ವಿವೇಕಾನಂದ ಕ.ಮಾ.ಶಾಲೆಯಲ್ಲಿ ಮಕರ ಸಂಕ್ರಾಂತಿ ಆಚರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಮಕರ ಸಂಕ್ರಾಂತಿ ಆಚರಿಸಲಾಯಿತು. ಸೂರ್ಯನ ಬೆಳಗ್ಗಿನ ಪ್ರಶಾಂತ ಕಿರಣಗಳಿಗೆ ಮೈ ಒಡ್ಡುವ ಸಲುವಾಗಿ ಪೂರ್ವ ಪ್ರಾಥಮಿಕದಿಂದ 10ನೇ ತರಗತಿಯ ಮಕ್ಕಳು ಹಾಗೂ ಶಿಕ್ಷಕರು ಶಾಲಾ ಮೈದಾನದಲ್ಲಿ ಬರಿಗಾಲ ನಡುಗೆಯಲ್ಲಿ ಪಾಲುಗೊಂಡರು. ಅನಂತರ 9ನೇ ತರಗತಿಯ ಎಲ್ಲಾ ಮಕ್ಕಳನ್ನು 22 ಗುಂಪುಗಳನ್ನಾಗಿ ಮಾಡಿ ಪೂರ್ವ ಪ್ರಾಥಮಿಕದಿಂದ 10ನೇ ತರಗತಿಯವರೆಗೆ ಈ ಗುಂಪುಗಳನ್ನು ಕಳುಹಿಸಲಾಯಿತು. ಆಯಾಯ ಗುಂಪಿನ ಮಕ್ಕಳು ಎಳ್ಳು, ಬೆಲ್ಲ, ನೆಲಕಡಲೆ, ಕೊಬ್ಬರಿಯ ಪಾಕವನ್ನು ತರಗತಿಯ ಎಲ್ಲಾ ಮಕ್ಕಳಿಗೆ ಹಂಚಿ ಮಕರ ಸಂಕ್ರಾಂತಿಯ ಮಹತ್ವ ತಿಳಿಸಿದರು.


ಶಾಲಾ ಶಿಕ್ಷಕರ ತಂಡ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪುತ್ತೂರಿನ ಜೀವ ವಿಮಾ ನಿಗಮ ಆಫೀಸಿಗೆ ಭೇಟಿ ನೀಡಿ ಎಳ್ಳು – ಬೆಲ್ಲ ಹಂಚಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.