ಕೆ.ವಿ.ಜಿ. ಐ.ಟಿ.ಐ ಭಾಗಮಂಡಲದ ಪ್ರಾಂಶುಪಾಲರಿಗೆ ಮತ್ತು ಸಿಬ್ಬಂದಿಗಳಿಗೆ ಅಭಿನಂದನೆ

0

ಕಾಲೇಜಿಗೆ ಲ್ಯಾಪ್‌ಟಾಪ್‌ ಕೊಡುಗೆ

ಸುಳ್ಯದ ಅಕಾಡೆಮಿಆಫ್ ಲಿಬರಲ್‌ಎಜ್ಯುಕೇಶನ್‌ಇದರ ಪ್ರಧಾನ ಕಾರ್ಯದರ್ಶಿಗಳಾದ ಡಾ. ರೇಣುಕಾ ಪ್ರಸಾದ್ ಕೆ.ವಿ.ಯವರ ಆಡಳಿತದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆ.ವಿ.ಜಿಐ.ಟಿ.ಐ ಭಾಗಮಂಡಲದಲ್ಲಿ ಪ್ರಸ್ತುತ 2022-23ನೇ ಸಾಲಿಗೆ ಶೇಕಡಾ 100 ಪ್ರವೇಶಾತಿ ಮಾಡಿರುವುದಕ್ಕಾಗಿಆಡಳಿತ ಮಂಡಳಿಯ ಪರವಾಗಿಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಡಾ. ಉಜ್ವಲ್‌ಊರುಬೈಲುರವರುಪ್ರಾಂಶುಪಾಲರಾದ ಶ್ರೀಕಾಂತ್ ಕುಡೆಕಲ್ಲುರವರನ್ನುಶಾಲು ಹೊದಿಸಿ ಸನ್ಮಾನಿಸಿ, ಸಿಬ್ಬಂದಿ ವರ್ಗದವರನ್ನು ಪ್ರಶಂಸಿಸಿದರು. ಈ ಸಂದರ್ಭದಲ್ಲಿಕಾಲೇಜಿಗೆಆಡಳಿತ ಮಂಡಳಿಯ ಪರವಾಗಿಲ್ಯಾಪ್‌ಟಾಪ್‌ನ್ನುಕೊಡುಗೆಯಾಗಿ ನೀಡಿದರು.


ಕಾಲೇಜಿನಎಲ್ಲಾ ಸೀಟುಗಳು ಭರ್ತಿಯಾಗಲು ಸಹಕರಿಸಿದ ಪ್ರಾಂಶುಪಾಲರು, ಬೋಧಕ ಮತ್ತು ಭೋಧಕೇತರ ಸಿಬ್ಬಂದಿಗಳನ್ನು ಅಭಿನಂದಿಸಲಾಯಿತು. ನಂತರಸಭೆ ನಡೆಸಿ ಕಾಲೇಜಿನ ಏಳಿಗೆ ಹಾಗೂ ಮುಂದಿನ ಬೆಳವಣಿಗೆ ಮತ್ತು ವಿದ್ಯಾರ್ಥಿಗಳ ಸರ್ವಾಂಗೀಣಅಭಿವೃದ್ಧಿಯ ಬಗ್ಗೆ ಚರ್ಚಿಸಲಾಯಿತು. ಮುಂದಿನ ದಿನಗಳಲ್ಲಿಕಾಲೇಜಿನ ವಿದ್ಯಾರ್ಥಿಗಳಿಗೆ ಕಲ್ಪಿಸಬಹುದಾಗಗರಿಷ್ಟ ಸೌಲಭ್ಯಗಳ ಬಗ್ಗೆ ಮುಖ್ಯಕಾರ್ಯನಿರ್ವಹಣಾಧಿಕಾರಿಯುವರು ಸಲಹೆ ಸೂಚನೆಗಳನ್ನು ನೀಡಿದರು.


ಈ ಸಂಧರ್ಭದಲ್ಲಿಕಾಲೇಜಿನ ಪ್ರಾಂಶುಪಾಲರಾದ ಶ್ರೀಕಾಂತ್ ಕುಡೆಕಲ್ಲು, ಎ.ಓ.ಎಲ್.ಇಕಛೇರಿ ಆಡಳಿತಧಿಕಾರಿ ಪ್ರಸನ್ನಕಲ್ಲಾಜೆ, ಕೆ.ವಿ.ಜಿಇಂಜಿನಿಯರಿಂಗ್‌ಕಾಲೇಜಿನ ಉಪನ್ಯಾಸಕರುಗಳಾದ ಲೋಕೇಶ್, ಪ್ರಶಾಂತ್‌ಕಕ್ಕಾಜೆ, ಸತ್ಯಜಿತ್ ಮತ್ತು ಸಂಸ್ಥೆಯಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here