ಅನಾರೋಗ್ಯ ಪೀಡಿತ ಬಿಕ್ಷುಕರೊಬ್ಬರನ್ನು ಚಿಕಿತ್ಸೆಗಾಗಿ ಮಂಗಳೂರು ಸೇವಾಶ್ರಮಕ್ಕೆ ಕಳುಹಿಸಿಕೊಟ್ಟ ನಗರಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಮುಖ್ಯರಸ್ತೆ ಮಾಯಿದೆ ದೇವುಸ್ ಚರ್ಚ್ ಬಳಿ ಫೂಟ್ ಪಾತ್ ನಲ್ಲಿದ್ದ ಅನಾರೋಗ್ಯ ಪೀಡಿತ ಬಿಕ್ಷುಕರೊಬ್ಬರನ್ನು ಚಿಕಿತ್ಸೆಗಾಗಿ ಮಂಗಳೂರು ಪಚ್ಚನಾಡಿ ಸೇವಾಶ್ರಮಕ್ಕೆ ಜ.14ರಂದು ನಗರಸಭೆ ನೇತೃತ್ವದಲ್ಲಿ ಮಂಗಳೂರು ಎಪಿಡಿ ಸದಸ್ಯರ ಸಹಕಾರದೊಂದಿಗೆ ಕಳುಹಿಸಿಕೊಡಲಾಯಿತು.


ಅನಾರೋಗ್ಯ ಪೀಡಿತ ಹಾಸನ ಮೂಲದ ಗೋಪಾಲ ಅವರು ಹಲವಾರು ವರ್ಷಗಳಿಂದ ಪುತ್ತೂರು ಪೇಟೆಯಲ್ಲಿ ಬಿಕ್ಷೆ ಬೇಡುತ್ತಿದ್ದರು. ಇತ್ತೀಚೆಗೆ ಕಾಲು ನೋವಿನಿಂದ ಬಳಲುತ್ತಿದ್ದ ಗೋಪಾಲ ಅವರು ಚರ್ಚ್ ಸಮೀಪ ಫೂಟ್ ಪಾತ್ ನಲ್ಲಿದ್ದರು. ಇದನ್ನು ಗಮನಿಸಿದ ನಗರಸಭೆ ಅವರ ಆರೈಕೆಗಾಗಿ ಸೇವಾಶ್ರಮಕ್ಕೆ ಸೇರಿಸಿದರು. ಎಪಿಡಿ ಸದಸ್ಯರಾದ ಭವ್ಯ, ಲವಿನ್ ಮತ್ತು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ, ಪೌರಕಾರ್ಮಿಕ ಸಿಬ್ಬಂದಿಗಳಾದ ರಾಧಾಕೃಷ್ಣ, ನಾಗೇಶ್, ಚಿದಾನಂದ ಅವರು ಗೋಪಾಲ ಅವರನ್ನು ಸೇವಾಶ್ರಮಕ್ಕೆ ಸೇರಿಸುವಲ್ಲಿ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.