಶ್ರೀಧರ ನೂಜಿನ್ನಾಯರ ನೇತೃತ್ವದಲ್ಲಿ ಮಕರ ಸಂಕ್ರಾಂತಿಯ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಬಳಿಕ ಶ್ರೀ ಮಹಾಗಣಪತಿ ಹೋಮ, ಸೀಯಾಳಾಭಿಷೇಕ, ಪುಷ್ಪಾಭಿಷೇಕ, ಅಶ್ವಥ ಕಟ್ಟೆಯಲ್ಲಿ ಅಶ್ವತ್ಥ ಪೂಜೆ ನಡೆಯಿತು. ಮಧ್ಯಾಹ್ನ ಮಹಾರಂಗಪೂಜೆ, ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು.

ಹುಲಿ ವಿಗ್ರಹ ಕೊಡುಗೆ:
ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಸುಮಾರು ೫೦ ಸಾವಿರ ರೂ.,ವೆಚ್ಚದಲ್ಲಿ ಹುಲಿಯ ಎರಡು ವಿಗ್ರಹಗಳನ್ನು ಕೊಡುಗೆಯಾಗಿ ನೀಡಲಾಗಿದೆ. ಸಾಹಿತಿ ಅಗ್ರಾಳ ನಾರಾಯಣ ರೈ, ಜಯಾನಂದ ಬಂಟ್ರಿಯಾಲ್, ರತ್ನಾಕರ ಶೆಟ್ಟಿ ಕೊಲ್ಯೊಟ್ಟು ಅಶ್ವಮೇಧ, ಪುರುಷೋತ್ತಮ ಶೆಟ್ಟಿ ಕೊಲ್ಯೊಟ್ಟುರವರ ನೇತೃತ್ವದಲ್ಲಿ ಹುಲಿಯ ವಿಗ್ರಹ ಕೊಡುಗೆಯಾಗಿ ನೀಡಲಾಯಿತು. ವಿಗ್ರಹದ ಪೀಠಕ್ಕೆ ದೇವಸ್ಥಾನದ ಆಡಳಿತ ಸಮಿತಿ ಮಾಜಿ ಅಧ್ಯಕ್ಷ ಟಿ.ಕೆ.ಶಿವದಾಸನ್‌ರವರು ಟೈಲ್ಸ್ ಅಳವಡಿಸಿ ಸಹಕರಿಸಿದರು.

ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಡಾ.ಸದಾನಂದ ಕುಂದರ್, ಪ್ರಧಾನ ಕಾರ್ಯದರ್ಶಿ ರಾಕೇಶ್ ಯಸ್.ಗೌಡ, ಕೋಶಾಧಿಕಾರಿ ರವಿಚಂದ್ರ ಹೊಸವಕ್ಲು, ಜೊತೆ ಕಾರ್ಯದರ್ಶಿ ದಯಾನಂದ ಕೆ.ಆದರ್ಶ, ಸದಸ್ಯರುಗಳಾದ ಚಂದ್ರಶೇಖರ ಬಾಣಜಾಲು, ಗಣೇಶ್ ಪೂಜಾರಿ ಪೊಸೋಳಿಗೆ, ರತ್ನಾಕರ ಶೆಟ್ಟಿ ಕೊಲ್ಯೊಟ್ಟು, ಪುರುಷೋತ್ತಮ ಶೆಟ್ಟಿ ಕೊಲ್ಯೊಟ್ಟು, ನಾರಾಯಣ ಶೆಟ್ಟಿ ಪಟ್ಟೆಜಾಲು, ಸಂತೋಷ್ ಕೊಲ್ಯೊಟ್ಟು, ಲೋಕೇಶ್ ಕೊಲ್ಯೊಟ್ಟು, ಕೃಷ್ಣಪ್ಪ ನಿಡ್ಡೋಡಿ, ಪರಮೇಶ್ವರ, ರಮೇಶ್ ಶೆಟ್ಟಿ ಬೀದಿಮನೆ, ಅಣ್ಣಿ ಎಲ್ತಿಮಾರ್, ನಾರಾಯಣ ರೈ ಅಗ್ರಾಳ, ರಘುನಾಥ ಕೆ., ಜಯರಾಮ ಶೆಟ್ಟಿ ಗೌರಿಜಾಲು, ಗೌರವ ಸಲಹೆಗಾರರಾದ ಟಿ.ಕೆ.ಶಿವದಾಸನ್, ಸುಧೀರ್ ಕುಮಾರ್ ಕೆ.ಎಸ್., ಬಾಲಕೃಷ್ಣ ಬಾಣಜಾಲು, ಭಜನಾ ಸಮಿತಿ ಅಧ್ಯಕ್ಷ ಜನಾರ್ದನ ಹೆಗ್ಡೆ, ಕಾರ್ಯದರ್ಶಿ ರಮೇಶ್ ಶೆಟ್ಟಿ ಪರಂತಮೂಲೆ, ಉಪಾಧ್ಯಕ್ಷರಾದ ಪುರುಷೋತ್ತಮ ಆಚಾರ್ಯ, ಶ್ರೀನಿವಾಸ ಆಚಾರ್ಯ, ಜೊತೆ ಕಾರ್ಯದರ್ಶಿ ರಕ್ಷಿತ್ ಮತ್ತಿತರರು ಉಪಸ್ಥಿತರಿದ್ದರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.